Advertisement

ನಮ್ಮ ಬಳಿ ಹಣವಿಲ್ಲ, ಹೀಗಾಗಿ ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ: ಸಾರಿಗೆ ಸಚಿವ ಸವದಿ

04:38 PM Nov 14, 2020 | keerthan |

ಬೆಳಗಾವಿ: ಕೋವಿಡ್ ಕಾರಣದಿಂದ ಬಸ್ ಸಂಚಾರಕ್ಕೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ನಮಗೆ ಖರ್ಚು ಹೆಚ್ಚಾಗುತ್ತಿದೆ. ಹೀಗಾಗಿ ನೌಕರರಿಗೆ ಸಂಬಳ ಕೊಡಲು ನಮ್ಮ ಬಳಿ ದುಡ್ಡಿಲ್ಲ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.

Advertisement

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆಯಲ್ಲಿ 1 ಲಕ್ಷ 30 ಸಾವಿರ ಮಂದಿ ನೌಕರರಿದ್ದಾರೆ. ಅವರಿಗೆ ಸಂಬಳ ನೀಡಲು 325 ಕೋಟಿ ರೂ. ಬೇಕಾಗುತ್ತದೆ. ಲಾಕ್ ಡೌನ್ ನಂತರ ಮೊದಲ ಎರಡು ತಿಂಗಳು ಸರ್ಕಾರದಿಂದ ಸಂಬಳ ನೀಡಿದ್ದೇವೆ. ಆದರೆ ಬಸ್​ನಲ್ಲಿ ಯಾರು ಜನ ಬರುತ್ತಿಲ್ಲ. ಹೀಗಾಗಿ ಆದಾಯ ಬರೀ ಡೀಸೆಲ್​ಗೆ ಸಾಕಾಗುತ್ತಿದೆ ಎಂದರು.

ಇದನ್ನೂ ಓದಿ:ಗಂಡು ಮಗುವಿಗಾಗಿ ಮಗಳನ್ನೇ ಬಲಿಕೊಟ್ಟ ತಂದೆ! ಮಾಂತ್ರಿಕನ ಬಂಧನಕ್ಕೆ ಶೋಧ

ಸಂಬಳಕ್ಕಾಗಿ ಮೂರು‌ ತಿಂಗಳಿಂದ ಎರಡು ಬಾರಿ ಪ್ರಸ್ತಾವನೆ ಕಳುಹಿಸಿದ್ದೆವು. ಅದರಲ್ಲಿ ಎರಡು ಬಾರಿ ನಾವು ಕಳುಹಿಸಿದ ಪ್ರಸ್ತಾವನೆ ವಾಪಸ್ಸು ಬಂದಿದೆ. ಮತ್ತೆ ಈಗ ಪ್ರಸ್ತಾವನೆ ಕಳುಹಿಸಿದ್ದೇವೆ. ಶೇಕಡಾ 70ರಷ್ಟಾದರೂ ಸರ್ಕಾರ ಹಣ ಕೊಟ್ಟರೆ ಉಳಿದ ಹಣವನ್ನು ಸಾಲ ಪಡೆದುಕೊಂಡಾದರೂ ಸಂಬಳ ನೀಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next