Advertisement
ಪಾಪೆಮಜಲು ನಿವಾಸಿ ಅಂಗಾರ – ದೇವಕಿ ದಂಪತಿಯ ಪುತ್ರ ರಮೇಶ್ ಯಾನೆ ರಾಮ (30) ಮೃತ ಪಟ್ಟವರು. ದಂಪತಿಗೆ ಮೂವರು ಮಕ್ಕಳಿದ್ದು ರಮೇಶ್ ಹಿರಿಯ ಪುತ್ರ. ಅವರ ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ತಂದೆ ಈ ಹಿಂದೆ ನಿಧನಹೊಂದಿದ್ದರು. ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬವು ಹಿರಿಯ ಸಹೋದರನ ಸಾವಿನಿಂದ ಕಂಗೆಟ್ಟಿದೆ. ಗಂಭೀರವಾಗಿ ಗಾಯಗೊಂಡಿರುವ ಮಾಧವ ಅವರನ್ನು ಆಸ್ಪ ತ್ರೆಗೆ ದಾಖಲಿಸಲಾಗಿದೆ.
5 ಅಡಿ ಎತ್ತರ, 6 ಅಡಿ ಅಗಲದ ಈ ಟ್ಯಾಂಕನ್ನು 6 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ಒಮ್ಮೆಯೂ ನೀರು ತುಂಬಿಸಿರಲಿಲ್ಲ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ನೀರು ತುಂಬಿಸಲು ನೋಡಿದಾಗ ಟ್ಯಾಂಕ್ ಬಿರುಕು ಬಿಟ್ಟಿರುವುದು ಕಂಡುಬಂದಿತ್ತು. ಬಿರುಕು ಮುಚ್ಚುವ ಕೆಲಸ ಮಾಡಿದ ಬಳಿಕ ನಾಲ್ಕೈದು ದಿನಗಳಿಂದ ಸ್ವಲ್ಪ ಸ್ವಲ್ಪ ನೀರು ತುಂಬಿಸಿ ಪರೀಕ್ಷಿಸಲಾಗಿತ್ತು. ಯಾವುದೇ ಸೋರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಜ. 26ರಂದು ರಾತ್ರಿ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿ ಸಲು ಯೋಜಿಸಿದ್ದರು. ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಗ್ರಾ.ಪಂ. ಅಧ್ಯಕ್ಷೆ ಸವಿತಾ, ಪಿಡಿ ಒ ಪದ್ಮಕುಮಾರಿ, ಪಂ. ಸದಸ್ಯರಾದ ಸಂತೋಷ ಮಣಿಯಾಣಿ, ಚಿತ್ರಾ ನಾಯ್ಕ…, ನಿರ್ಮಲಾ, ತಿಲಕ್ ರೈ ಕುತ್ಯಾಡಿ, ಶಶಿಕಲಾ ಚೌಟ, ಕಾವು ಹೇಮನಾಥ ಶೆಟ್ಟಿ, ಸಂಪ್ಯ ಗ್ರಾಮಾಂತರ ಠಾಣಾ ಠಾಣಾ ಎಸ್‌ಐ ಸತ್ತಿವೇಲು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿ¨ªಾರೆ.
Related Articles
ತಡರಾತ್ರಿ 11.30ರ ಹೊತ್ತಿಗೆ ಟ್ಯಾಂಕಿನಲ್ಲಿ ನೀರು ತುಂಬಿದೆಯಾ ಎಂದು ನೋಡಲು ಸ್ಥಳೀಯ ನಾಲ್ವರು ಯುವಕರು ಹೋಗಿದ್ದು, ಟ್ಯಾಂಕಿಗೆ ಇಣುಕಿ ನೋಡುವ ಯತ್ನದಲ್ಲಿದ್ದಾಗ ಏಕಾಏಕಿ ಒಡೆದುಹೋಯಿತು. ಟ್ಯಾಂಕ್ ಮೇಲೇರಲು ಏಣಿಯಾಗಲೀ ಮೆಟ್ಟಿಲಾಗಲಿ ಇರಲಿಲ್ಲ. ನೀರು ತುಂಬುತ್ತಿದ್ದಂತೆ ಟ್ಯಾಂಕ್ ಒಡೆದಿದ್ದು, ಹತ್ತಿರದಲ್ಲಿದ್ದ ರಮೇಶ್ ಎದೆಗೆ ಹಾಗೂ ಮಾಧವ ಅವರ ಕಾಲಿಗೆ ಕಲ್ಲು ಬಿದ್ದು ಗಂಭೀ ರ ವಾಗಿ ಗಾಯ ಗೊಂಡರು. ತತ್‌ಕ್ಷಣ ಗಾಯಾಳು ಗಳನ್ನು ಪುತ್ತೂರು ಆಸ್ಪತ್ರೆಗೆ ತರಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯು ತ್ತಿದ್ದ ವೇಳೆ ರಮೇಶ್ ಮೃತಪಟ್ಟರು.
Advertisement