Advertisement

ಹುಣಸೂರನ್ನು ಜಿಲ್ಲೆಯನ್ನಾಗಿಸಲು ಹೋರಾಟ ನಡೆಸುತ್ತೇವೆ: ಶಾಸಕ ಎಚ್.ಪಿ.ಮಂಜುನಾಥ್

01:56 PM Aug 20, 2021 | Team Udayavani |

ಹುಣಸೂರು: ಮೈಸೂರು ಜಿಲ್ಲಾಡಳಿತದ ಮೇಲಿನ ಒತ್ತಡ ತಗ್ಗಬೇಕಾದರೆ ಹುಣಸೂರು ಜಿಲ್ಲೆಯಾಗಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.

Advertisement

ದೇವರಾಜ ಅರಸು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ಅರಸರ ಕುರಿತ ಕಿರು ಹೊತ್ತಿಗೆ ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್ ಅರಸರ ಆಡಳಿತದ  ಅವಧಿಯಲ್ಲಿ 26 ಸಾವಿರ ಕೋಟಿ ಬಜೆಟ್ ಮಂಡಿಸಿದ್ದರೂ ಬಡವರು ಶೋಷಿತರ ಮನೆ ಬಾಗಿಲಿಗೆ ಸವಲತ್ತು ತಲುಪುತ್ತಿತ್ತು. ಆದರಿಂದ 2 ಲಕ್ಷ ಕೋಟಿ ಗೇರಿದ್ದರೂ ಕಿಲುಬು ಕಾಸಿನ ಸವಲತ್ತು ಸಿಗಲು ಹೋರಾಟ ನಡೆಸಬೇಕಿದೆ ಎಂದು ಬೇಸರಿಸಿದರು.

ಅಂದು ಮೈಸೂರಿನ ಒಡೆಯರು ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಆಡಳಿತ ನಡೆಸಿ .ಬಡವರಿಗೆ ಸವಲತ್ತು. ನೀರಾವರಿಗೆ ಆದ್ಯತೆ ನೀಡಿದ್ದರು.ನಂತದಲ್ಲಿ  ದೇವರಾಜ ಅರಸರು ಬಡವರಿಗೆ ದ್ವನಿಯಾಗಿದ್ದಲ್ಲದೆ,  ಶೋಷಿತರಿಗೆ ಸಿಗಬೇಕಾದ ಸವಲತ್ತು ಕಲ್ಪಿಸಲು ಅನೇಕ ಕಾನೂನು ಜಾರಿಗೊಳಿಸಿದ್ದರು. ನಂತದರ ಸಿದ್ದರಾಮಯ್ಯನವರ ಅವಧಿಯಲ್ಲಿ ಬದ್ದತೆಯಿಂದ ಅನೇಕ ಜನೋಪಯೋಗಿ ಕಾರ್ಯಕ್ರಮ ನೀಡಿ ಬಡವರ ಹಸಿವನ್ನು ನೀಗಿಸಿದರು.
ಮೂವರು ಈ ಮಣ್ಣಿನ ನೆಲದವರೆಂಬುದೇ ಒಂದು ಹೆಮ್ಮೆ ಎಂದರು.

ಇದನ್ನೂ ಓದಿ:OPPO A15 ಈಗ ಮತ್ತಷ್ಟು ಅಗ್ಗ : ಜಿಯೋ ಬಳಕೆದಾರರಿಗೆ ಸಿಗುತ್ತಿದೆ ಬಾರಿ ರಿಯಾಯಿತಿ..!

ಇದೀಗ ಎಲ್ಲದಕ್ಕೂ ಮೈಸೂರಿಗೆ ಎಡತಾಕಬೇಕಿದೆ.ಉಪ ವಿಭಾಗವಾದ ಹುಣಸೂರನ್ನು ಕೇಂದ್ರವಾಗಿಸಿಕೊಂಡು ಹುಣಸೂರನ್ನು  ಅರಸು ಜಿಲ್ಲೆಯನ್ನಾಗಿಸಲು ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸದಿಂದ ಮುಂಬರುವ ಸದನದಲ್ಲಿ  ಮನವಿ ಮಾಡಲಾಗುವುದು. ಆರಂಭಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಲಾಗುವುದೆಂದರು. ಅಲ್ಲದೆ ಜಿಲ್ಲಾ ಕೇದ್ರವಾಗಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಎಂ. ಎಲ್‌. ಸಿ ವಿಶ್ವನಾಥ್ ನುಡಿದರು.

Advertisement

ಈ ವೇಳೆ ಹುಡಾ ಅಧ್ಯಕ್ಷ ಗಣೇಶ ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷೆ ಅನುಷಾ. ಉಪಾಧ್ಯಕ್ಷ ದೇವನಾಯ್ಕ. ಸದಸ್ಯರಾದ ಸತೀಶ್ ಕುಮಾರ್. ಸೇರಿದಂತೆ ಇತರೆ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು. ಮುಖಂಡರು ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next