Advertisement

We don’t talk; ಧೋನಿ ಜತೆಗಿನ ಮುನಿಸಿನ ಬಗ್ಗೆ ಮಾತನಾಡಿದ ಭಜ್ಜಿ!

03:08 PM Dec 04, 2024 | Team Udayavani |

ಮುಂಬಯಿ: ಆಘಾತಕಾರಿ ಎಂಬಂತೆ ನಾನು ಎಂ.ಎಸ್ ಧೋನಿ ಜತೆ ಮಾತನಾಡುವುದಿಲ್ಲ ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ನಮ್ಮ ಸ್ನೇಹವು ದ್ವಿಮುಖ ಹಾದಿಯಲ್ಲಿದೆ ನಾನು ನನ್ನ ಕರೆಗಳನ್ನು ಸ್ವೀಕರಿಸುವವರಿಗೆ ಮಾತ್ರ ರಿಂಗ್ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

Advertisement

ನ್ಯೂಸ್ 18 ಜತೆ ಮಾತನಾಡುತ್ತಾ, ಹರ್ಭಜನ್ ಅವರು ಎಂಎಸ್ ಧೋನಿ ಅವರೊಂದಿಗೆ ಯಾವುದೇ ಸಮಸ್ಯೆ ಹೊಂದಿಲ್ಲ, ನಾವಿಬ್ಬರುಸ್ನೇಹಿತರಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಹರ್ಭಜನ್ ಮತ್ತು ಎಂಎಸ್ ಧೋನಿ 2007 ರ ಟಿ 20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ತಂಡದಲ್ಲಿದ್ದರು. ಧೋನಿ ತಂಡದ ನಾಯಕರಾಗಿದ್ದರೆ, ಹರ್ಭಜನ್ ಆ ಪಂದ್ಯಾವಳಿಗಳಲ್ಲಿ ತಲಾ 7 ಮತ್ತು 9 ವಿಕೆಟ್‌ಗಳೊಂದಿಗೆ ಮಿಂಚಿದ್ದರು.

2018-2020ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಜತೆಯಾಗಿದ್ದಾಗಲೂ ಧೋನಿ ಅವರೊಂದಿಗೆ ಮೈದಾನದ ಹೊರಗೆ ಮಾತನಾಡಲಿಲ್ಲ.ಮಾತುಗಳೇನಿದ್ದರೂ ಗ್ರೌಂಡ್ ಗೆ ಸೀಮಿತವಾಗಿದ್ದವು . ಅವರು ನನ್ನ ಕೋಣೆಗೆ ಬರಲಿಲ್ಲ, ನಾನು ಅವರ ಕೋಣೆಗೆ ಹೋಗಿರಲಿಲ್ಲ ಎಂದು ಮುನಿಸಿನ ಬಗ್ಗೆ ಸ್ಪಿನ್ನರ್ ಬಹಿರಂಗಪಡಿಸಿದ್ದಾರೆ.

10 ವರ್ಷಗಳು ಹೆಚ್ಚಾಗಿವೆ ನನಗೆ ಕಾರಣಗಳು ತಿಳಿದಿಲ್ಲ, ಅವರ ಕಾರಣಗಳೇನು ಎಂಬುದೂ ನನಗೆ ಗೊತ್ತಿಲ್ಲ ಎಂದು ಭಜ್ಜಿ ಹೇಳಿದ್ದಾರೆ.

Advertisement

ಅವರಿಗೆ ಏನಾದರೂ ಹೇಳಲು ಇದ್ದರೆ ನನಗೆ ಹೇಳಬಹುದು. ಇದ್ದಿದರೆ ಇಷ್ಟೊತ್ತಿಗೆ ನನಗೆ ಹೇಳುತ್ತಿದ್ದರು.ನನಗೆ ತುಂಬಾ ಉತ್ಸಾಹವಿದೆ. ನನ್ನ ಕರೆಗಳನ್ನು ತೆಗೆದುಕೊಳ್ಳುವವರಿಗೆ ಮಾತ್ರ ನಾನು ರಿಂಗ್ ಮಾಡುತ್ತೇನೆ. ಇಲ್ಲದಿದ್ದರೆ ನನಗೆ ಸಮಯವಿಲ್ಲ. ನಾನು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುತ್ತೇನೆ. ಸಂಬಂಧವು ಯಾವಾಗಲೂ ಕೊಡುವುದು ಮತ್ತು ತೆಗೆದುಕೊಳ್ಳುವುದು. ನಾನು ನಿಮ್ಮನ್ನು ಗೌರವಿಸಿದರೆ, ನೀವು ನನ್ನನ್ನು ಮತ್ತೆ ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ. ”ಎಂದು ಸ್ಪಿನ್ನರ್ ಹೇಳಿದ್ದಾರೆ.

ಹರ್ಭಜನ್ ಮತ್ತು ಧೋನಿ ಕೊನೆಯ ಬಾರಿಗೆ 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ODI ನಲ್ಲಿ ಜತೆಯಾಗಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2015 ರ ವಿಶ್ವಕಪ್ ನಂತರ, ಹರ್ಭಜನ್ ಮತ್ತು ಯುವರಾಜ್ ಸಿಂಗ್ ಭಾರತ ತಂಡದಿಂದ ಹೊರಗುಳಿದಿದ್ದರು. 2015 ರ ನಂತರ ಹರ್ಭಜನ್ ಆಡದಿದ್ದರೂ, ಅವರು 2021 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next