Advertisement

12 ತಿಂಗಳೂ ಫಿಲ್ಟರ್ ನದ್ದೇ ಸಮಸ್ಯೆ ! ‌ಕೆರೆಯಲ್ಲಿ ಆಗಾಗ ಕೆಟ್ಟು ನಿಲ್ಲುವ ಫಿಲ್ಟರ್

12:05 PM Feb 10, 2022 | Team Udayavani |

ಸಿರುಗುಪ್ಪ: ತಾಲೂಕಿನ ಕರೂರು ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಕೆರೆಯಲ್ಲಿ ನೀರು ಶುದ್ಧೀಕರಿಸಿ ಬಿಡುವ ಫಿಲ್ಟರ್ ಆಗಾಗ ಕೈಕೊಡುತ್ತಿರುವುದರಿಂದ ವರ್ಷದ 12 ತಿಂಗಳು ಇಲ್ಲಿ ಫಿಲ್ಟರ್ ನದ್ದೇ ಸಮಸ್ಯೆಯಾಗುತ್ತಿದೆ.

Advertisement

ಗ್ರಾಮಸ್ಥರಿಗೆ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕೆರೆ ನಿರ್ವಹಣೆಯನ್ನು ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಟೆಂಡರ್‌ ಕರೆದು ಗುತ್ತಿಗೆ ನೀಡಲಾಗುತ್ತದೆ. ಸುಮಾರು 44 ಲಕ್ಷ ರೂ. ವೆಚ್ಚದಲ್ಲಿ ಜಲ್‌ಜೀವನ್‌ ಮಿಷನ್‌ ಯೋಜನೆಯಡಿ ಕೆರೆಯಲ್ಲಿ ಬಂಡೆ ಹಾಸುವುದು
ಮತ್ತು ಕೆರೆಯಿಂದ ಗ್ರಾಮಕ್ಕೆ ನೀರು ಹರಿಸಲು ಪೈಪ್‌ಲೈನ್‌ ಅಳವಡಿಸಲು ಹಾಗೂ ಗ್ರಾಮದಲ್ಲಿ ಪ್ರತಿಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲು ಪೈಪ್‌ಲೈನ್‌ಗಳನ್ನು ಅಳವಡಿಸುವ ಕಾರ್ಯ
ನಡೆಯಬೇಕಾಗಿದೆ.

ಇದನ್ನೇ ನೆಪವಾಗಿಟ್ಟುಕೊಂಡು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೆರೆಯಿಂದ ಗ್ರಾಮಕ್ಕೆ ಗ್ರಾಮದಲ್ಲಿ ಮನೆ ಮನೆಗೆ ಪೈಪ್‌ಲೈನ್‌ ಅಳವಡಿಸುವ ಕಾರ್ಯಕ್ಕೆ ಇನ್ನೂ ಚಾಲನೆ ದೊರೆತಿಲ್ಲ.
ಗ್ರಾಮಕ್ಕೆ ನೀರು ಪೂರೈಕೆ ಮಾಡುವ 2 ಫಿಲ್ಟರ್ ಘಟಕಗಳಿದ್ದು, ಸದ್ಯ ಒಂದು ಫಿಲ್ಟರ್ ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅದು ಕೂಡ ಸರಿಯಾಗಿ ಕಾರ್ಯನಿರ್ವಹಣೆ ಮಾಡದೇ ಇರುವುದರಿಂದ ನೀರು ಸರಿಯಾಗಿ ಶುದ್ಧೀಕರಣವಾಗದೆ ನಲ್ಲಿಗಳಿಗೆ ಪೂರೈಕೆಯಾಗುತ್ತಿವೆ. ಕೆರೆಯಿಂದ ನೀರು ಸಮರ್ಪಕವಾಗಿ ಫಿಲ್ಟರ್ ಆಗಿ ಬರುತ್ತವೆ ಎಂದು ಗ್ರಾಮಸ್ಥರು ಈ ನೀರನ್ನು ಕುಡಿಯಲು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಸಂಗ್ರಹಿಸಿದ ನೀರಿನ ತಳದಲ್ಲಿ ಮಣ್ಣು ಶೇಖರಣೆಯಾಗುತ್ತಿದೆ. ಈ ನೀರನ್ನು ಕುಡಿದರೆ ಯಾವುದಾದರೂ ಕಾಯಿಲೆ ಬರಬಹುದು ಎನ್ನುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಆದ್ದರಿಂದ ಸರಿಯಾಗಿ ಫಿಲ್ಟರ್ ನಲ್ಲಿ ನೀರನ್ನು ಶುದ್ಧೀಕರಿಸಿ ಬಿಟ್ಟರೆ ಮಾತ್ರ ಅನುಕೂಲವಾಗುತ್ತದೆ ಈ ಬಗ್ಗೆ ಅ ಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು
ಒತ್ತಾಯಿಸಿದ್ದಾರೆ.

ಕರೂರು ಕೆರೆಯಲ್ಲಿರುವ ಫಿಲ್ಟರ್ ನಲ್ಲಿ ನೀರು ಸರಿಯಾಗಿ ಶುದ್ಧೀಕರಣವಾಗುತ್ತಿಲ್ಲವೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೀರನ್ನು ಸರಿಯಾಗಿ ಶುದ್ಧೀಕರಿಸಿ ಬಿಡಲು ಕ್ರಮ ತೆಗೆದುಕೊಳ್ಳಲಾಗುವುದು.

– ಕಾಂತರಾಜ್‌, ಜೆಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖ

Advertisement

ಕೆರೆಯಲ್ಲಿರುವ ಫಿಲ್ಟರ್ ನಲ್ಲಿ ನೀರು ಶುದ್ಧೀಕರಣ ಸರಿಯಾಗಿ ನಡೆಯುತ್ತಿಲ್ಲವೆಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
– ಶಿವಪ್ಪ, ಪಿಡಿಒ

ಕೆರೆ ನಿರ್ವಹಣೆಗಾಗಿ ಲಕ್ಷಾಂತರ ರೂ. ವೆಚ್ಚವಾಗುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ ದಿಂದ ಫಿಲ್ಟರ್ ನಲ್ಲಿ ನೀರು ಸರಿಯಾಗಿ ಶುದ್ಧೀಕರಣವಾಗುತ್ತಿಲ್ಲ.
– ವೈ.ಕೃಷ್ಣಾರೆಡ್ಡಿ, ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next