Advertisement

ಚರ್ಚೆಗೆ ಗುರಿಯಾದ ಅಮೀರ್ ಖಾನ್ ಪ್ರೊಡಕ್ಷನ್ಸ್ ಕ್ಷಮೆ ಕೋರಿದ ವಿಡಿಯೋ

05:34 PM Sep 01, 2022 | Team Udayavani |

ಮುಂಬಯಿ: “ನಾವೆಲ್ಲರೂ ಮನುಷ್ಯರು ಮತ್ತು ತಪ್ಪುಗಳನ್ನು ಮಾಡುತ್ತೇವೆ” ಎಂದು ಅಮೀರ್ ಖಾನ್ ಪ್ರೊಡಕ್ಷನ್ಸ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದು, ಜಗತ್ತಿನಾದ್ಯಂತ ಜೈನ ಸಮುದಾಯವು ಆಚರಿಸುವ ವಾರ್ಷಿಕ ಸಂವತ್ಸರಿ ಹಬ್ಬದ ಸಂದರ್ಭದಲ್ಲಿ ಈ ಕ್ಷಮೆಯನ್ನು ಕೋರಿದ ವಿಡಿಯೋ ಭಾರಿ ಸುದ್ದಿ ಮಾಡುತ್ತಿದೆ.

Advertisement

ಸೂಪರ್‌ಸ್ಟಾರ್‌ ಪ್ರೊಡಕ್ಷನ್ ಬ್ಯಾನರ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ 27-ಸೆಕೆಂಡ್ ಕ್ಲಿಪ್ ನಲ್ಲಿ ”ಲಾಲ್ ಸಿಂಗ್ ಚಡ್ಡಾ” ಸೋಲಿಗೆ ಅಮೀರ್ ಖಾನ್ ಕ್ಷಮೆಯಾಚಿಸಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದ್ದು, ವಿಡಿಯೋ ‘ಮಿಚಾಮಿ ದುಕ್ಕಡಮ್’ ನೊಂದಿಗೆ ಪ್ರಾರಂಭವಾಗುತ್ತದೆ ಅಂದರೆ ‘ನನ್ನ ಎಲ್ಲಾ ಅನುಚಿತ ಕಾರ್ಯಗಳಿಗಾಗಿ, ನಾವೆಲ್ಲರೂ ಮನುಷ್ಯರು ಮತ್ತು ನಾವು ತಪ್ಪುಗಳನ್ನು ಮಾತ್ರ ಮಾಡುತ್ತೇವೆ’ ಎಂಬ ಧ್ವನಿ ಕೇಳಿ ಬಂದಿದೆ.

ಅಮೀರ್ ಖಾನ್ ಪ್ರೊಡಕ್ಷನ್ಸ್ ಖಾತೆ ಉದ್ದೇಶಪೂರ್ವಕವಾಗಿ ಈ ಸಂದೇಶ ಕಳುಹಿಸಿದೆಯೋ ಅಥವಾ ಖಾತೆ ಹ್ಯಾಕ್ ಆಗಿದೆಯೋ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next