Advertisement
ನಗರದಲ್ಲಿ ಹಲವು ವಾರ್ಡ್‌ಗಳಿಗೆ ನೀರು ಸಮರ್ಪಕ ಪ್ರಮಾಣದಲ್ಲಿ ಲಭಿಸುತ್ತಿಲ್ಲ. ಟ್ಯಾಂಕರ್‌ಗಳಿಗೂ ನೀರು ಸಿಗುತ್ತಿಲ್ಲ. ಹೀಗಾಗಿ ಟ್ಯಾಂಕರ್ ನೀರು ಕೂಡ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂಬ ಆರೋಪವಿದೆ.
Related Articles
Advertisement
ವೆನ್ಲಾಕ್ ಆಸ್ಪತ್ರೆಯಲ್ಲಿ ನೀರಿಗೆ ಹಾಹಾಕಾರ!ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ನೀರಿನ ಕೊರತೆ ಬಹುವಾಗಿ ಕಾಡುತ್ತಿದೆ. ಆಸ್ಪತ್ರೆಯ ಒಪಿಡಿ, ಡಯಾಲಿಸಿಸ್ ಕೇಂದ್ರ ಸಹಿತ ಆಸ್ಪತ್ರೆಯ ವಿವಿಧ ವಿಭಾಗದ ನಿರ್ವಹಣೆಗಾಗಿ ನೀರಿನ ಹಾಹಾಕಾರ ತಲೆದೋರಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲೂ ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ದೂರುತ್ತಿದ್ದಾರೆ. 5 ಎಕ್ರೆ ಪ್ರದೇಶದಲ್ಲಿ ಆಸ್ಪತ್ರೆ ಇದ್ದರೂ ಸಮರ್ಪಕ ನೀರಿಗೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಮಾಡದಿರುವ ಕಾರಣದಿಂದ ಈಗ ನೀರಿನ ಸಮಸ್ಯೆ ಎದುರಾಗಿದೆ. ಆಸ್ಪತ್ರೆ ಪರಿಸರದಲ್ಲಿ ಮಳೆಕೊಯ್ಲು ಮಾಡಲು ಅವಕಾಶವಿದ್ದರೂ ಅದು ಅನುಷ್ಠಾನವಾಗಿಲ್ಲ! ಒಂದೆಡೆ ಸೆಕೆ-ಇನ್ನೊಂದೆಡೆ ನೀರಿಲ್ಲ!
“ಮಳೆ ಇಲ್ಲದೆ ನಗರದಲ್ಲಿ ಸೆಕೆ ವಿಪರೀತ ಆಗಿದೆ. ರಣಬಿಸಿಲಿನಿಂದ ಕಂಗಾಲಾಗುವ ಪರಿಸ್ಥಿತಿ ಉಂಟಾಗಿದೆ. ಬಿಸಿಲ ಝಳದಿಂದ ತರಗತಿಯಲ್ಲಿ ಕುಳಿತು ಪಾಠ ಮಾಡಲೂ ಆಗದ ಪರಿಸ್ಥಿತಿ ಇದೆ. ಮತ್ತೂಂದೆಡೆ ಬೇಕಾದಷ್ಟು ನೀರು ಕೂಡ ಸಿಗುತ್ತಿಲ್ಲ. ರೇಷನಿಂಗ್ ಸಮಸ್ಯೆ ಒಂದೆಡೆಯಾದರೆ, ಬಹುದಿನದವರೆಗೆ ಪೈಪ್‌ಲೈನ್ ಕೆಲಸದ ನೆಪದಿಂದ ನೀರು ಸಿಗುತ್ತಿಲ್ಲ. ಎಲ್ಲರೂ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮಳೆ ಮತ್ತಷ್ಟು ಮುಂದೆ ಹೋದರೆ ನಗರದ ಕಥೆ ಹೇಳತೀರದು’ ಎನ್ನುತ್ತಾರೆ ಕಾಲೇಜಿನ ಅಧ್ಯಾಪಕರೊಬ್ಬರು.