Advertisement

WC; ಭಾರತ-ಕೆನಡಾ ಪಂದ್ಯ ರದ್ದು: ಸೂಪರ್‌-8 ಮೊದಲ ಎದುರಾಳಿ ಅಫ್ಘಾನ್

11:39 PM Jun 15, 2024 | Team Udayavani |

ಲಾಡರ್‌ಹಿಲ್‌ (ಫ್ಲೋರಿಡಾ): ಇಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಪಂದ್ಯಾವಳಿಯ ಸತತ ಎರಡನೇ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿದೆ. ಶನಿವಾರದ ಭಾರತ-ಕೆನಡಾ ನಡುವಿನ “ಎ’ ವಿಭಾಗದ ಪಂದ್ಯ ಟಾಸ್‌ ಕೂಡ ಕಾಣದೆ ರದ್ದುಗೊಂಡಿತು. ಅಂಕವನ್ನು ಇತ್ತಂಡಗಳಿಗೆ ಹಂಚಲಾಯಿತು.

Advertisement

ಇದರೊಂದಿಗೆ ಭಾರತ 7 ಅಂಕದೊಂದಿಗೆ “ಎ’ ವಿಭಾಗದ ಅಗ್ರಸ್ಥಾನಿಯಾಯಿತು. ಸೂಪರ್‌-8 ಹಂತದ ಮೊದಲ ಪಂದ್ಯ ದಲ್ಲಿ ಭಾರತ ಅಫ್ಘಾನಿಸ್ಥಾನವನ್ನು ಎದುರಿಸಲಿದೆ. ಈ ಪಂದ್ಯ ಗುರುವಾರ (ಜೂ. 20) ಬ್ರಿಜ್‌ಟೌನ್‌ನಲ್ಲಿ ನಡೆಯಲಿದೆ.

ಶುಕ್ರವಾರ ಇಲ್ಲೇ ನಡೆಯಬೇಕಿದ್ದ ಅಮೆರಿಕ – ಐರ್ಲೆಂಡ್‌ ನಡುವಿನ ಪಂದ್ಯವೂ ಮಳೆಯಿಂದಾಗಿ ರದ್ದುಗೊಂಡಿತ್ತು. ಹೀಗಾಗಿ ಪಾಕಿಸ್ಥಾನ ಕೂಟದಿಂದ ನಿರ್ಗಮಿಸಿತ್ತು.

ಜಿಂಬಾಬ್ವೆ ಪ್ರವಾಸ
ಜಿಂಬಾಬ್ವೆಗೆ ಪ್ರವಾಸ ಹೋಗಲಿ ರುವ ಭಾರತ ಕ್ರಿಕೆಟ್‌ ತಂಡ ಜುಲೈ 6ರಿಂದ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಹರಾರೆಯಲ್ಲಿ ಸರಣಿಯ ಎಲ್ಲ ಪಂದ್ಯಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next