Advertisement

ಮಸ್ಕಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ನೀರು

06:22 PM Aug 12, 2021 | Team Udayavani |

ಮಸ್ಕಿ: ಮಸ್ಕಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಭೂಮಿಗೆ ಬುಧವಾರದಿಂದ ನೀರು ಹರಿಸಲು ಆರಂಭಿಸಲಾಗಿದೆ. ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಹಾಯಕ ಆಯುಕ್ತ ರಾಹುಲ್‌ ಸಂಕನೂರು ನೇತೃತ್ವದಲ್ಲಿ ತಾಲೂಕಿನ ಮಾರಲದಿನ್ನಿ ಬಳಿಯ ಮಸ್ಕಿ ಜಲಾಶಯ ಸ್ಥಳದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.

Advertisement

ಈ ಮೊದಲು ಜಲಾಶಯದಲ್ಲಿ ಲಭ್ಯ ನೀರಿನ ಪ್ರಮಾಣ, ಈಗಿನ ಪರಿಸ್ಥಿತಿ ಕೃಷಿ ಚಟುವಟಿಕೆಗೆ ಅಗತ್ಯ ಇರುವ ನೀರಿನ ಪ್ರಮಾಣದ ಕುರಿತು ನೀರಾವರಿ ಅ ಧಿಕಾರಿಗಳು ಹಾಗೂ ರೈತರ ಜತೆ ನಡೆದ ಸಭೆಯಲ್ಲಿ ಸಮಾಲೋಚಿಸಿದ ಎಸಿ ಸಂಕನೂರು ಅವರು, ಜಲಾಶಯದಲ್ಲಿ ಸದ್ಯ 0.478 ಟಿಎಂಸಿ ಅಡಿ ನೀರು ಬಳಕಗೆ ಸಂಗ್ರಹವಿದ್ದು ಎಡ ಹಾಗೂ ಬಲದಂಡೆ ಕಾಲುವೆ ಮೂಲಕ ಆ.11ರಿಂದ ನವೆಂಬರ್‌ 13ರ ವರೆಗೆ ಎಡ ಹಾಗೂ ಬಲದಂಡೆ ಕಾಲುವೆ ಮೂಲಕ ರೈತರ ಕೃಷಿ ಚಟುವಟಿಕೆಗೆ ನೀರು ಪೂರೈಕೆ ಮಾಡಲಾಗುವುದು. ರೈತರು ನೀರನ್ನು ವ್ಯರ್ಥ ಹಾಳು ಮಾಡದೆ ಮಿತವಾಗಿ ಬಳಸಬೇಕು ಎಂದು ಹೇಳಿದರು.

ಶಾಸಕ ಆರ್‌. ಬಸನಗೌಡ ಮಾತನಾಡಿ, ರೈತರ ಹೊಲಗಳಿಗೆ ನೀರು ಪೂರೈಸುವ ವಿತರಣಾ ಕಾಲುವೆಗಳು ಹಾಳಾಗಿದ್ದರಿಂದ ರೈತರಿಗೆ ಸಮರ್ಪಕವಾಗಿ ನೀರು ದೊರೆಯುವುದಿಲ್ಲ. ಹಾಳಾದ ಕಾಲುವೆಗಳ ದುರಸ್ತಿಗಾಗಿ ನೀರಾವರಿ ನಿಗಮದ ಮೂಲಕ ತಂದು ದುರಸ್ತಿಗೊಳಿಸಬೇಕು. ಇದರಿಂದ ನೀರಿಗಾಗಿ ರೈತ-ರೈತರ ನಡುವೆ ಮನಸ್ತಾಪ ಉಂಟಾಗುವುದಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.

ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ ರಾವ್‌, ತಹಶೀಲ್ದಾರ್‌ ಕವಿತಾ ಆರ್‌, ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ, ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಾವುದ್‌ ಸಾಬ, ಸಬ್‌ ಇನ್‌ ಸ್ಪೆಕ್ಟರ್‌ ಭೀಮದಾಸ್‌ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಯೋಜನೆ ವ್ಯಾಪ್ತಿ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next