Advertisement
“ಕರ್ನಾಟಕ ನೀರಾವರಿ (ತಿದ್ದುಪಡಿ) ಮಸೂದೆ-2024’ನ್ನು ಸೋಮವಾರ ಕೆಳಮನೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಂಡಿಸಿದರು. ನಾಲೆ/ ಕೊಳವೆಯನ್ನು ಚುಚ್ಚುವುದು ಅಥವಾ ಕತ್ತರಿಸುವುದು ಅಥವಾ ಇಳಿ ಗೊಳವೆಯನ್ನು ಸೇರಿಸುವಂತಹ ಕೃತ್ಯಗಳಿಗೆ ಪ್ರಸ್ತುತ 1 ವರ್ಷದ ಕಾರಾಗೃಹ ಶಿಕ್ಷೆ ಅಥವಾ 1,000 ರೂ. ಜುಲ್ಮಾನೆ ಇದೆ. ಇದಕ್ಕೆ ಸಂಬಂಧಿಸಿದ ಇತರ ಉಲ್ಲಂಘನೆಗಳಿಗೆ ಮತ್ತೆ 2 ತಿಂಗಳು ಸೆರೆವಾಸ ವಿಸ್ತರಣೆ ಅಥವಾ 500 ರೂ. ದಂಡ ಇತ್ತು. ಮಸೂದೆ ಅಂಗೀಕಾರಗೊಂಡ ಅನಂತರ 2 ವರ್ಷ ಜೈಲು ಅಥವಾ 2 ಲಕ್ಷ ರೂ. ದಂಡ ವಿಧಿಸಲಾಗು ತ್ತದೆ. ಇತರ ಉಲ್ಲಂಘನೆಗಳಿದ್ದರೆ 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ಯಾ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಶ್ರೀರಂಗಪಟ್ಟಣ: ರೈತರ ಜೀವನಾಡಿಯಾಗಿರುವ ಕಾವೇರಿ ತಾಯಿಗೆ ಪುಣ್ಯ ಕ್ಷೇತ್ರ ಕಾಶಿಯಲ್ಲಿ ಮಾಡುವ ಗಂಗಾರತಿ ಮಾದರಿಯಲ್ಲಿ “ಕಾವೇರಿ ಆರತಿ’ ಮಾಡಲು ಚಿಂತಿಸಲಾಗುತ್ತಿದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಈ ಬಗ್ಗೆ ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಶಾಸಕರು, ಧಾರ್ಮಿಕ ದತ್ತಿ ಇಲಾಖೆ ಅ ಧಿಕಾರಿಗಳ ತಂಡ ರಚಿಸಿ ಕಾವೇರಿ ಆರತಿ ಪ್ರಾರಂಭಿಸಲು ಒಂದು ತಿಂಗಳೊಳಗೆ ವರದಿ ನೀಡಲು ತಿಳಿಸಲಾಗುವುದು. ಬಳಿಕ ಮುಖ್ಯಮಂತ್ರಿ ಜತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.