ಗೌರಿಬಿದನೂರು: ಲಕ್ಷಾಂತರ ಜನರ ನಿರಂತರ ಹೋರಾಟ ಹಾಗೂ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಐತಿಹಾಸಿಕ ಕ್ಷೇತ್ರ ವಿದುರಾಶ್ವತ್ಥದಲ್ಲಿ “ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಲವೇ ವ್ಯಕ್ತಿಗಳಿಂದ ನಮಗೆ ಸ್ವಾತಂತ್ರ್ಯ ಬಂತು ಎಂದು ಕೆಲವರು 75 ವರ್ಷಗಳಿಂದ ಬಿಂಬಿಸಿದ್ದಾರೆ. ನೈಜ ಸ್ವಾತಂತ್ರ್ಯ ಹೋರಾಟಗಾರ ರನ್ನು ದೇಶದ್ರೋಹಿಗಳೆಂದು ಅಪ ಪ್ರಚಾರ ಮಾಡುತ್ತಿದ್ದಾರೆ. ದೇಶವನ್ನು ಎರಡು ತುಂಡುಗಳನ್ನಾಗಿ ಮಾಡಿದವರಿಂದ ನಾವು ಪಾಠ ಕಲಿಯಬೇಕಿಲ್ಲ. ಈಗ ಜನರಿಗೆ ಸತ್ಯ ಅರಿವಿಗೆ ಬಂದಿದೆ ಎಂದರು.
ಇತಿಹಾಸ ಓದದವರು ಇತಿಹಾಸ ಸೃಷ್ಟಿಸಲಾರರು
ಮೆಕಾಲೆ ಶಿಕ್ಷಣ ಪಡೆದ ಹಾಗೂ ಬ್ರಿಟಿಷರಿಂದ ಬರೆಸಲ್ಪಟ್ಟ ಚರಿತ್ರೆಯನ್ನು ಓದಿದ ಕೆಲವರು ಮನ ಬಂದಂತೆ ಮಾತನಾಡಿದರೆ ಅದನ್ನು ನಂಬುವ ಕಾಲ ಈಗಿನ ದಲ್ಲ. ಇತಿಹಾಸ ಓದದವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬುದನ್ನು ಇಂಥವರು ಅರಿತುಕೊಳ್ಳಬೇಕು ಎಂದರು.
ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ ನಾಗ ರಾಜ್ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ 93 ವರ್ಷದ ಮುದಗೆರೆ ಬ್ರಹ್ಮಯ್ಯ ಅವರನ್ನು ಕಾಗೇರಿ ಸಮ್ಮಾನಿಸಿದರು.