ಹೊಸದಿಲ್ಲಿ: ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಗುರು ರಾಮ್‌ದೇವ್ ಅವರು ತನ್ನದೇ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಮೇಣದ ಪ್ರತಿಮೆಯನ್ನು ನ್ಯೂಯಾರ್ಕ್‌ನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಇಡಲಾಗುತ್ತಿದೆ.
ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಟೈಮ್ಸ್ ಸ್ಕ್ವೇರ್‌ನ ಹೃದಯಭಾಗದಲ್ಲಿದ್ದು, ಬಾಬಾ ರಾಮದೇವ್ ಅಮೇರಿಕದ ಪ್ರತಿಷ್ಠಿತ ವಸ್ತುಸಂಗ್ರಹಾಲಯದಲ್ಲಿ ಕಾಣಿಸಿಕೊಂಡ ಮೊದಲ ಸಂತ ಎನಿಸಿಕೊಂಡಿದ್ದಾರೆ.
58 ರ ಹರೆಯದ ಬಾಬಾ ರಾಮ್ ದೇವ್ ಅವರು ಯೋಗ ಗುರು ಮಾತ್ರವಲ್ಲದೆ ಉದ್ಯಮಿಯಾಗಿ ಪತಂಜಲಿ ಆಯುರ್ವೇದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. 2002 ರಿಂದ ದೊಡ್ಡ ಯೋಗ ಶಿಬಿರಗಳನ್ನು ಆಯೋಜಿಸುತ್ತಿದ್ದು, ಯೋಗ ತರಗತಿಗಳನ್ನು ವಿವಿಧ ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ.2006 ರಲ್ಲಿ ತಮ್ಮ ಶಿಷ್ಯ ಬಾಲಕೃಷ್ಣ ಅವರೊಂದಿಗೆ ಪತಂಜಲಿ ಆಯುರ್ವೇದ ಮತ್ತು ಪತಂಜಲಿ ಯೋಗಪೀಠವನ್ನುಸ್ಥಾಪಿಸಿದ್ದರು.
ಮೇಡಮ್ ಟುಸ್ಸಾಡ್ಸ್ ನಲ್ಲಿ ಮೇಣದ ಪ್ರತಿಮೆಯಾಗಿ ಕಾಣಿಸಿಕೊಂಡಿರುವ ಭಾರತೀಯರ ಸಾಧಕರ ಪಟ್ಟಿ
ಪ್ರಧಾನಿ ನರೇಂದ್ರ ಮೋದಿ
ಐಶ್ವರ್ಯಾ ರೈ ಬಚ್ಚನ್
ಸಲ್ಮಾನ್ ಖಾನ್
ಅಮಿತಾಬ್ ಬಚ್ಚನ್
ಶಾರುಖ್ ಖಾನ್
ಸಚಿನ್ ತೆಂಡೂಲ್ಕರ್