Advertisement
ಹಿಂದೆ ಎಲ್ಲ ಹಾಲಿ ಸಂಸದರಿಗೆ ಟಿಕೆಟ್ ಕೊಡ ಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು ಈಗ 7 ಕ್ಷೇತ್ರ ಬಿಟ್ಟು ಕೊಡುತ್ತೇವೆ ಎಂದು ಹೇಳಿರುವುದು ಸಿಎಂ ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. “ನಾವೇನು ಭಿಕ್ಷುಕರಲ್ಲ (ವಿ ಆರ್ ನಾಟ್ ಬೆಗ್ಗರ್ಸ್)’ ಎಂದು ಖಾರವಾಗಿ ಪ್ರತಿ ಕ್ರಿಯಿಸಿದ್ದಾರೆ. “ಕಾಂಗ್ರೆಸ್‌ನವರು ನಮಗೆ ಎಷ್ಟು ಸೀಟು ಬಿಟ್ಟುಕೊಡುತ್ತಾರೋ ಗೊತ್ತಿಲ್ಲ. ಆದರೆ ನಾವಂತೂ ಭಿಕ್ಷುಕರಲ್ಲ. ಸ್ಥಾನ ಹೊಂದಾಣಿಕೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸುತ್ತಾರೆ ಎಂದಿದ್ದಾರೆ. ನಾನು ಈ ಬಗ್ಗೆ ಯೋಚನೆ ಮಾಡಿಲ್ಲ ಎಂದೂ ಹೇಳಿದ್ದಾರೆ.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿ ಕ್ರಿಯಿಸಿ ರುವ ಮಾಜಿ ಸಿಎಂ ಸಿದ್ದರಾಮಯ್ಯ, “ಯಾರೂ ಭಿಕ್ಷುಕ ರಲ್ಲ. ಸೀಟು ಹಂಚಿಕೆ ಇನ್ನೂ ನಿರ್ಧಾರ ವಾಗಿಲ್ಲ’ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತ ನಾಡಿ, ಚುನಾವಣಾ ಸಮಿತಿ ಸಭೆ ಯಲ್ಲಿ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟುಕೊಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.
Related Articles
ಜೆಡಿಎಸ್‌ನವರನ್ನು ಕಾಂಗ್ರೆಸ್ ನವರು ಎಂದೂ “ಬೆಗ್ಗರ್ಸ್’ ಅಂದಿಲ್ಲ. ಕಾಂಗ್ರೆಸ್ ಮತ್ತು ಜೆಡಿ ಎಸ್ ಸಹಮತ ದಿಂದ ಲೋಕಸಭೆ ಚುನಾ ವಣೆ ಎದು ರಿಸಬೇಕು. ಸಿಎಂ ಕುಮಾರ ಸ್ವಾಮಿ ತಪ್ಪು ಕಲ್ಪನೆ ಯಿಂದ ಆ ಮಾತು ಹೇಳಿದ್ದಾರೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿ ದ್ದಾರೆ. ಹುಬ್ಬಳ್ಳಿಯಲ್ಲಿ ಮಾತ ನಾಡಿ, ಸಮ್ಮಿಶ್ರ ಸರಕಾರ ಇರುವು ದ ರಿಂದ ಲೋಕಸಭೆ ಚುನಾ ವಣೆ ಯಲ್ಲಿ ಘಟಬಂಧನ್ ಮಾಡಿ ಕೊಳ್ಳುವ ಸಂದರ್ಭದಲ್ಲಿ ಯಾರೂ ಭಿಕ್ಷುಕ ರಾಗುವುದಿಲ್ಲ. ಸೀಟು ಹಂಚಿಕೆಗೆ ಕೆಲವು ಮಾನದಂಡ ಗಳಿರುತ್ತವೆ. ಆ ವೇಳೆ ಮಾತುಕತೆ, ಚರ್ಚೆ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬೇಕಾಗುತ್ತದೆ. ಕುಮಾರಸ್ವಾಮಿ ತಪ್ಪು ಕಲ್ಪನೆಯಿಂದ ತಾವು ಬೆಗ್ಗರ್ಸ್ ಅಲ್ಲ ಎಂದಿದ್ದಾರೆ ಎಂದು ಪಾಟೀಲ್ ಹೇಳಿದ್ದಾರೆ.
Advertisement
ಈ ಬಗ್ಗೆ ಜೆಡಿಎಸ್ ಜತೆಗಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸಮ್ಮಿಶ್ರ ಸರಕಾರ ಐದು ವರ್ಷ ಪೂರ್ಣಗೊಳಿಸುತ್ತದೆ, ಅನುಮಾನ ಬೇಡ ಎಂದು ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿ ಯಾವ ರೀತಿಯ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಸೋಮವಾರ ನಡೆದ ಸಭೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಎನ್ನುವ ಬಗ್ಗೆ ಚರ್ಚೆಯಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ನ 10, ಜೆಡಿಎಸ್ 2 ಹಾಗೂ ಬಿಜೆಪಿಯ 16 ಸಂಸದರಿದ್ದಾರೆ. ಎಲ್ಲ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆಗೆ ಮಾತುಕತೆ ನಡೆಸಿದ್ದೇನೆ. ಬುಧವಾರ ಮಾಜಿ ಪ್ರಧಾನಿ ದೇವೇಗೌಡರ ಜತೆಗೆ ಚರ್ಚಿಸಿ, ಸೀಟು ಹಂಚಿಕೆಯ ದಿನಾಂಕ ನಿಗದಿ ಮಾಡಲಾಗುವುದು ಎಂದರು.