Advertisement
32 ನೇ ದಿನದ ಯಾತ್ರೆಯಲ್ಲಿ,ನಿರುದ್ಯೋಗ ಮತ್ತು ಕೋಮು ವಿಭಜನೆಯ ವಿರುದ್ಧ ಬ್ಯಾನರ್ ಹಿಡಿದ ಯುವಕ, ಯುವತಿಯರ ತಂಡ ಭಾನುವಾರ ”ಭಾರತ್ ಜೋಡೋ’ ಯಾತ್ರೆಯಲ್ಲಿ ಸೇರಿಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
Related Articles
Advertisement
“ನಾವು ಯುವಕರನ್ನು ದಾರಿ ತಪ್ಪದಂತೆ ಉಳಿಸಬೇಕು, ಅವರಿಗೆ ಉತ್ತಮ ನಾಳೆಯನ್ನು ಸೃಷ್ಟಿಸಬೇಕು, ಉತ್ತಮ ಶಿಕ್ಷಣ ಮತ್ತು ಉದ್ಯೋಗವನ್ನು ನೀಡಬೇಕು” ಎಂದರು.
ತಮ್ಮ ಸಂವಾದದ ಚಿತ್ರವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡ ರಾಹುಲ್ ಗಾಂಧಿ, ”ನಮ್ಮ ಪ್ರೀತಿಯ ಭಾರತದಲ್ಲಿ ದ್ವೇಷಕ್ಕೆ ಅವಕಾಶವಿಲ್ಲ ಎಂದು ಈ ಯುವಕರು ಹೇಳುತ್ತಿದ್ದಾರೆ. ದೇಶದ ಜನರು ದ್ವೇಷದ ವಿರುದ್ಧ ಏಕೆ ಧ್ವನಿ ಎತ್ತುತ್ತಿದ್ದಾರೆ? ಅದು ನಿಮಗೆಲ್ಲರಿಗೂ ಗೊತ್ತು” ಎಂದು ಬರೆದಿದ್ದಾರೆ.
”ಕೆಲವು ವರ್ಷಗಳ ಹಿಂದೆ, ದೇಶದಲ್ಲಿ ಇಂದು ಇರುವಂತಹ ವಾತಾವರಣ ಇರಲಿಲ್ಲ.ಮೊದಲು ಸಹೋದರತ್ವವಿತ್ತು, ಪರಸ್ಪರ ಪ್ರೀತಿ ಇತ್ತು, ಆದರೆ ಇಂದು ಹಾಗಿಲ್ಲ. ಮತ್ತು ಇದು ‘ಭಾರತ್ ಜೋಡೋ’ ಯಾತ್ರೆಗೆ ಒಂದು ದೊಡ್ಡ ಕಾರಣ” ಎಂದು ಅವರು ಹಿಂದಿಯಲ್ಲಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಭಾನುವಾರ ತಿಪಟೂರಿನ ಕೆಬಿ ಕ್ರಾಸ್ ನಿಂದ ಬರಕನ ಹಾಳು ಗೇಟ್ ವರೆಗೆ ನಡೆದ ಯಾತ್ರೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ಸ್ಥಳೀಯರು ಸೇರಿದಂತೆ ಅನೇಕ ಜನರೊಂದಿಗೆ ರಾಹುಲ್ ಸಂವಾದ ನಡೆಸಿದರು.ಹಿರಿಯ ನಾಯಕ ಸಿದ್ದರಾಮಯ್ಯ ಮತ್ತು ಕೆ ಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹಾಜರಿದ್ದರು.
ಚಿಕ್ಕನಾಯಕನಹಳ್ಳಿಯಲ್ಲಿ ಆದಿಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಅಂಗವಾಗಿ ರಾಹುಲ್ ಗಾಂಧಿ ಅವರು ವಾಲ್ಮೀಕಿ ಭಾವಚಿತ್ರಕ್ಕೆ ನಮಿಸಿ, ಗೌರವ ಸಮರ್ಪಿಸಿದರು.