Advertisement

ಭಾರತದೊಂದಿಗಿನ ಮೂರು ಯುದ್ಧದಿಂದ ಪಾಠ ಕಲಿತಿದ್ದೇವೆ, ಈಗ ನಮಗೆ…ಪ್ರಧಾನಿ ಮೋದಿಗೆ ಪಾಕ್ ಸಂದೇಶ

12:47 PM Jan 17, 2023 | Team Udayavani |

ಇಸ್ಲಾಮಾಬಾದ್:ಭಾರತದೊಂದಿಗಿನ ಮೂರು ಯುದ್ಧದಿಂದಾಗಿ ಜನರಿಗೆ ಹೆಚ್ಚು ಬಡತನ, ದುಃಖ ಮತ್ತು ನಿರುದ್ಯೋಗ ಹೆಚ್ಚಾಗಲು ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:‘ಮಿಸ್ ಮಂಗಳೂರು’ ಕಿರೀಟ ಮುಡಿಗೇರಿಸಿದ ಕಾಫಿನಾಡಿನ ಪ್ರತಿಭೆ ಸುಷ್ಮಾ ಎಸ್. ಶೆಟ್ಟಿ

“ಕಾಶ್ಮೀರದಂತಹ ಜ್ವಲಂತ ಗಂಭೀರವಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂಬುದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂದೇಶದ ಮೂಲಕ ಮನವಿ ಮಾಡಿಕೊಳ್ಳುತ್ತಿರುವುದಾಗಿ ಷರೀಫ್ ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಭಾರತ ಮಾನವಹಕ್ಕು ಉಲ್ಲಂಘಿಸುತ್ತಿದ್ದು, ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವುದಾಗಿ ಷರೀಫ್ ಆರೋಪಿಸಿದ್ದು, ಈ ಕೃತ್ಯವನ್ನು ನಿಲ್ಲಿಸುವ ಮೂಲಕ ಭಾರತ ಮಾತುಕತೆಗೆ ಸಿದ್ಧವಾಗಿದೆ ಎಂಬ ಸಂದೇಶವನ್ನು ಜಾಗತಿಕವಾಗಿ ರವಾನಿಸಬೇಕಾಗಿದೆ ಎಂದು ಷರೀಫ್ ತಿಳಿಸಿದ್ದಾರೆ.

“ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯ ದೇಶಗಳಾಗಿವೆ. ನಾವು ಒಟ್ಟಿಗೆ ಬಾಳಬೇಕಾಗಿದೆ. ಶಾಂತಿಯುತವಾಗಿ ಬದುಕುವುದು, ಪ್ರಗತಿ ಸಾಧಿಸುವುದು ಅಥವಾ ಜಗಳವಾಡುವುದು ನಮಗೆ ಬಿಟ್ಟಿದ್ದು, ಇದರಿಂದ ಸಮಯ ವ್ಯರ್ಥ ಮತ್ತು ಸಂಪನ್ಮೂಲ ಕೂಡಾ ನಷ್ಟವಾದಂತೆ” ಎಂದು ಷರೀಫ್ ಹೇಳಿದ್ದಾರೆ.

Advertisement

ನಾವು ಭಾರತದ ಜೊತೆ ಮೂರು ಯುದ್ಧಗಳನ್ನು ಮಾಡಿದ್ದೇವೆ. ಆದರೆ ಇದರಿಂದ ನಮ್ಮ ಜನರಿಗೆ ಹೆಚ್ಚಿನ ದುಃಖ, ಬಡತನ ಮತ್ತು ನಿರುದ್ಯೋಗವನ್ನು ತಂದೊಡ್ಡಿತ್ತು. ಇದರಿಂದ ನಾವು ಪಾಠ ಕಲಿತಿದ್ದೇವೆ. ನಮ್ಮ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಶಕ್ತರಾಗಿದ್ದೇವೆ ಎಂದು ಷರೀಫ್ ದುಬೈ ಮೂಲದ ಅಲ್ ಅರೇಬಿಯಾ ಟಿವಿ ಜೊತೆ ಮಾತನಾಡುತ್ತ ತಿಳಿಸಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next