Advertisement

ಇನ್ಮುಂದೆ ದಾನ ಸ್ವೀಕರಿಸುವುದಿಲ್ಲವಂತೆ ಉಪ್ಪಿ : ಟ್ವೀಟ್ ನಲ್ಲಿ ಏನಿದೆ ಗೊತ್ತಾ?

09:55 AM Jun 05, 2021 | Team Udayavani |

ಲಾಕ್‍ಡೌನ್ ವೇಳೆ ಊಟ ಇಲ್ಲದವರಿಗೆ, ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ನಟ, ರಾಜಕಾರಣಿ ಉಪೇಂದ್ರ  ಅವರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಉಪೇಂದ್ರ ಅವರ ಕಾರ್ಯಕ್ಕೆ ಮೆಚ್ಚಿ ಅನೇಕ ಮಂದಿ ನಟನಿಗೆ ತಾವೂ ಕೂಡ ಕೈ ಜೋಡಿಸಿದ್ದಾರೆ.  ಆದ್ರೆ ಇದೀಗ ಉಪೇಂದ್ರ ಟ್ವೀಟ್ ಒಂದನ್ನು ಮಾಡಿದ್ದು, ಇನ್ಮುಂದೆ ಯಾವುದೇ ದಾನವನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.

Advertisement

ಉಪೇಂದ್ರ ಅವರು ರೈತರಿಂದ ಬೆಳೆಗಳನ್ನು ಖರೀದಿ ಮಾಡಿ ಅವುಗಳನ್ನು ಅಗತ್ಯ ಇರುವವರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಮೆಚ್ಚಿದ ಅದೆಷ್ಟೋ ಜನ ರೈತರು, ಜನ ಸಾಮಾನ್ಯರು, ಉಚಿತವಾಗಿಯೇ ಹಣ್ಣು-ತರಕಾರಿ, ದಿನಸಿ ಸಾಮಗ್ರಿಗಳನ್ನು ನೀಡಿ ತಾವೂ ಕೂಡ ಉಪೇಂದ್ರ ಅವರಿಗೆ ಕೈಜೋಡಿಸಿದ್ದರು.

ಸದ್ಯ ಉಪೇಂದ್ರ ಬೇರೆಯವರು ನೀಡುವ ದಾನವನ್ನು ತಾವು ಸ್ವೀಕರಿಸುವುದಿಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ಇಲ್ಲಿಯವರೆಗೂ ನಾವು ಯಾರನ್ನೂ ಏನೂ ಕೇಳದಿದ್ದರೂ ತುಂಬಾ ಹೃದಯವಂತರು ನಮ್ಮ ಮೂಲಕ ವಿತರಣೆಯಾಗಲೆಂದು ದಿನಸಿ ಹಣ್ಣು, ತರಕಾರಿ ಹೀಗೆ ಮುಂತಾದವುಗಳನ್ನು ಕೊಟ್ಟಿದ್ದಾರೆ. ನಮ್ಮ ಉಪ್ಪಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ಗೆ ಧನ ಸಹಾಯವನ್ನೂ ಮಾಡಿದ್ದಾರೆ. ಅವುಗಳೆಲ್ಲವನ್ನೂ ಸೂಕ್ತವಾಗಿ ಬೇರೆ ಬೇರೆ ಕಡೆ ಸಂಕಷ್ಟದಲ್ಲಿರುವವರಿಗೆ ವಿತರಿಸಲಾಗಿದೆ, ಇನ್ನೂ ವಿತರಿಸಲಾಗುತ್ತದೆ ಸಹೃದಯತೆ ಮೆರೆದಂತಹ ತಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next