ಸೌಥಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸೋಲಿನ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೆಲವು ಆಟಗಾರರ ಮೇಲೆ ಅಸಮಾಧಾನಗೊಂಡಿದ್ದಾರೆ. ಪ್ರೆಸ್ ಕಾನ್ಫರೆನ್ಸ್ ನಲ್ಲಿ ಕೊಹ್ಲಿ ಯಾವುದೇ ಆಟಗಾರರ ಹೆಸರು ಹೇಳದೆ ಇದ್ದರೂ, ಆಟಗಾರರು ಸರಿಯಾದ ಮನಸ್ಥಿತಿಯಲ್ಲಿ ಆಡಬೇಕಾದ ಅವಶ್ಯಕತೆಯಿದೆ ಎಂದಿದ್ದಾರೆ.
ನಾವು ತಂಡದ ಬಗ್ಗೆ ಅವಲೋಕನ ಮಾಡುತ್ತೇವೆ. ತಂಡದ ಬಲವನ್ನು ಹೆಚ್ಚಿಸಲು ಏನು ಮಾಡಬೇಕು ಎನ್ನುವ ಬಗ್ಗೆ ಮಾತುಕತೆ ನಡೆಸಬೇಕಿದೆ. ಕೇವಲ ಒಂದು ಮಾದರಿಯನ್ನು ಅಳವಡಿಸಿಕೊಂಡು ಅದರಲ್ಲೇ ಸಾಗುವುದಿಲ್ಲ ಎಂದು ವಿರಾಟ್ ಹೇಳಿದರು.
ಇದನ್ನೂ ಓದಿ:ವಿದಾಯದ ಪಂದ್ಯದಲ್ಲಿ ಧೋನಿ ದಾಖಲೆ ಅಳಿಸಿದ ಕಿವೀಸ್ ಕೀಪರ್ ವಾಟ್ಲಿಂಗ್
ನಾವು ಈ ಯೋಜನೆಗೆ ಒಂದು ವರ್ಷಗಳಷ್ಟು ಕಾಯುವುದಿಲ್ಲ. ನಮ್ಮ ನಿಗದಿತ ಓವರ್ ತಂಡದಲ್ಲಿ ನೋಡಿದರೆ ತಂಡ ಸಾಕಷ್ಟು ಪಳಗಿದೆ, ಹುಡುಗರು ಎಲ್ಲದಕ್ಕೂ ಸಿದ್ದವಾಗಿದ್ದಾರೆ. ಅದೇ ರೀತಿ ಟೆಸ್ಟ್ ತಂಡವನ್ನೂ ಮಾಡಬೇಕಿದೆ ಎನ್ನುತ್ತಾರೆ ವಿರಾಟ್.
ನಾವು ತಂಡವನ್ನು ಮರು ಪರಿಶೀಲನೆ ಮಾಡಬೇಕಿದೆ, ಸರಿಯಾದ ಸಮಯದಲ್ಲಿ ಸರಿಯಾದ ಮನಸ್ಥಿತಿಯಲ್ಲಿಆಡುವಂತಹ ಆಟಗಾರರನ್ನು ತಂಡಕ್ಕೆ ತರಬೇಕಿದೆ ಎಂದು ವಿರಾಟ್ ಕೊಹ್ಲಿ ಹೇಳಿದರು.
ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಎಂಟು ವಿಕೆಟ್ ಗಳ ಅಂತರದ ಸೋಲನುಭವಿಸಿದೆ.