ಚಿಂಚೋಳಿ: ತಾಲೂಕಿನಲ್ಲಿ ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿದ್ದು, ಕೊಳವೆ ಮತ್ತು ತೆರದ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
ಶಾಸಕ ಡಾ| ಉಮೇಶ ಜಾಧವ ಕಳೆದ ಮೂರು ತಿಂಗಳಿಂದ ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಸಿಲ್ಲ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮ-ತಾಂಡಾಗಳಿಗೆ ಒಮ್ಮೆಯೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಆಲಿಸಿಲ್ಲ. ತಾಲೂಕಿನಲ್ಲಿ 37 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
262 ಕೊಳವೆ ಬಾವಿಗಳಲ್ಲಿ ಒಟ್ಟು 183 ಸುಸ್ಥಿತಿಯಲ್ಲಿವೆ. 81 ಕೊಳವೆಬಾವಿ ಬತ್ತಿ ಹೋಗಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿವೆ. ರುಮ್ಮನಗೂಡ, ಪಸ್ತಪುರ ರಟಕಲ್, ಗಂಜಗೇರಾ, ರಾಮತಿರ್ಥ, ಸುಂಠಾಣ, ಗರಗಪಳ್ಳಿ, ಯಲ್ಮಾಮಡಿ, ಮೋನುನಾಯಕ ತಾಂಡಾ, ಸಿರಸನ ಬುಗಡಿ ತಾಂಡಾ, ಮೋಘಾ, ಕುಂಚಾವರಂ, ಮೊಗದಂಪುರ, ಚಿಂದಾನೂರ, ಚಾಪ್ಲಾನಾಯಕ ತಾಂಡಾ, ಚಿಕ್ಕನಿಂಗದಳ್ಳಿ, ಜಿಲವರ್ಷ, ಧರ್ಮಸಾಗರ, ಅಂತಾವರಂ, ಕುಸರಂಪಳ್ಳಿ, ನಾಗಾಇದಲಾಯಿ, ಸೂರುನಾಯಕ ತಾಂಡಾ, ಬೆನಕೆಪಳ್ಳಿ, ಫತ್ತುನಾಯಕ ತಾಂಡಾ, ಎಂಪಳ್ಳಿ, ಗುರಂಪಳ್ಳಿ, ಇದ್ದಲಮೊಕ ತಾಂಡಾ, ಗೊಂದಲಸೇತ ತಾಂಡಾ, ರಾಮಚಂದ್ರ ನಾಯಕ ತಾಂಡಾ, ಪೆದ್ದಾತಾಂಡಾ, ಸೇರಿಭಿಕನಳ್ಳಿ ತಾಂಡಾಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಆದರೂ ಸಂಬಂಧಿಸಿದ ಇಲಾಖೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ ಎಂದು ಎಂಬುದು ಸಾರ್ವಜನಿಕರ ಆರೋಪವಾಗಿದೆ.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು 170 ಲಕ್ಷ ರೂ.ಅನುದಾನ ನೀಡುವಂತೆ ಟಾಸ್ಕ್ಫೋರ್ಸ್ ಸಮಿತಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿದೆ. ಆದರೆ ಅನುದಾನ ಇನ್ನು ಬಿಡುಗಡೆ ಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಕೆಳದಂಡ ಮುಲ್ಲಾಮಾರಿ ಜಲಾಶಯದಿಂದ ನೀರು ಹರಿದುಬಿಟ್ಟಿದ್ದರಿಂದ ನದಿ ದಂಡೆಯಲ್ಲಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಆದರೆ ಇನ್ನುಳಿದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿ¨
ಶಾಮರಾವ ಚಿಂಚೋಳಿ