Advertisement

ನಾಲೆಗೆ ನೀರು ಸ್ಥಗಿತ: ಮೊಸಳೆ ಸೆರೆಗೆ ಕಾರ್ಯಾಚರಣೆ

07:04 PM Aug 27, 2021 | Team Udayavani |

ಶ್ರೀರಂಗಪಟ್ಟಣ: ರಂಗನತಿಟ್ಟು ಪಕ್ಷಿಧಾಮದ ವ್ಯಾಪ್ತಿಯ ಕೂಗಳತೆ ದೂರದಲ್ಲಿರುವ ವಿರಿಜಾ ನಾಲೆಯಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿ ಮೇಕೆ ಮರಿಗಳನ್ನು ಎಳೆದೊಯ್ದ ಘಟನೆಗಳುಕಂಡು ಬಂದಿದ್ದು, ಸಾರ್ವಜನಿಕರು ಹಾಗೂ ರೈತರು ಆತಂಕದಲ್ಲಿದ್ದಾರೆ. ನಾಲೆಗಳ ಬಳಿ ಎಚ್ಚರಿಕೆಯ
ಸಂದೇಶಗಳು ರವಾನೆಯಾಗುತ್ತಿದೆ.

Advertisement

ಆಹಾರ ಅರಸಿ ಬಂದ ಮೊಸಳೆ: ಇತ್ತೀಚೆಗೆ ಮಳೆಯಾದ್ದರಿಂದಕೆಆರ್‌ಎಸ್‌ಕೆಳಭಾಗಕ್ಕೆ ರಂಗನತಿಟ್ಟು ಪಕ್ಷಿಧಾಮದ ಮೂಲಕ ಹೆಚ್ಚಿನ ನೀರು ಹರಿದು ಬಂದು ಮೊಸಳೆಗಳು ಚೆಲ್ಲಾಪಿಲ್ಲಿಗೊಂಡು ಸಮೀಪವಿರುವ ವಿರಿಜಾ ನಾಲೆಗೆ ಸೇರಿಕೊಂಡಿರುವ ಮಾಹಿತಿ ರೈತರಿಂದ ಬೆಳಕಿಗೆ ಬಂದಿದೆ.

ಕಿರುಚಿದ ರೈತರು:ಕಳೆದ ಸೋಮವಾರ ಸಂಜೆ ಪಾಲಹಳ್ಳಿಯ ರೈತ ನಿಂಗಯ್ಯ ಮೇಕೆ ಮೇಯಲು ಬಿಟ್ಟಿದ್ದು, ಈ ವೇಳೆ ಮೊಸಳೆ ದಾಳಿ ಮಾಡಿ ಮೇಕೆಕತ್ತು ಹಿಡಿದು ಸಾಯಿಸಿ ಎಳೆದೊಯ್ಯಲು ಪ್ರಯತ್ನಿಸಿದೆ. ಈ ವೇಳೆ ರೈತಕಿರುಚಿದಾಗ ಸುತ್ತಮುತ್ತಲ ರೈತರು ಆಗಮಿಸಿ ಮೊಸಳೆಯನ್ನು
ಓಡಿಸಿದ್ದಾರೆ. ಪಕ್ಕದಲ್ಲೇ ಇರುವ ರಂಗನತಿಟ್ಟು ಪಕ್ಷಿಧಾಮದಿಂದ ಈ ಮೊಸಳೆ ಆಹಾರ ಅರಸಿ ಬಂದಿರಬೇಕೆಂದು ರೈತರು ಶಂಕಿಸಿದ್ದು, ಪಾಲಹಳ್ಳಿ ಗ್ರಾಮಕ್ಕೆ ಸೇರಿದ ಸುಮಾರು30 ಸಾವಿರ ಬೆಲೆಯ ಎರಡು ಮೇಕೆ ಸ್ಥಳದಲ್ಲೇ ಮೃತಪಟ್ಟಿರುವು ದಾಗಿ ಮೇಕೆ ಮಾಲೀಕ ನಿಂಗಯ್ಯ ಹಾಗೂ ಚಿಕ್ಕಣ್ಣ ತಿಳಿಸಿದ್ದಾರೆ.

ಇದಲ್ಲದೇ ತಾಲೂಕಿನ ಅಲ್ಲಾಪಟ್ಟಣ ಗ್ರಾಮದ ಸಮೀಪವಿರುವ ಸಿಡಿಎಸ್‌ ನಾಲೆಯಲ್ಲಿ ಎರಡು ಮೊಸಳೆಗಳು ಕಾಣಿಸಿಕೊಂಡಿದ್ದು, ಸ್ಥಳೀಯ ರೈತರಲ್ಲಿ ಭಯದ ವಾತಾವರಣ ಮನೆ ಮಾಡಿದೆ. ರೈತರ ಆತಂಕ:ಕಳೆದ ಶುಕ್ರವಾರ ಮಧ್ಯಾಹ್ನ ಎರಡು ಮೊಸಳೆಗಳು ನಾಲೆಯ ದಂಡೆಯಲ್ಲಿ
ಕಾಣಿಸಿಕೊಂ ಡಿದ್ದು, ನಾಲೆಯ ಬಳಿ ಬಟ್ಟೆ ಒಗೆಯಲು ಹೋದ ಮಹಿಳೆಯರು ಗಮನಿಸಿದ್ದು, ಸ್ಥಳೀಯ ರೈತರು ನೋಡಿ ಅರಣ್ಯ ಇಲಾಖೆ ಅಧಿಕಾರಿ ಗಳಿಗೆ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲಿಸಿದ ಅರಣ್ಯಾಧಿ ಕಾರಿಗಳು ನಾಲೆಯ ದಂಡೆಯ ಮೇಲಿದ್ದ ಮೊಸಳೆ ಯನ್ನು ನೋಡಿ ಸದ್ಯ
ನಾಲೆಯಲ್ಲಿ ನೀರಿರುವಕಾರಣ ಅವುಗಳ ಸೆರೆ ಹಿಡಿಯುವಕಾರ್ಯ ನಡೆದಿಲ್ಲವಾಗಿದೆ. ಇದರಿಂದ ನಾಲೆಗಳ ಬಳಿ ಹೋಗಲು ರೈತರು ಆತಂಕ ಪಡುತ್ತಿದ್ದಾರೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1301 ಪಾಸಿಟಿವ್ ಪ್ರಕರಣ ಪತ್ತೆ|1614 ಸೋಂಕಿತರು ಗುಣಮುಖ

Advertisement

ಮೊಸಳೆ ಹಿಡಿಯಲು ಮುಂದಾದ ಇಲಾಖೆ: ನಾಲೆಯ ನೀರು ನಿಲ್ಲಿಸಿ ನಾಲೆ ಸುತ್ತಲೂ ಹಾಗೂ ಕೋರೆ ಬಳಿ ಬಲೆ ಬಿಟ್ಟು ಕೂಂಬಿಂಗ್‌ ಕಾರ್ಯಾ ಚರಣೆ ನಡೆಸಿದ್ದಾರೆ. ವಿರಿಜಾ ನಾಲೆಯಲ್ಲಿ ಮೊಸಳೆಗಳು ಮೇಲಿಂದ ಮೇಲೆಕಾಣಿಸಿಕೊಳ್ಳುತ್ತಿವೆ. ಮೂರು ಬಾರಿ ಮೇಕೆಗಳ ಮೇಲೆ ದಾಳಿ
ನಡೆಸಿದ್ದನ್ನು ಸ್ಥಳೀಯರು ನೋಡಿದ್ದಾರೆ. ಈಗಾಗಲೇ ಎಲ್ಲಾ ಭಾಗಗಳಲ್ಲಿ ಬಲೆ ಬೀಸಿದ್ದು,30 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದರೂ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಹಗಲು-ರಾತ್ರಿ ಎರಡು ತಂಡ ರಚನೆ ಮಾಡಿರುವುದು ಕಾರ್ಯಾಚರಣೆಯಿಂದ ಈಗಾಗಲೇ ತಿಳಿದು ಬಂದಿದೆ. ಮೊಸಳೆ ಹಿಡಿದು ಜನರ ಆತಂಕ ಹೋಗಲಾಡಿಸುವರೇ ಎಂಬುದಕಾದು ನೋಡಬೇಕಿದೆ.

ಮೀನುಗಳು,ಮೃತ ಪಕ್ಷಿಗಳೇ ಆಹಾರ
ರಂಗನತಿಟ್ಟಿನಲ್ಲರುವ ಮೊಸಳೆಗಳಿಗೆ ಇಲ್ಲೇ ಮೀನುಗಳು ಹಾಗೂ ಇತರೆ ಸತ್ತ ಪಕ್ಷಿಗಳ ಆಹಾರ ಯಥೇತ್ಛವಾಗಿ ಸಿಗಲಿರುವುದರಿಂದ ಇಲ್ಲಿಂದ ಹೊರ ಹೋಗುವುದಿಲ್ಲ. ಹಲವು ವರ್ಷಗಳಿಂದ ನಾಲೆಗಳ ಹಳ್ಳಗಳಲ್ಲಿ ಹೆಚ್ಚು ವಾಸವಿರುವ ಮೊಸಳೆಗಳು ಹಾಗೂ ರಂಗನತಿಟ್ಟು ಸಮೀಪದಲ್ಲಿ ಒಂದುಕೋರೆ ಇದ್ದು ಸುಮಾರು50ರಿಂದ60 ಅಡಿ ಹೆಚ್ಚು ನೀರಿದೆ ಎಂದು ವನ್ಯಜೀವಿ ಮೈಸೂರು ವಿಭಾಗದ ಜಿಲ್ಲಾ ಅರಣ್ಯ ಅಧಿಕಾರಿ ವಿ.ಕರೀಕಾಳನ್‌ ತಿಳಿಸಿದ್ದಾರೆ.

ಉದಯವಾಣಿಗೆ ಪ್ರತಿಕ್ರಿಯಿಸಿ, ಇಲ್ಲಿ ಮೊಸಳೆಗಳು ವಾಸವಿದ್ದು, ಆಹಾರದ ಕೊರತೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಹಳ್ಳದಿಂದ ಓಡಾಟ ನಡೆಸಿರುವ ಮೊಸಳೆಗಳ ಗುರುತುಗಳ ಪತ್ತೆ ಮಾಡಿದ್ದು, ಸುತ್ತಲು ಬಲೆ ಬಿಟ್ಟು ಹಗಲು ರಾತ್ರಿಕೂಂಬಿಂಗ್‌ ನಡೆಸಿದ್ದೇವೆ.8 ಮಂದಿ ತಂಡ ರಚಿಸಿ ವಿರಿಜಾ ನಾಲೆಯಲ್ಲಿ ಹೆಚ್ಚು ನೀರಿರುವುದರಿಂದ ಕೆಆರ್‌ ಎಸ್‌ ನೀರಾವರಿ ಅಧಿಕಾರಿಗಳಿಗೆ ಮನವಿಮಾಡಿ, ನಾಲೆ ನೀರನ್ನು ಸ್ಥಗಿತಗೊಳಿಸಿ ಮೊಸಳೆ ಹಿಡಿಯಲು ಕೂಂಬಿಂಗ್‌ ಕಾರ್ಯಾಚರಣೆ ನಡೆಸಿದ್ದೇವೆ. ಮೇಕೆಗಳು ಕಳೆದುಕೊಂಡ ರೈತರಿಗೂ ಪರಿಹಾರಕ್ಕೆ ವರದಿ ಮಾಡಿದ್ದೇವೆ ಎಂದು ತಿಳಿಸಿದರು.

ಕಳೆದ ಕೆಲ ದಿನಗಳ ಹಿಂದೆ ನಾಲೆ ಬಳಿ ಇರುವ ಸೋಪಾನಕಟ್ಟೆಯಲ್ಲಿ ದನಕರು ತೊಳೆಯುವಾಗ ಹಾಗೂ ಮನುಷ್ಯರ ಮೇಲೆ ದಾಳಿ ಮಾಡಿದರೆ, ಮೇಕೆಗಳನ್ನು ಬಲಿ ಪಡೆದಿವೆ. ಈಗಾಗಲೇ ಪಾಲಹಳ್ಳಿ ಗ್ರಾಮಸ್ಥರು ಒಂದು ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದ್ದರೂ ಇನ್ನು
ಎಚ್ಚೆತ್ತುಕೊಂಡಿಲ್ಲ. ಅಧಿಕಾರಿಗಳು ಮೊಸಳೆಗಳನ್ನು ಹಿಡಿದು ಆತಂಕದೂರ ಮಾಡಬೇಕು.
– ಪಿ.ಎಸ್‌.ರಾಮೇಗೌಡ,
ಪಾಲಹಳ್ಳಿ ಗ್ರಾಮ

●ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next