Advertisement
ನಾವು ತಪ್ಪಿರುವುದು ಇಲ್ಲಿಯೇ ಎನ್ನುತ್ತಾರೆ ಸದ್ಗುರು. ದೃಷ್ಟಿ ದೋಷ ಹೊಂದಿರುವವರು ಪೇಟೆಗೆ ಹೋಗಿ ಮನೆಗೆ ಮರಳಿದ್ದು ಬಹಳ ದೊಡ್ಡ ಸಾಧನೆ ಎಂದುಕೊಳ್ಳುತ್ತಾರೆ. ಆದರೆ ದೃಷ್ಟಿ ಸರಿ ಇರುವವರಿಗೆ ಅದು ಬಹಳ ಸುಲಭದ ಕೆಲಸ. ಭಡ್ತಿ, ಕಾರು, ಮನೆ… ಹೀಗೆ ಗುರಿಗಳನ್ನು ಹಾಕಿಕೊಳ್ಳುವುದು ಎಂದರೆ ನಮ್ಮ ಬದುಕನ್ನು, ನಮ್ಮ ಸಾಮರ್ಥ್ಯವನ್ನು ನಾವೇ ಕಡಿಮೆ ಅಂದಾಜು ಮಾಡಿಕೊಳ್ಳುವುದು ಎನ್ನುತ್ತಾರೆ ಸದ್ಗುರು.
Related Articles
Advertisement
ಹೀಗಾಗಿ ನಾವು ನಮ್ಮನ್ನು ಕೇಳಿಕೊಳ್ಳ ಬೇಕಾದ ಪ್ರಶ್ನೆ ಎಂದರೆ “ನಾನೇನಾಗಬೇಕು’, “ನಾನೇನು ಸಾಧಿಸಬೇಕು’ ಎಂಬುದಲ್ಲ; “ನನ್ನ ಆತ್ಮೋನ್ನತಿಯನ್ನು ಸಾಧಿಸುವುದು ಹೇಗೆ’ ಎಂಬುದು. ಈಗಿನದ್ದಕ್ಕಿಂತ ಹೆಚ್ಚು ಶಕ್ತಿ ಯುತವಾಗಿ, ದೇದೀಪ್ಯಮಾನವಾಗಿ, ಸಮರ್ಥವಾಗಿ ನಮ್ಮ ಬದುಕನ್ನು ರೂಪಿಸಿ ಕೊಳ್ಳುವುದು ಹೇಗೆ ಎಂಬುದು. ಅಂಥ ಬದುಕು ಏನೆಲ್ಲ ಮಾಡಬೇಕೋ ಅದನ್ನು ತಾನೇ ತಾನಾಗಿ ಮಾಡಿಬಿಡುತ್ತದೆ.
ನಾವೀಗ ಏನನ್ನು ಹೊಂದಿದ್ದೇವೆ ಅಥವಾ ಏನು ಮಾಡಲಿದ್ದೇವೆ ಎಂಬುದರ ಬಗ್ಗೆ ಹೆಚ್ಚು ಚಿಂತೆ ಬೇಡ. ಬದುಕನ್ನು ಒಂದು ಶಕ್ತಿಯುತ ಎಂಜಿನ್ ಆಗಿ ರೂಪಿಸಿಕೊಳ್ಳೋಣ. ಆಗ ಅದು ಎಂಥ ದುರ್ಗಮ ಬೆಟ್ಟಗಳನ್ನೂ ಅನಾಯಾಸವಾಗಿ ಏರಿಬಿಡುತ್ತದೆ.
ಹನುಮಂತನ ಕಥೆ ಗೊತ್ತಲ್ಲ..! ಸಮುದ್ರೋಲ್ಲಂಘನ ತನ್ನಿಂದ ಸಾಧ್ಯ ಇಲ್ಲ ಎಂದುಕೊಂಡಿದ್ದ ಆತ. ಹಾಗೆಯೇ ನಾವು ಕೂಡ. ನಮ್ಮ ಬದುಕನ್ನು ಹೆಚ್ಚು ಸಾಮರ್ಥ್ಯ ಯುತವಾಗಿ ರೂಪಿಸಿಕೊಳ್ಳಬೇಕು. ಕಾರು, ಮನೆ, ಭಡ್ತಿಗಳನ್ನು ಇಂದು ಸಾಧಿಸಬಹುದು; ನಾಳೆ ಇನ್ನೊಬ್ಟಾತ ಅವುಗಳನ್ನು ಪಡೆದು ಕೊಂಡರೆ ಅಸೂಯೆಯಷ್ಟೇ ಹುಟ್ಟಿಕೊಳ್ಳುತ್ತದೆ. ಆದರೆ ನಮ್ಮ ವ್ಯಕ್ತಿತ್ವ ಶಕ್ತಿಯುತವಾಗಿ ವಿಕಸನಗೊಂಡರೆ ಪಟ್ಟಣದಲ್ಲಿರಲಿ, ಹಳ್ಳಿಗಾಡಿನಲ್ಲಿರಲಿ ಸ್ವಸಂತೃಪ್ತಿಯೊಂದಿಗೆ ಬಾಳುವುದು ಸಾಧ್ಯವಾಗುತ್ತದೆ.