Advertisement

T20 World Cup ವೆಸ್ಟ್‌ ಇಂಡೀಸ್‌-ಇಂಗ್ಲೆಂಡ್‌ ಮುಖಾಮುಖಿ

11:50 PM Jun 19, 2024 | Team Udayavani |

ಗ್ರಾಸ್‌ ಐಲೆಟ್‌: ಪ್ರಚಂಡ ಫಾರ್ಮ್ ನಲ್ಲಿರುವ ಆತಿಥೇಯ ವೆಸ್ಟ್‌ ಇಂಡೀಸ್‌ ಮತ್ತು ಅದೃಷ್ಟದ ಬಲದಿಂದ ಮುನ್ನಡೆ ಸಾಧಿಸಿರುವ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಗುರುವಾರ ಬೆಳಗ್ಗಿನ ಸೂಪರ್‌-8 ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಎರಡೂ ತಂಡಗಳು ದಾಖಲೆ 3ನೇ ಕಿರೀಟಕ್ಕಾಗಿ ಹೋರಾಟ ಮುಂದುವರಿಸಲಿವೆ.

Advertisement

ವೆಸ್ಟ್‌ ಇಂಡೀಸ್‌ ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದೆ. ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ಥಾನಕ್ಕೆ 104 ರನ್ನುಗಳ ಬೃಹತ್‌ ಸೋಲುಣಿಸಿತ್ತು. ಇದರೊಂದಿಗೆ ಸತತ 8 ಟಿ20 ಪಂದ್ಯಗಳನ್ನು ಗೆದ್ದ ದಾಖಲೆಗೂ ಪಾತ್ರವಾಗಿದೆ.

“ಇದರಿಂದ ನಾವು ಇಂಗ್ಲೆಂಡ್‌ಗೆ ಎಚ್ಚರಿಕೆಯನ್ನೇನೂ ರವಾನಿಸಬೇಕಿಲ್ಲ. ನಾವು ಈವರೆಗೆ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದೇವೆ. ಸೂಪರ್‌-8ನಲ್ಲೂ ಇದನ್ನು ಮುಂದುವರಿಸಲಿದ್ದೇವೆ’ ಎಂಬುದಾಗಿ ಕ್ಯಾಪ್ಟನ್‌ ಪೊವೆಲ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next