Advertisement

“ಮಳೆನೀರು ಮರುಪೂರಣದಿಂದ ನೀರಿನ ಸಮಸ್ಯೆ ನಿವಾರಣೆ’

07:40 AM May 31, 2018 | Team Udayavani |

ಬದಿಯಡ್ಕ:  ಬಡವರು ಬಲ್ಲಿದರೆಂಬ ಭೇದವಿಲ್ಲದೆ ಪ್ರತಿಯೊಬ್ಬರ ಮನೆಯ ಮೇಲೂ ಅವರ ಇಡೀ ಕುಟುಂಬಕ್ಕೆ ಒಂದು ವರ್ಷಕ್ಕೆ ಅಗತ್ಯ ಇರುವುದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ನೀರು ಮಳೆಯ ರೂಪದಲ್ಲಿ ಛಾವಣಿಯ ಮೇಲೆ ಸುರಿಯುತ್ತಿದ್ದು ಆ ನೀರನ್ನು ಅವರವರ ಬಾವಿ ಅಥವಾ ಇಂಗು ಗುಂಡಿಗಳಿಗೆ ಮರು ಪೂರಣಗೊಳಿಸಿದಲ್ಲಿ ಬೇಸಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಖ್ಯಾತ ಜಲ ಮತ್ತು ಪರಿಸರ ತ್ರಜ್ಞ ಶ್ರೀಪಡ್ರೆಯವರು ಅಭಿಪ್ರಾಯ ವ್ಯಕ್ತಪಡಿಸಿದರು. 

Advertisement

ಅವರು ಗ್ರಾಮೀಣ ಅಭಿವೃದ್ಧಿ ಕ್ರಿಯಾ ಸಮಿತಿ ಸುದರ್ಶನದ ಸ್ತ್ರೀ ಶಕ್ತಿ ಮಹಿಳಾ ಘಟಕದ ವತಿಯಿಂದ ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಆಯೋಜಿಸಿದ ಕನ್ಸರ್ವ್‌ ವಾಟರ್‌,ಸೇವ್‌ ಪ್ಲಾನೆಟ್‌(ನೀರನ್ನು ಸಂರಕ್ಷಿಸಿ ,ಭೂಮಿಯನ್ನು ಉಳಿಸಿ)ಕಾರ್ಯಕ್ರಮದಲ್ಲಿ‌ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾಹಿತಿ ನೀಡಿದರು. ಕೇವಲ ಎರಡು ದಿನಗಳ ಮಾನವ ಶ್ರಮದೊಂದಿಗೆ ಸೂಕ್ತ ಯೋಜನೆ ರೂಪಿಸಿ ನೀರಿಂಗಿಸಿದಲ್ಲಿ ಬಾವಿಯಲ್ಲಿನ ನೀರಿನ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯ ಎಂದು  ಹೇಳಿದರು.

ಎಣ್ಮಕಜೆ,ಕುಂಬಾxಜೆಪಂಚಾಯತ್‌  ವ್ಯಾಪ್ತಿಯ ಕುಡಿ ನೀರು ಸಮಸ್ಯೆಯಿಂದ ಬಳಲುತ್ತಿದ್ದಹಲವು ಮನೆಗಳಿಗೆ 
‘ಜಲಯಜ್ಞ’ಯೋಜನೆಯಂತೆ ದಾನಿಗಳ ಸಹಾಯದೊಂದಿಗೆ ನೀರಿನ ಸರಬರಾಜು ನಡೆಸುತ್ತಿರುವ ಸುದರ್ಶನಕ್ರಿಯಾ ಸಮಿತಿಯ ಚಟುವಟಿಕೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಅರಿತ ಜಿಲ್ಲಾಧಿಕಾರಿ ಕೆ.ಜೀವನ್‌ ಬಾಬು ಅವರ ನಿರ್ದೇಶದಂತೆ ಜಲ ಸಂರಕ್ಷಣೆಗೆ ಪೂರಕವಾದ ಕ್ರಿಯಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಎಣ್ಮಕಜೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರೂಪವಾಣಿ ಅರ್‌.ಭಟ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾತನಾಡಿ ಪಂಚಾಯಯ್‌  ಕೈಗೊಂಡಿರುವ ಯೋಜನೆಗಳ ಮಾಹಿತಿ ನೀಡಿದರು.

ಜನಪರ ಯೋಜನೆಗಳನ್ನು ಕೈಗೆತ್ತಿ ಸಾûಾತ್ಕಾರ ಗೊಳಿಸುವಲ್ಲಿ ಯಶಸ್ಸನ್ನು ಪಡೆದಿರುವ ಸುದರ್ಶನ ಕ್ರಿಯಾ ಸಮಿತಿಯು ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮವು ಸಮಯೋಚಿತ ಹಾಗೂ ಮಾದರಿ ಕಾರ್ಯ ಎಂದು ಪ್ರಶಂಶಿಸಿದರು.ಬ್ಲೋಕ್‌ ಪಂಚಾಯತು ಸದಸ್ಯೆ ಸವಿತಾ ಬಾಳಿಕೆ ದೇಶದಾದ್ಯಂತ ವಿವಿಧ ಕಡೆಗಳಲ್ಲಿ ಹಲವು ವರ್ಷಗಳಿಂದ ಅನುಭವಿಸಲ್ಪಟ್ಟ ನೀರಿನ ಅಭಾವ ಹಾಗೂ ಅದಕ್ಕೆ ಅವರು ಕಂಡು ಕೊಂಡತಹ ಪರಿಹಾರ ,ಬರಡು ನೆಲದಲ್ಲಿ ಮತ್ತೆ ನದಿ ಹರಿಯುವುದರ ಮೂಲಕ  ಉಂಟಾದ ಬದಲಾವಣೆಗಳ ಮಾಹಿತಿ ನೀಡಿದರು. 

Advertisement

ಮಳೆನೀರಿಂಗಿಸಿ ಅಂತರ್ಜಲದ ಪ್ರಮಾಣವನ್ನು ಹೆಚ್ಚಿಸುವುದರ ಪ್ರಾತ್ಯಕ್ಷಿಕೆ ಜಲ ಸಂರಕ್ಷಣೆ ,ಮರು ಪೂರಣೆ ಹಾಗೂ ಪುನರ್ಬಳಕೆ ಬಗ್ಗೆ ಶ್ರೀಪಡೆ ಮಾಹಿತಿ ಒದಗಿಸಿದದರು.ಸ್ವರ್ಗ ಶಾಲಾ ಅಧ್ಯಾಪಕ‌ ಮಂಜುನಾಥ ಭಟ್‌ ,ಶಿಕ್ಷಕಿ ಜಯಲಕ್ಮಿà  ಕುಂಟಿಕಾನ ಸಹಕರಿಸಿದರು.  ಮುಖ್ಯೋಪಾಧ್ಯಾಯಿನಿ ಗೀತಾ ಕುಮಾರಿ.ಬಿ ಮುಖ್ಯ ಅತಿಥಿಯಾಗಿ ದ್ದರು.ಸ್ವರ್ಗ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್‌.ಕೆ. ವೈ, ಸುದರ್ಶನ ಕ್ರಿಯಾ ಸಮಿತಿ ಸದಸ್ಯರು ,ಮಹಿಳಾ ಘಟಕದ ಸದಸ್ಯೆಯರು ಉಪಸ್ಥಿತರಿದ್ದರು. ಶಶಿಕಲಾ ವೈ ಸ್ವಾಗತಿಸಿ ಶ್ಯಾಮಲಾ ಆರ್‌ ಭಟ್‌ ಪತ್ತಡ್ಕ ವಂದಿಸಿದರು.ನಳಿನಿ ಸೈಪಂಗಲ್ಲು ಕಾರ್ಯಕ್ರಮ ನಿರೂಪಿಸಿದರು.

ಉತ್ತಮ ಕಾರ್ಯ ಜಟುವಟಿಕೆ 
‘ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಸರಳ ಹಾಗೂ ಸುಲಭ ವಿಧಾನಗಳ ಮೂಲಕ ನೀರನ್ನು ಇಂಗಿಸುವ ಪ್ರಯತ್ನದಲ್ಲಿ ತೊಡಗಿಸಿ ಕೊಂಡಲ್ಲಿ ನೀರಿನ ಅಭಾವದ ಸಮಸ್ಯೆಯಿಂದ ಪಾರಾಗಬಲ್ಲೆವು. ಗ್ರಾಮೀಣ ಪ್ರದೇಶದಲ್ಲಿ ಕ್ರಿಯಾ ಸಮಿತಿ ಹಮ್ಮಿಕೊಂಡಂತಹ ಉತ್ತಮ ಕಾರ್ಯ ಚಟುವಟಿಕೆ ಇದಾಗಿದ್ದು ಅನುಷ್ಠಾನ ಗೊಳಿಸಿದಲ್ಲಿ ಇಂತಹ ಚಟುವಟಿಕೆಗಳು ಸಾರ್ಥಕ

– ಸವಿತಾ ಬಾಳಿಕೆ 
ಬ್ಲಾಕ್‌ ಪಂಚಾಯತ್‌ ಸದಸ್ಯೆ

ಯೋಜನೆಗೆ ಸಹಕಾರ ಅತ್ಯಗತ್ಯ
‘ಮಳೆ ನೀರು ಸಂಗ್ರಹಕ್ಕಾಗಿ  ಪಂಚಾಯತ್‌ ಹಲವು ಯೋಜನೆಗಳನ್ನುಕೈಗೊಂಡಿದೆ.ಸರಿಯಾದ ತಾಂತ್ರಿಕ ಹಾಗೂ ಉದ್ಯೋಗಸ್ಥರ ಸಹಕಾರ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಅತ್ಯಗತ್ಯ  ಜಲ ಸಂರಕ್ಷಣೆ,ಮರು ಪೂರಣೆ ವಿಧಾನಗಳ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದೆ. ಆದುದರಿಂದ ಜನರಿಗೆ ಅರಿವು ಮೂಡಿಸುವ ಕಾರ್ಯ ತ್ವರಿತಗತಿಯಲ್ಲಿ ಸಾಗಬೇಕು

– ರೂಪವಾಣಿ ಭಟ್‌ 
ಗ್ರಾಮ ಪಂಚಾಯತ್‌ ಅಧ್ಯಕ್ಷೆ 

Advertisement

Udayavani is now on Telegram. Click here to join our channel and stay updated with the latest news.

Next