ಆಯೋಗ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಪ್ರಸ್ತುತ 41.705 ಶತಕೋಟಿ ಕ್ಯುಬಿಕ್ ಮೀಟರ್(ಬಿಸಿಎಂ) ನೀರಿನ ಸಂಗ್ರಹವಿದೆ.ಅಂದರೆ, ಇದು ಒಟ್ಟು ಸಾಮರ್ಥ್ಯದ ಶೇ.23ರಷ್ಟು. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ದಾಖಲಾದ 53.832 ಬಿಸಿಎಂ ಮತ್ತು 44.511 ಬಿಸಿಎಂನ ಸಾಮಾನ್ಯ ಸಂಗ್ರಹಕ್ಕೆ ಹೋಲಿಸಿದರೆ ಇಳಿಕೆಯಾಗಿದೆ.
Advertisement
ಪರಿಣಾಮ, ಪ್ರಸ್ತುತ ಸಂಗ್ರಹವು ಕಳೆದ ವರ್ಷದ ಮಟ್ಟಕ್ಕಿಂತ ಕೇವಲ ಶೇ.77 ಮತ್ತು ಸಾಮಾನ್ಯ ಸಂಗ್ರಹವು ಶೇ.94 ಆಗಿದೆ ಎಂದಿದೆ. ಮತ್ತೂಂದೆಡೆ, ದಕ್ಷಿಣ ಭಾರತದ ಆಂಧ್ರ, ತೆಲಂಗಾಣ, ಕೇರಳ, ಕರ್ನಾ ಟಕ, ತಮಿಳುನಾಡಿನ ಒಟ್ಟು 42 ಜಲಾ ಶಯಗಳಲ್ಲಿ ಒಟ್ಟು ನೀರಿನ ಸಂಗ್ರಹವು 53.334 ಬಿಸಿಎಂ ಇದ್ದು, ಸದ್ಯ ನೀರಿನ ಸಂಗ್ರಹವು 7.317 ಬಿಸಿಎಂ ಅಥವಾ ಶೇ.7ರಷ್ಟು ಮಾತ್ರವೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಕುಸಿತ ಕಂಡಿದೆ ಎಂದು ಹೇಳಿದೆ.