Advertisement

ಬಿಸಿಯೂಟಕ್ಕೆ ಬಳಸುವ ನೀರಿಗೂ ಪರೀಕ್ಷೆ

06:00 AM Jul 25, 2018 | Team Udayavani |

ರಾಯಚೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1-10ನೇ ತರಗತಿವರೆಗೆ ವ್ಯಾಸಂಗ ಮಾಡುವ ಬಡ ಮಕ್ಕಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಆರಂಭಿಸಿದ ಬಿಸಿಯೂಟ ಯೋಜನೆಯನ್ನು ಮತ್ತಷ್ಟು ಗುಣಮಟ್ಟದ ರೀತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಅದಕ್ಕೆ ಪೂರಕ ಎಂಬಂತೆ ಬಿಸಿಯೂಟಕ್ಕೆ ಬಳಸುವ ನೀರನ್ನು ಪರೀಕ್ಷೆ ಗೊಳಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ.

Advertisement

ಬಿಸಿಯೂಟದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿ ಮಕ್ಕಳು ಅಸ್ವಸ್ಥಗೊಂಡ ಅನೇಕ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ಅದೇ ರೀತಿ ಬಿಸಿಯೂಟ ತಯಾರಿಸಲು ಬಳಸುವ ನೀರು ಕೂಡ ಶುದ್ಧವಾಗಿಲ್ಲ ಎಂಬ ದೂರುಗಳು ಹೆಚ್ಚಾಗಿವೆ. ಇಂದಿಗೂ ಗ್ರಾಮೀಣ ಭಾಗದಲ್ಲಿ ಶುದಟಛಿ ಕುಡಿಯುವ ನೀರಿಗೆ ತಾಪತ್ರಯವಿದ್ದು, ಬೋರ್‌ವೆಲ್‌, ಹಳ್ಳ, ಕೊಳ್ಳದ ನೀರನ್ನೇ ಅಡುಗೆ ಮಾಡಲು ಬಳಸುತ್ತಾರೆ. ಅಂಥ ಕಡೆ ಫ್ಲೋರೈಡ್‌ ಅಂಶವಿರುವ ನೀರನ್ನೇ ಬಿಸಿಯೂಟಕ್ಕೆ ಬಳಸಿದರೆ, ಕೆಲವೆಡೆ ಹಳ್ಳಗಳಲ್ಲಿ ನಿಂತ ನೀರನ್ನೇ ಬಳಸಲಾಗುತ್ತಿದೆ. ಜೂ.30ರಂದು ಅಜಿಂ ಪ್ರೇಮ್‌ಜಿ ಸಂಸ್ಥೆ ಆಯೋಜಿಸಿದ್ದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಮಕ್ಕಳು ಶಾಲೆಗಳಲ್ಲಿ ಕುಡಿಯುವ, ಬಿಸಿಯೂಟಕ್ಕೆ ಬಳಸುವ ನೀರು ಶುದ್ಧವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಆಯಾ ಶಾಲಾ ಹಂತದಲ್ಲಿ ಲಭ್ಯವಿರುವ ಪ್ರಯೋಗಾಲಯಗಳಲ್ಲಿ ನೀರಿನ ಪರೀಕ್ಷೆ ಮಾಡಿಸಿ ವರದಿ ನೀಡುವಂತೆ ಆದೇಶಿಸಲಾಗಿದೆ.

ಆರ್‌ಒ ಅಳವಡಿಕೆಗೆ ಚಿಂತನೆ: ಈಗಾಗಲೇ ಜಿಪಂ ವಿವಿಧ ಯೋಜನೆಗಳಡಿ ಕೆಲ ಗ್ರಾಮಗಳಲ್ಲಿ ಶುದಟಛಿ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿದೆ. ಆದರೆ, ಅವುಗಳಲ್ಲಿ ಸಾಕಷ್ಟು ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿವೆ. ರಾಯಚೂರು ಜಿಲ್ಲೆಯಲ್ಲಿ ಟೆಂಡರ್‌ ಪಡೆದಿದ್ದ ಸಂಸ್ಥೆಯೇ
ಪಲಾಯನ ಮಾಡಿದೆ. ಹೀಗಾಗಿ, ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಇದರಿಂದ ಬಿಸಿಯೂಟಕ್ಕೂ ಶುದಟಛಿ ನೀರು ಸಿಗುತ್ತಿಲ್ಲ. ಇದೇ ಅಂಶವನ್ನು ಪ್ರಧಾನವಾಗಿಸಿಕೊಂಡು ಎಲ್ಲ ಶಾಲೆಗಳಲ್ಲಿ ಪ್ರತ್ಯೇಕ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ 47 ಸಾವಿರಕ್ಕೂ ಅಧಿಕ ಶಾಲೆಗಳಿದ್ದು, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ನೆರವು ಸಿಕ್ಕಲ್ಲಿ ಬಿಸಿಯೂಟಕ್ಕೂ ಶುದ್ಧ ನೀರು ಒದಗಿಸುವ ಚಿಂತನೆ ನಡೆಸಲಾಗಿದೆ.

ಅಗತ್ಯವಿರುವ ಕಡೆ ಮಾತ್ರ: ಈ ಯೋಜನೆ ಎಲ್ಲ ಶಾಲೆಗಳಿಗೆ ಕಡ್ಡಾಯ ಎಂದಲ್ಲ. ಕೆಲವೆಡೆ ಸಿಗುವ ನೀರು ಶುದ್ಧವಾಗಿರುತ್ತದೆ. ಆದರೆ, ಕೆಲವೆಡೆ ಫ್ಲೋರೈಡ್‌ ಅಂಶ ಹೆಚ್ಚಾಗಿರುವುದು ಕಂಡು ಬಂದಿದೆ. ಹೆಚ್ಚು ಸಮಸ್ಯಾತ್ಮಕ ಶಾಲೆಗಳಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಎಲ್ಲ ಜಿಲ್ಲೆಗಳ ಇಲಾಖೆಯ ಮುಖ್ಯಸ್ಥರಿಗೆ ಆದೇಶ ನೀಡಿದ್ದು, ನೀರಿನ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ. ಎಲ್ಲ ಜಿಲ್ಲೆಗಳಿಂದ ವರದಿ ಸಂಗ್ರಹಿಸಿದ ಬಳಿಕವೇ ವಸ್ತುಸ್ಥಿತಿ ಆಧರಿಸಿ ಎಚ್‌ ಆರ್‌ಎಂಡಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದ್ದಾರೆ ಇಲಾಖೆಯ ಅಧಿಕಾರಿಗಳು.

ಬಿಸಿಯೂಟಕ್ಕೆ ಒಳಪಡುವ ಎಲ್ಲ ಶಾಲೆಗಳ ನೀರಿನ ಗುಣಮಟ್ಟ ಪರೀಕ್ಷೆಗೆ ಆದೇಶ ನೀಡಲಾಗಿದ್ದು, ಪ್ರತಿ ಜಿಲ್ಲೆಯಿಂದ ಪರೀಕ್ಷೆಯ ಕ್ರೋಢೀಕೃತ ವರದಿ ನೀಡುವಂತೆ ಕೇಳಲಾಗಿದೆ. ಅದನ್ನು ಆಧರಿಸಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಗೆ ಆರ್‌ಒ ಪ್ಲಾಂಟ್‌ಗಳ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸುವ ಚಿಂತನೆ ಇದೆ.
● ಚಂದ್ರಯ್ಯ, ಮಧ್ಯಾಹ್ನ ಉಪಾಹಾರ ಯೋಜನೆ, ಅಧಿಕಾರಿ, ಬೆಂಗಳೂರು

Advertisement

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next