Advertisement

ನುಗ್ಗೆ ಬೀಜದಿಂದ ನೀರು ಶುದ್ಧೀಕರಣ ಸಾಧ್ಯ!

10:44 AM Jun 19, 2018 | Team Udayavani |

ಹೊಸದಿಲ್ಲಿ: ಭಾರತದ ನುಗ್ಗೆ ಇದೀಗ ವಿಶ್ವದ ಗಮನ ಸೆಳೆದಿದೆ. ನುಗ್ಗೆ ಬೀಜವನ್ನು ಬಳಸಿ ನೀರು ಶುದ್ಧೀಕರಿಸುವ ವಿನೂತನ ಸಂಶೋಧನೆಯನ್ನು ಅಮೆರಿಕದ ಕಾರ್ನೆಗಿ ಮೆಲಾನ್‌ ವಿಶ್ವ ವಿದ್ಯಾಲಯದ ಸಂಶೋಧಕರು ನಡೆಸಿದ್ದಾರೆ.

Advertisement

ಬಯೋಮೆಡಿಕಲ್‌ ಮತ್ತು ಕೆಮಿಕಲ್‌ ಇಂಜಿನಿ ಯರಿಂಗ್‌ ಪ್ರೊಫೆಸರುಗಳಾದ ಬಾಬ್‌ ಟಿಲ್ಟನ್‌ ಮತ್ತು ಟಾಡ್‌ ಪ್ರೈಜಿಬೈಸಿನ್‌ ಈ ಸಂಶೋಧನೆ ನಡೆಸಿದ್ದು, ನುಗ್ಗೆ ಬೀಜದಲ್ಲಿರುವ ಪ್ರೊಟೀನನ್ನು ಹೊರತೆಗೆದು ಅದನ್ನು ಮರಳಿನ ಜೊತೆ ಮಿಶ್ರಣ ಮಾಡಿ ಎಫ್ ಸ್ಯಾಂಡ್‌ ಉತ್ಪಾದಿಸಿದ್ದಾರೆ. ಈಗಾಗಲೇ ಹಲವೆಡೆ ಈ ಬೀಜಗಳನ್ನು ಬಳಸಿ ಗಡಸು ನೀರನ್ನು ಶುದ್ಧೀಕರಿಸುವ ವಿಧಾನ ಚಾಲ್ತಿಯಲ್ಲಿದೆ. ಆದರೆ ಇದಕ್ಕೆ ಸಂಪೂರ್ಣ ಆಧುನಿಕ ಸ್ಪರ್ಶವನ್ನು ಈ ವಿಜ್ಞಾನಿಗಳು ನೀಡಿದ್ದಾರೆ. ಈ ಎಫ್ ಸ್ಯಾಂಡ್‌ಗಳನ್ನು ಸಿಲಿಕಾದಲ್ಲಿ ಅಳವಡಿಸಿ, ನೀರನ್ನು ಹಾಯಿಸಿದರೆ ನೀರು ಶುದ್ಧಗೊಳ್ಳುತ್ತದೆ.

ಈ ವಿಧಾನವನ್ನು ಬಳಸಿ ಹಲವು ವಿಧದ ನೀರನ್ನು ಶುದ್ಧೀಕರಿಸ ಬಹುದಾಗಿದ್ದು, ಜಗತ್ತಿನ ವಿವಿಧ ಕಡೆಗೆ ಬಳಸಬಹುದಾಗಿದೆ. ಹೀಗಾಗಿ ಕೋಟ್ಯಂತರ ಜನರಿಗೆ ಈ ವಿಧಾನ ಅನುಕೂಲಕರವಾಗಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next