Advertisement

ಗುರಿ ಮೀರಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡಿದ್ದೇವೆ: ಸಿಎಂ ಬೊಮ್ಮಾಯಿ

03:21 PM Apr 10, 2022 | Team Udayavani |

ಹಾವೇರಿ: ರಾಜ್ಯದಲ್ಲಿ ಗುರಿಮೀರಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶಿಗ್ಗಾವಿ ತಾಲೂಕಿನ ಬಂಕಾಪುರದ ಕೆಂಡದಮಠದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೆಂಬರ್ ನಿಂದ ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣ ಮಾಡಿದೆವು.15000 ಕೋಟಿ ರೂಪಾಯಿಗೂ ಹೆಚ್ಚು ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣ ಮಾಡಿದ್ದೇವೆ ಎಂದರು.

ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕೋವಿಡ್ ನಿಂದ ರಾಜ್ಯ ಬಳಲಿತ್ತು. ಅಂದು ಸಿಎಂ‌ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಅತ್ಯಂತ ದಿಟ್ಟತನದಿಂದ   ಕೋವಿಡ್ ಪರಿಸ್ಥಿತಿ ಎದುರಿಸಿದ್ದರು. ಆರ್ಥಿಕ ಪರಿಸ್ಥಿತಿ ಕಷ್ಟ ಇದ್ದರೂ ನಿಮ್ಮೆಲ್ಲರ ಆಶೀರ್ವಾದದಿಂದ ನಿಭಾಯಿಸಿದ್ದೇವೆ ಎಂದರು.

ಇದನ್ನೂ ಓದಿ:ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆ ಇದೆ?: ಸಿದ್ದರಾಮಯ್ಯ

ಈ ಕೆಂಡದ ಮಠ ಜನಸಾಮಾನ್ಯರ ಮಠ. ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಯ ಸಾವಿರಾರು ಭಕ್ತರನ್ನು ಹೊಂದಿರುವ ಮಠ. ಕಷ್ಟಪಟ್ಟು ಬದುಕುತ್ತಿರುವವರಿಗೆ ಆಶೀರ್ವಾದ ಮಾಡುವ ಮಠ. ಹಲವಾರು ಕುಟುಂಬಗಳಿಗೆ ಈ ಮಠ ಆಶೀರ್ವಾದ ಮಾಡಿದೆ ಎಂದರು.

Advertisement

ಬಂಕಾಪುರಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲೇ ಪಕ್ಕದಲ್ಲಿ ಕನಕದಾಸರು ಜನ್ಮವಿತ್ತ ಪುಣ್ಯ ಭೂಮಿಯಿದೆ. ಭಾವೈಕ್ಯತೆಯ ಸಂಕೇತ ಶರೀಫರು- ಗೋವಿಂದಭಟ್ಟರ ಕ್ಷೇತ್ರವಿದು. ಈ ಶಕ್ತಿ, ಪ್ರಭಾವ, ಆಶೀರ್ವಾದ ನನ್ನ ರಾಜಕೀಯ ಏಳಿಗೆಗೆ ಕಾರಣವಾಗಿದೆ. ಎಲ್ಲರ ಆಶೀರ್ವಾದದಿಂದ ನಾನು ಆಡಳಿತ ಮಾಡುತ್ತಿದ್ದೇನೆ ಎಂದು ಸಿಎಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next