Advertisement

Wayanad Landslide; ಸೇನೆ ಸಾಹಸ: 31 ತಾಸಲ್ಲಿ ಸೇತುವೆ!

12:46 AM Aug 02, 2024 | Team Udayavani |

ವಯನಾಡ್‌: ಭೂಕುಸಿತ ಉಂಟಾಗಿರುವ ವಯ ನಾಡ್‌ನ‌ ಚೂರಲ್‌ವುಲದಿಂದ ಮುಂಡಕೈಗೆ ಸಂಪರ್ಕ ಕಲ್ಪಿಸಲು 31 ಗಂಟೆಗಳಲ್ಲಿ ಸೇತುವೆ ನಿರ್ಮಿ ಸಲಾಗಿದೆ. ಬೆಂಗಳೂರಿನ ಎಂಇಜಿ ಗ್ರೂಪ್‌ನ ಯೋಧರು ಈ ಸಾಧನೆ ಮಾಡಿದ್ದಾರೆ. ಜನರ ರಕ್ಷಣೆ ಗಾಗಿ ಬೈಲಿ ಸೇತುವೆ ಫ‌ಲಕಗಳನ್ನು ಬಳಸಿ 190 ಅಡಿ ಉದ್ದದ ಸೇತುವೆ ನಿರ್ಮಿಸಲಾಗಿದೆ.

Advertisement

ಈ ಬಗ್ಗೆ ಮಾತನಾಡಿರುವ ಎಂಇಜಿಯ ಹಿರಿಯ ಅಧಿಕಾರಿ ವಯನಾಡ್‌ನ‌ಲ್ಲಿ ನಡೆಸುತ್ತಿರುವ ಕಾರ್ಯಾ ಚರಣೆ ಅತ್ಯಂತ ಸವಾಲಿನದ್ದಾಗಿದೆ ಎಂದು ಹೇಳಿದ್ದಾರೆ. ಈ ಸೇತುವೆಯಿಂದ ಚೂರಲ್‌ವುಲ ಮತ್ತು ಮುಂಡಕೈಯಲ್ಲಿ ಸಿಲುಕಿರುವ ಸಂತ್ರಸ್ತರನ್ನು ಪಾರು ಮಾಡಲು, ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯಲು ನೆರವಾಗಲಿದೆ.

ಸೇತುವೆ 190 ಅಡಿ ಉದ್ದವಿದೆ. 140 ಮಂದಿ ಯೋಧರು ಅದರ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಬೈಲಿ ಸೇತುವೆ ಎಂಬ ವಿಶಿಷ್ಟವಾದ ಮಿಲಿಟರಿ ಸೇತುವೆಯನ್ನು 2ನೇ ಮಹಾಯುದ್ಧ ಸಮಯದಲ್ಲಿ ಬ್ರಿಟಿಷ್‌ ಎಂಜಿನಿಯರ್‌ ಸರ್‌ ಡೊನಾಲ್ಡ್ ಬೈಲಿ ಅಭಿವೃದ್ಧಿ ಪಡಿಸಿದರು. ಯುದ್ಧ ವಲಯಗಳಲ್ಲಿ ತ್ವರಿತವಾಗಿ ನಿಯೋಜಿಸಬಹುದಾದ ತ್ವರಿತ- ಜೋಡಣೆ, ಪೋರ್ಟಬಲ್‌ ಸೇತುವೆಗಳ ಅಗತ್ಯಕ್ಕೆ ಅನುಸಾರವಾಗಿ ವಿನ್ಯಾಸ ಮಾಡಲಾಗುತ್ತದೆ.

ಬೆಂಗಳೂರು ಯೋಧರು
ಸೇತುವೆಯ ಉದ್ದ: 190 ಅಡಿ
ನಿರ್ಮಾಣದಲ್ಲಿ ಭಾಗಿಯಾದವರ ಸಂಖ್ಯೆ: 140
ಸಾಮರ್ಥ್ಯ: ಒಮ್ಮೆಗೆ 24 ಟನ್‌ ಹೊರುವಷ್ಟು

Advertisement

ಮೇಪ್ಪಾಡಿಯಲ್ಲಿ 86,000 ಚ.ಮೀ ಭೂಕುಸಿತ: ಇಸ್ರೋ
ಮೇಪ್ಪಾಡಿಯಲ್ಲಿ ಸಂಭವಿಸಿದ ಭೂ ಕುಸಿತ ದಿಂದ ಹಾನಿಗೊಳಗಾದ ಪ್ರದೇಶಗಳ ಫೋಟೋ ಗಳನ್ನು ಇಸ್ರೋ ತೆಗೆದಿದೆ. ಈ ಪ್ರದೇಶ ದಲ್ಲಿ 86,000 ಚ.ಮೀ ನಷ್ಟು ಭೂಮಿ ಕುಸಿದಿದ್ದು, ಇರುವೈಪುಳ ನದಿಯಲ್ಲಿ ಸುಮಾರು 8.ಕಿ.ಮೀವರೆಗೂ ಬಂಡೆಗಳು, ಮಣ್ಣು ನೀರಿ ನೊಂದಿಗೆ ಹರಿಯುತ್ತಿದೆ. ಸುಮಾರು 1,550 ಮೀ. ಎತ್ತರದಿಂದ ಭೂಕುಸಿತ ಆರಂಭವಾಗಿದೆ ಎಂದು ಫೋಟೋಗಳನ್ನು ಅಧ್ಯ ಯನ ನಡೆಸಿದಾಗ ಗೊತ್ತಾ ಗಿದೆ. ಜತೆಗೆ ಹಿಂದಿನ ಸಂದರ್ಭ ದಲ್ಲಿ ಈ ಸ್ಥಳದಲ್ಲಿ ಉಂಟಾ ಗಿದ್ದ ಭೂ ಕುಸಿತದ ಬಗ್ಗೆಯೂ ಫೋಟೋಗಳಿಂದ ಮಾಹಿತಿ ಲಭ್ಯವಾಗಿದೆ

ಅನಾಥ ಹಸುಗೂಸುಗಳಿಗೆ ಮಹಿಳೆಯಿಂದ ಎದೆಹಾಲು
ಇಡುಕ್ಕಿ: ವಯನಾಡ್‌ ಭೂಕುಸಿತದ ದುರಂತ ನೂರಾರು ಮಂದಿ ಜೀವ ಪಡೆದಿದೆ. ಇದರಲ್ಲಿ ಹಸು ಗೂಸುಗಳ ತಾಯಂದಿರು ಕೂಡ ಸೇರಿದ್ದಾರೆ. ಈ ದುರಂತದ ಮಧ್ಯೆ ಇಡುಕ್ಕಿಯ 2 ಮಕ್ಕಳ ತಾಯಿ ಯೊಬ್ಬಳು ಭೂಕುಸಿತದಲ್ಲಿ ತಾಯಿ ಯಂದಿರನ್ನು ಕಳೆದುಕೊಂಡ ಶಿಶುಗಳಿಗೆ ಎದೆ ಹಾಲು ಉಣಿಸಲು ಮುಂದಾಗಿರುವ ಹೃದಯ ಸ್ಪರ್ಶಿ ಕಥೆ ಬೆಳಕಿಗೆ ಬಂದಿದೆ. ಆಕೆ 4 ವರ್ಷ, 4 ತಿಂಗಳ ಎರಡು ಮಕ್ಕ ಳನ್ನು ಹೊಂದಿದ್ದಾರೆ. ನಾನು 2 ಮಕ್ಕಳ ತಾಯಿ. ಅಮ್ಮಂದಿರಿಲ್ಲದ ಮಕ್ಕಳ ಸ್ಥಿತಿ ನನಗೆ ಅರ್ಥವಾಗುತ್ತದೆ ಎಂದು ಮಹಿಳೆ ಹೇಳಿದ್ದಾರೆ.

ಭೂಕುಸಿತದಲ್ಲಿ ಸಿಲುಕಿದ್ದ ಸಾವಿರ ಮಂದಿ ರಕ್ಷಣೆ: ಸೇನೆ
ಭೂ ಕುಸಿತ ದುರಂತ ಸಂಭವಿಸಿರುವ ಚೂರಲ್‌ವುಲ ಹಾಗೂ ಮುಂಡಕೈಯಲ್ಲಿ ಸೇನೆ ನಡೆಸಿದ ಕಾರ್ಯಾಚರಣೆ ಯಲ್ಲಿ 1,000ಕ್ಕೂ ಅಧಿಕ ಮಂದಿಯನ್ನು ನಿರಂತರ ಮಳೆಯಿಂದಾಗಿ ಪ್ರದೇಶ ದಲ್ಲಿ ಪ್ರತಿಕೂಲ ಹವಾ ಮಾನ ವಿದ್ದು ರಕ್ಷಣ ಕಾರ್ಯಾಚರ ಣೆಗೆ ಆಗಾಗ ಅಡ್ಡಿ ಯುಂಟಾ ಗಿದೆ. ಗುರು ವಾರ ಮತ್ತೆ ರಕ್ಷಣ ಕಾರ್ಯಾಚರಣೆ ಮುಂದು ವರಿ ಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

300ರ ಸನಿಹಕ್ಕೆ ಸಾವಿನ ಸಂಖ್ಯೆ
ವಯನಾಡ್‌ ಭೂಕುಸಿತದಿಂದಾಗಿ ಅಸುನೀಗಿದವರ ಸಂಖ್ಯೆ 296ಕ್ಕೆ ಏರಿಕೆಯಾಗಿದೆ. ಇನ್ನೂ 240 ಮಂದಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಭೂಕುಸಿತದ ದುರಂತದಲ್ಲಿ 200ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next