Advertisement

ಅಪಾಯಕಾರಿ ಸ್ಥಿತಿಯಲ್ಲಿ ನೀರಿನ ಟ್ಯಾಂಕ್‌

03:13 PM Jun 11, 2018 | |

ಎಡಪದವು : ಸಾರ್ವಜನಿಕರಿಗೆ ನೀರು ಪೂರೈಸಲು ಮಳಲಿ ಸೈಟ್‌ನ ದಲಿತ ಕಾಲನಿ ಪ್ರದೇಶದಲ್ಲಿರುವ ನೀರಿನ ಟ್ಯಾಂಕ್‌ ಕುಸಿಯುವ ಸ್ಥಿತಿಯಲ್ಲಿದೆ. ಇಲ್ಲಿ ಸಾರ್ವಜನಿಕರಿಗೆ ನೀರು ಪೂರೈಸಲು ಕೆಲವರ್ಷಗಳ ಹಿಂದೆ ಬೃಹತ್‌ ನೀರಿನ ಟ್ಯಾಂಕ್‌ ನಿರ್ಮಿಸಿದ್ದು, ಈಗ ಅದು ತೀರಾ ಹಳತಾಗಿದೆ. ಇದರ ಪಿಲ್ಲರ್‌ಗಳಿಗೆ ತುಕ್ಕು ಹಿಡಿದಿದ್ದು, ಆತಂಕಕ್ಕೆ ಕಾರಣವಾಗಿದೆ. ನೀರಿನ ಟ್ಯಾಂಕ್‌ ಸಮೀಪವೇ ದಲಿತ ಕಾಲನಿ ಇದ್ದು, ಐದಾರು ಮನೆಗಳಿವೆ. ಬೋರ್‌ವೆಲ್‌ನಿಂದ ತೆಗೆದ ನೀರನ್ನು ಈ ನೀರಿನ ಟ್ಯಾಂಕ್‌ಗೆ ತುಂಬಿಸಿ ಬಳಿಕ ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ. ನೀರು ತುಂಬುವ ಕಾರಣ ಟ್ಯಾಂಕ್‌ ಭಾರವಾಗಿ ಕುಸಿದು ಬೀಳುವ ಸಾಧ್ಯತೆ ಇದೆ. ಸಮೀಪದಲ್ಲೇ ಜನವಸತಿ ಪ್ರದೇಶವಿರುವುದರಿಂದ ಇಲ್ಲಿನವರು ಆತಂಕಕ್ಕೀಡಾಗಿದ್ದಾರೆ.

Advertisement

ಈ ನೀರಿನ ಟ್ಯಾಂಕ್‌ ತೆಗೆದು ಬೇರೆ ಟ್ಯಾಂಕ್‌ ನಿರ್ಮಿಸಿ ನೀರು ಪೂರೈಸುವಂತೆ ಇಲ್ಲಿನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟ್ಯಾಂಕ್‌ನ ದುರ್ಬಲತೆಯ ಬಗ್ಗೆ ಸ್ಥಳೀಯರು ಗಂಜಿಮಠ ಪಂಚಾಯತ್‌ಗೆ ಮಾಹಿತಿ ನೀಡಿದ್ದು, ಪಂಚಾಯತ್‌ನವರು ಈ ಬಗ್ಗೆ ವರದಿ ತಯಾರಿಸಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಮಾಹಿತಿ ನೀಡಲಾಗಿದೆ
ಮಳಲಿ ಸೈಟ್‌ ಪ್ರದೇಶದ ನೀರಿನ ಟ್ಯಾಂಕ್‌ ಹಳತಾಗಿ ಅಪಾಯಕಾರಿಯಾಗಿ ಪರಿಣಮಿಸಿದ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ವರದಿ ತಯಾರಿಸಿ ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಅವರಿಗೆ ನೀಡಲಾಗಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದ್ದು, 2-3 ವರ್ಷ ಬಾಳಿಕೆ ಬರಬಹುದು. ಈ ಟ್ಯಾಂಕ್‌ ಬದಲಿಸಲು ಕ್ರಮ ತೆಗೆದುಕೊಂಡು ಅದಕ್ಕೆ ಬೇಕಾದ ಹಣ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಿದ್ದಾರೆ.
– ಜಗದೀಶ್‌
ಪಿಡಿಒ, ಗಂಜಿಮಠ 

ಗಿರೀಶ್‌ ಮಳಲಿ

Advertisement

Udayavani is now on Telegram. Click here to join our channel and stay updated with the latest news.

Next