Advertisement

ಸಿಕ್ಕಿತು ಡಿಎನ್‌ಎ ಪೂರ್ಣ ಲೆಕ್ಕ! ವಾಷಿಂಗ್ಟನ್‌ ವಿವಿಯ ಸಂಶೋಧಕರ ಮಹತ್ವದ ಸಾಧನೆ

06:57 PM Apr 01, 2022 | Team Udayavani |

ನವದೆಹಲಿ: ಹಲವು ದಶಕಗಳಿಂದ ಒಗಟಾಗಿಯೇ ಉಳಿದಿದ್ದ ಡಿಆಕ್ಸಿ ರೈಬೋ ನ್ಯೂಕ್ಲಿಯಿಕ್‌ ಆ್ಯಸಿಡ್‌ನ‌ಲ್ಲಿರುವ (ಡಿಎನ್‌ಎ) ಬೇಸ್‌ಗಳನ್ನು ಶೇ. 100ರಷ್ಟು ಪತ್ತೆ ಮಾಡುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

Advertisement

ಪ್ರತಿ ಡಿಎನ್‌ಎಯಲ್ಲಿ 300 ಕೋಟಿಯಷ್ಟು ಬೇಸ್‌ಗಳು ಹುದುಗಿರುತ್ತವೆ. 1993ರಲ್ಲಿ , ಈ ಬೇಸ್‌ಗಳಲ್ಲಿ ಶೇ.92ರಷ್ಟು ಬೇಸ್‌ಗಳನ್ನು ಮಾತ್ರ ಪತ್ತೆ ಹಚ್ಚಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಹಲವಾರು ದೇಶಗಳಲ್ಲಿನ ಜೀವವಿಜ್ಞಾನಿಗಳು ಹಲವಾರು ರೀತಿಯ ಸಂಶೋಧನೆಗಳನ್ನು ಮಾಡಿದರೂ, ಉಳಿದ ಶೇ. 8ರಷ್ಟು ಬೇಸ್‌ಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈಗ, ಅಮೆರಿಕದ ಸೀಟಲ್‌ನಲ್ಲಿರುವ ಯೂನಿವರ್ಸಿಟಿ ಆಫ್ ವಾಷಿಂಗ್ಟನ್‌ನ ಸಂಶೋಧಕರು ಈ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಮನುಷ್ಯನ ಪ್ರತಿಯೊಂದು ಜೀವಕಣದಲ್ಲಿರುವ ಜಿನೋಮ್‌ನಲ್ಲಿರುವ ಡಿಎನ್‌ಎಯಲ್ಲಿರುವ ಎಲ್ಲಾ ಬೇಸ್‌ಗಳನ್ನು ಪತ್ತೆ ಹಚ್ಚುವಂತಾಗಿದೆ. ಈ ಮೂಲಕ, ಅವುಗಳ ಎಂಡ್‌-ಟು-ಎಂಡ್‌ ಮಾದರಿಯ ಅಧ್ಯಯನ ನಡೆಸಲು ಸಾಧ್ಯವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ:ಮಂಡ್ಯ: ಬಾಲ್ಯ ವಿವಾಹ ಮಾಡಿ ತಾಳಿ ತೆಗೆಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಳುಹಿಸಿದರು!

ಪ್ರಯೋಜನವೇನು?
ಡಿಎನ್‌ಎಯಲ್ಲಿರುವ ಎಲ್ಲಾ ಬೇಸ್‌ಗಳ ಅಧ್ಯಯನಗಳು ಕರಾರುವಾಕ್‌ ಆಗಿ ಮಾಡಿದಾಗ ಮಾತ್ರ ಮನುಷ್ಯನ ದೇಹಾಕೃತಿ, ಸ್ವರೂಪ, ವಂಶವಾಹಿಯಾಗಿ ಆತನಿಗೆ ಬರುವ ಕಾಯಿಲೆಗಳು ಇತ್ಯಾದಿಗಳ ಕುರಿತಾಗಿ ಮತ್ತಷ್ಟು ಖಚಿತ ಮಾಹಿತಿಗಳನ್ನು ಕಲೆಹಾಕಲು ಸಾಧ್ಯವಾಗುತ್ತದೆ. ಇದರಿಂದ ವಂಶವಾಹಿ ಕಾಯಿಲೆಗಳಿಗೆ ತಡೆ ಹಾಕುವ ಸಾಧ್ಯತೆಗಳನ್ನು ಮುಂದೆ ಸೃಷ್ಟಿಸಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next