Advertisement
ಇದರಿಂದ ತೆಂಗು, ಇತರೆ ಬೆಳೆಗಾರರಿಗೆ ಸಾಕಷ್ಟು ಉಪಯೋಗವಾಗುತ್ತಿದೆ. 10 ವರ್ಷದ ನಂತರ ಬಂಡೆ ತೆರವು: ಕಾಚೇನಹಳ್ಳಿ ಏತನೀರಾವರಿ ಯೋಜನೆಯ ಎರಡನೇ ಹಂತದ ನಾಲೆ ಕಾಮಗಾರಿ ನಡೆಯುವಾಗ ದಂಡಗನಹಳ್ಳಿ ಬಳಿ 300 ಮೀಟರ್‌ವರೆಗೆ ಕಲ್ಲು ಬಂಡೆಗಳೇ ಇದ್ದವು. ಇದರಿಂದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿತ್ತು. ಇದನ್ನು ಕೆಲವು ರಾಜ ಕಾರಣಿಗಳು ಚುನಾವಣೆಯಲ್ಲಿ ದಾಳವಾಗಿಸಿಕೊಂಡಿದ್ದರು. 10 ವರ್ಷದಿಂದ ಕಾಮಗಾರಿ ಮಾಡಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದವು. ಈಗಕಾಮಗಾರಿ ಮುಕ್ತಾಯವಾಗಿದ್ದು, ನೀರು ಹರಿಯುತ್ತಿದೆ.
Related Articles
Advertisement
ಚನ್ನರಾಯಪಟ್ಟಣ: ತಾಲೂಕಿನಕಾಚೇನಹಳ್ಳಿ ಏತನೀರಾವರಿ ಯೋಜನೆ ಮೂರನೇ ಹಂತಕ್ಕೆಕುಮಾರಸ್ವಾಮಿ ಸಿಎಂ ಆಗಿದ್ದಾಗ141ಕೋಟಿ ರೂ. ಹಣ ಮೀಸಲಿಟ್ಟಿದ್ದು, ಈಗಾಗಲೆ ಸರ್ವೆ ಕಾರ್ಯ ಮಾಡಲಾಗುತ್ತಿದೆ. ಆದರೆ, ಕೆಲವರು3ನೇ ಹಂತದ ಯೋಜನೆಕಾಂಗ್ರೆಸ್ ಪಕ್ಷ ಮಾಡಿದ್ದು ಎಂದು ಹೇಳುತ್ತಿದ್ದಾರೆ. ದಾಖಲೆಗಳು ಇದ್ದರೆ ಬಹಿರಂಗ ಮಾಡಲಿ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸವಾಲು ಹಾಕಿದರು.
ತಾಲೂಕಿನ ದಂಡಿಗನಹಳ್ಳಿ ಬಳಿ ಕಾಚೇನಹಳ್ಳಿ ಏತನೀರಾವರಿ ಯೋಜನೆ ಎರಡನೇ ಹಂತಕ್ಕೆ ಪ್ರಾಯೋಗಿಕ ನೀರು ಹರಿಸಲು ಚಾಲನೆ ನೀಡಿ ಮಾತನಾಡಿದ ಅವರು, ನಾನು ಮಂತ್ರಿ ಆಗಿದ್ದಾಗ ದಂಡಿಗನಹಳ್ಳಿ ಹೋಬಳಿಗೆ 100ಕೋಟಿ ರೂ. ನಲ್ಲಿ ರಸ್ತೆಕಾಮಗಾರಿ ಮಾಡಿಸಿದ್ದೆ. ಅಲ್ಲದೆ, ನೀರಾವರಿ ಇಲಾಖೆಯಿಂದ150 ಕೋಟಿ ರೂ. ವೆಚ್ಚ ಮಾಡಿ ನಾಲೆಕಾಮಗಾರಿ, ಸಮುದಾಯ ಭವನ, ದೇವಾಲಯ ನಿರ್ಮಾಣ ಮಾಡಿದ್ದೇನೆ. ಒಂದು ತಾಲೂಕಿಗೆ ನೀಡುವಷ್ಟು ಹಣ ಹೋಬಳಿಗೆ ನೀಡಿ, ಜನರ ಋಣ ತೀರಿಸುತ್ತಿದ್ದೇನೆ ಎಂದು ಹೇಳಿದರು.
ಮೂರೂವರೆ ವರ್ಷ ವ್ಯಾಪಾರ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೂರೂವರೆ ವರ್ಷ ಜಿಲ್ಲಾ ಮಂತ್ರಿಯಾಗಿದ್ದ ಎ.ಮಂಜು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸದೆ, ವ್ಯಾಪಾರ ಮಾಡಿಕೊಂಡು ತಮ್ಮ ಜೋಬು ತುಂಬಿಸಿಕೊಂಡರು, ಅವರ ಅವಧಿಯಲ್ಲಿ ಯಾಕೆಕಾಚೇನಹಳ್ಳಿ ಏತನೀರಾವರಿ ಯೋಜನೆ ಪೂರ್ಣ ಮಾಡಲು ಸಾಧ್ಯವಾಗಲಿಲ್ಲ, ಐದು ವರ್ಷ ಬಿಜೆಪಿ ಸರ್ಕಾರದ ನಂತರ ಐದು ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರ ಮಾಡಿದೆ. ಆ ವೇಳೆಯಲ್ಲಿ ಈ ಯೋಜನೆ ಪೂರ್ಣ ಮಾಡಿಲ್ಲ, ಇದಕ್ಕೆ ಸೂಕ್ತಕಾರಣ ತಿಳಿಸಬೇಕು ಎಂದು ಹೇಳಿದರು.
ಶಾಸಕ ಬಾಲಕೃಷ್ಣಗೇ ಟಿಕೆಟ್: ರೇವಣ್ಣ :
ಮಾಜಿ ಶಾಸಕ ಪುಟ್ಟೇಗೌಡ ಇತ್ತೀಚೆಗೆಕ್ಷೇತ್ರ ಅಭಿವೃದ್ಧಿ ಹೊಂದುತ್ತಿರುವುದನ್ನು ಸಹಿಸಲಾಗದೆ, ಶಾಸಕ ಬಾಲಕೃಷ್ಣ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ, ಇನ್ನು ಸೂರಜ್‌ಕ್ಷೇತ್ರಕ್ಕೆ ಆಗಮಿಸಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂದು ಹೇಳುವ ಮೂಲಕ ತನ್ನ ಕುಟುಂಬದಲ್ಲಿಕಲಹ ಉಂಟು ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಹೇಳಿದರು.
ಶ್ರವಣಬೆಳಗೊಳ ವಿಧಾನಸಭಾಕ್ಷೇತ್ರಕ್ಕೆ ದೇವೇಗೌಡ ಕುಟುಂಬದವರು ಪಾದಾರ್ಪಣೆ ಮಾಡುವುದಿಲ್ಲ, ಮುಂದಿನ ಬಾರಿ ಹಾಲಿ ಶಾಸಕ ಬಾಲಕೃಷ್ಣರಿಗೆ ಪಕ್ಷದ ಟಿಕೆಟ್ ನೀಡಲಾಗುವುದು, ನನಗಿಂತ ಉತ್ತಮಕೆಲಸ ಮಾಡುತ್ತಿದ್ದಾರೆ. ತಾಲೂಕಿನಕೆರೆಗಳನ್ನು ಸಂಪೂರ್ಣ ತುಂಬಿಸಿ,ಕೃಷಿಗೆ ಅನುಕೂಲ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿ ಬಗ್ಗೆ ಇಲ್ಲ ಸಲ್ಲದ ಮಾತನಾಡುವುದು ತರವಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹೇಳಿದರು.
ನನ್ನ ಮರತೆ ಜನ: ದಂಡಿಗನಹಳ್ಳಿ ಹೋಬಳಿ ಜನತೆ ಎಚ್.ಡಿ.ರೇವಣ್ಣನ ಮರೆತು ಡಾ.ಸೂರಜ್ ಜಪ ಮಾಡುತ್ತಿದ್ದಾರೆ, ಇದನ್ನು ಸಹಿಸಲಾಗದೇಕೆಲವರು ತಾತ ಹಾಗೂ ಅಪ್ಪನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ, ಬಿಜೆಪಿಯಲ್ಲಿ ಅಪ್ಪನ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಲೇವಡಿ ಮಾಡಿದರು.
ಕಳೆದ 30 ವರ್ಷದಿಂದ ನಮ್ಮೂರಕೆರೆಗೆ ನೀರು ಬರುತ್ತದೆ ಎಂದು ಚಾತಕ ಪಕ್ಷಿಯಂತೆಕಾಯುತ್ತಿದ್ದೆವು, ಈಗ ನೀರು ಹರಿಯುವ ಲಕ್ಷಣ ಕಾಣುತ್ತಿದೆ. ದಂಡಿಗನಹಳ್ಳಿ ಹೋಬಳಿ ಜನರಿಗೆ ಸಂತಸವಾಗಿದೆ. – ನಾಗರಾಜು, ರೈತ ಸಂಘದ ಮುಖಂಡ
–ಶಾಮಸುಂದರ್ ಕೆ.ಅಣ್ಣೇನಹಳ್ಳಿ