Advertisement

ಕೆಆರ್‌ಎಸ್‌ ಜಲಾಶಯ ಕೆಳಭಾಗದ ನಾಲೆಗಳಿಗೆ ನೀರು

03:55 PM Jan 15, 2018 | |

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದ ಕೆಳಭಾಗದ ನಾಲೆಗಳಿಗೆ ಮುಂದಿನ ಬೇಸಿಗೆ ಬೆಳೆ ಬೆಳೆಯಲು ಸಮಿತಿ ನೀಡಿದ ಭರವಸೆಯಂತೆ 4 ಕಂತಿನ ಕಟ್ಟು ನೀರು ಕೊಡಲು ಸರ್ಕಾರ ಮುಂದಾಗಿರುವುದರಿಂದ ತಾಲೂಕಿನ ರೈತರಲ್ಲಿ
ಹರ್ಷ ವ್ಯಕ್ತವಾಗಿದೆ.

Advertisement

ಭರವಸೆಯಂತೆ ಬೇಸಿಗೆ ಹಂಗಾಮ ಹಿಂಗಾರು ಬೆಳೆಗೆ ಭಾನುವಾರದಿಂದಲೇ ನಾಲೆಗಳಿಗೆ ಹರಿಯಲು ಬಿಡಲಾಗಿದ್ದು ರೈತರು ಬಿತ್ತನೆ ಬೀಜ ಬಿತ್ತುವ ಖುಷಿಯಲ್ಲಿದ್ದಾರೆ.

ಕಳೆದ ತಿಂಗಳು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಸದ್ಯಕ್ಕೆ ಇರುವ ಬೆಳೆಗಳನ್ನು ಉಳಿಸಿಕೊಂಡು ನೀರು ಪದ್ಧತಿಯನ್ನು ಬಳಸಿಕೊಂಡರೆ ಅಗತ್ಯ ಬೆಳೆ ಬೆಳೆಯಬಹುದಾಗಿದೆ ಎಂದು ರೈತರು ತಮ್ಮ ಜಮೀನುಗಳನ್ನ ಅಚ್ಚುಕಟ್ಟು ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. 

ಹಿಂಗಾರಿನ ಮಳೆ ಬಿದ್ದು ಆದಷ್ಟು ಜಲಾಶಯದಲ್ಲಿ ನೀರು ಸಂಗ್ರಹ ಮಾಡಿಕೊಂಡ ನೀರಾವರಿ ಅಧಿಕಾರಿಗಳು ನಿಯಮದಂತೆ 4 ಕಟ್ಟು ನೀರು ಹರಿಸಿದ್ದರಿಂದ ಭತ್ತ ಸೇರಿ ಕಬ್ಬು ಇತರೆ ಬೇಸಿಗೆ ಬೆಳೆಗಳಿಗೆ ನೀರು ಬಿಡಲಾಗುತ್ತಿದೆ.

ಆಡಿದ ಮಾತಿನಂತೆ ಭಾನುವಾರ ಉಪವಿಭಾಗಾಧಿಕಾರಿ, ಸಿಡಿಎಸ್‌, ವಿರಿಜಾ, ವರುಣಾ, ಆರ್‌ಬಿಎಲ್‌ಎಲ್‌, ಬಂಗಾರದೊಡ್ಡಿ ನಾಲೆ ಸೇರಿ ಇತರೆ ಕಾವೇರಿ ನದಿ ಅಣೆಕಟ್ಟೆ ಕೆಳಭಾಗದ ಎಲ್ಲಾ ನಾಲೆಗಳಿಗೆ ನೀರು ಹರಿಸಲಾಗಿದೆ.

Advertisement

ಜಲಾಶಯದ ಗರಿಷ್ಠ ಮಟ್ಟ 124,80 ಅಡಿಗಳಿದ್ದು ಪ್ರಸ್ತುತ 102.69 ಅಡಿ ನೀರು ಇದೆ. ಒಳ ಹರಿವಿನ ಪ್ರಮಾಣ 208 ಕ್ಯುಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 4089 ಕ್ಯುಸೆಕ್‌ ನೀರು ಜಲಾಶಯದಿಂದ ಹೊರ ಹೋಗುತ್ತಿದ್ದು ಜಲಾಶ
ಯದಲ್ಲಿ 24.993 ಟಿಎಂಸಿ ನೀರು ಸಂಗ್ರಹವಾಗಿದೆ.

ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಈಗ ನಾಲೆಗಳಿಗೆ ನೀರು ಹರಿಸಿದ್ದರಿಂದ ಸ್ವಲ್ಪ ಮಟ್ಟಿಗೆ ಬೇಸಿಗೆ ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದು ಎಂ.ಶೆಟ್ಟಿಹಳ್ಳಿ, ಕೆ.ಶೆಟ್ಟಹಳ್ಳಿ ರೈತರಾದ ತಿಬ್ಬೇಗೌಡ, ಮಂಜಪ್ಪ, ರೇವಣ್ಣ, ದೇವರಾಜು, ಪುರುಷೋತ್ತಮ್‌, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next