Advertisement

T20 Worldcup: ಸೂಪರ್‌-8ಕ್ಕೆ ಆಸೀಸ್‌ ಸವಾರಿ… 5.4 ಓವರ್‌ಗಳಲ್ಲೇ ಜಯಭೇರಿ

11:24 PM Jun 12, 2024 | Team Udayavani |

ನಾರ್ತ್‌ ಸೌಂಡ್‌: ನಮೀಬಿಯಾವನ್ನು ಪವರ್‌ ಪ್ಲೇ ಒಳಗಾಗಿ ಮಣಿಸಿದ ಆಸ್ಟ್ರೇಲಿಯ “ಬಿ’ ವಿಭಾಗದಿಂದ ಟಿ20 ವಿಶ್ವಕಪ್‌ ಪಂದ್ಯಾವಳಿಯ ಸೂಪರ್‌-8 ಹಂತಕ್ಕೆ ನೆಗೆದಿದೆ.

Advertisement

ಇಲ್ಲಿನ “ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ’ನಲ್ಲಿ ನಡೆದ ಏಕಪಕ್ಷೀಯ ಪಂದ್ಯದಲ್ಲಿ ಆಸ್ಟ್ರೇಲಿಯ 9 ವಿಕೆಟ್‌ಗಳ ಜಯ ಸಾಧಿಸಿತು. ನಮೀಬಿಯಾ 17 ಓವರ್‌ಗಳಲ್ಲಿ 72 ರನ್ನಿಗೆ ಕುಸಿದರೆ, ಮಿಚೆಲ್‌ ಮಾರ್ಷ್‌ ಬಳಗ ಕೇವಲ 5.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 74 ರನ್‌ ಬಾರಿಸಿತು.

ಇದರೊಂದಿಗೆ ಆಸ್ಟ್ರೇಲಿಯ ಎಲ್ಲ 3 ಪಂದ್ಯಗಳನ್ನು ಜಯಿಸಿತು. ನಮೀಬಿಯಾ ಕೂಟದಿಂದ ಹೊರಬಿತ್ತು. “ಬಿ’ ವಿಭಾಗದಿಂದ ಈಗಾಗಲೇ ಒಮಾನ್‌ ಹೊರಬಿದ್ದಿದೆ. ಮುಂದಿನ ಸುತ್ತಿಗೇರುವ ಮತ್ತೂಂದು ತಂಡಕ್ಕಾಗಿ ಸ್ಕಾಟ್ಲೆಂಡ್‌ ಮತ್ತು ಇಂಗ್ಲೆಂಡ್‌ ನಡುವೆ ಸ್ಪರ್ಧೆ ಇದೆ. ಇಲ್ಲಿ 3 ಪಂದ್ಯ ಗಳಿಂದ 5 ಅಂಕ ಗಳಿಸಿರುವ ಸ್ಕಾಟ್ಲೆಂಡ್‌ಗೆ ಅವಕಾಶ ಹೆಚ್ಚು. ಇಂಗ್ಲೆಂಡ್‌ 2 ಪಂದ್ಯಗಳಿಂದ ಕೇವಲ ಒಂದಂಕ ಹೊಂದಿದೆ.

ಆಸ್ಟ್ರೇಲಿಯವಿನ್ನು ಶನಿವಾರ ಸ್ಕಾಟ್ಲೆಂಡ್‌ ವಿರುದ್ಧ ಗ್ರಾಸ್‌ ಐಲೆಟ್‌ನಲ್ಲಿ ತನ್ನ ಕೊನೆಯ ಲೀಗ್‌ ಪಂದ್ಯ ಆಡಲಿದೆ.

ಝಂಪ 100 ವಿಕೆಟ್‌ ಸಾಧನೆ
ಲೆಗ್‌ಸ್ಪಿನ್ನರ್‌ ಆ್ಯಡಂ ಝಂಪ ನಮೀಬಿಯಾಕ್ಕೆ ಜಬರ್ದಸ್ತ್ ಆಘಾತವಿಕ್ಕಿದರು. ಇವರ ಸಾಧನೆ 12 ರನ್ನಿಗೆ 4 ವಿಕೆಟ್‌. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ವಿಕೆಟ್‌ ಉಡಾಯಿಸಿದ ಆಸ್ಟ್ರೇಲಿಯದ ಮೊದಲ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾದರು.

Advertisement

ಸಂಕ್ಷಿಪ್ತ ಸ್ಕೋರ್‌: ನಮೀಬಿಯಾ-17 ಓವರ್‌ಗಳಲ್ಲಿ 72 (ಎರಾಸ್ಮಸ್‌ 36, ವಾನ್‌ ಲಿಂಜೆನ್‌ 10, ಝಂಪ 12ಕ್ಕೆ 4, ಸ್ಟೋಯಿನಿಸ್‌ 9ಕ್ಕೆ 2, ಹೇಝಲ್‌ವುಡ್‌ 18ಕ್ಕೆ 2). ಆಸ್ಟ್ರೇಲಿಯ-5.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 74 (ವಾರ್ನರ್‌ 20, ಹೆಡ್‌ ಔಟಾಗದೆ 34, ಮಾರ್ಷ್‌ ಔಟಾಗದೆ 18, ವೀಸ್‌ 15ಕ್ಕೆ 1). ಪಂದ್ಯಶ್ರೇಷ್ಠ: ಆ್ಯಡಂ ಝಂಪ.

Advertisement

Udayavani is now on Telegram. Click here to join our channel and stay updated with the latest news.

Next