Advertisement

ಎಸ್‌ಟಿಪಿ ಅಳವಡಿಕೆಗೆ ಮುಂದಾದ ಜಲ ಮಂಡಳಿ

05:13 PM Dec 08, 2017 | |

ಬೆಂಗಳೂರು: ತ್ಯಾಜ್ಯನೀರು ಸಂಸ್ಕರಣಾ ಘಟಕ (ಎಸ್‌ ಟಿಪಿ) ಅಳವಡಿಕೆಗೆ ಕೆಲ ಅಪಾರ್ಟ್‌ಮೆಂಟ್‌ಗಳ ಅಪಸ್ವರದ ಹಿನ್ನೆಲೆ ಕೇಂದ್ರ ಕಚೇರಿ ಕಾವೇರಿ ಭವನ ಕಟ್ಟಡದಲ್ಲಿ ಎಸ್‌ಟಿಪಿ ಅಳವಡಿಸಿಕೊಳ್ಳುವ ಮೂಲಕ ಮಾದರಿಯಾಗಲು ಜಲಮಂಡಳಿ ಸಜ್ಜಾಗಿದೆ. ಐವತ್ತಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳಿರುವ ವಸತಿ ಸಂಕೀರ್ಣ ಗಳು (ಅಪಾರ್ಟ್‌ಮೆಂಟ್‌) ಡಿ. 31ರೊಳಗೆ ಎಸ್‌ಟಿಪಿಯನ್ನು ಕಡ್ಡಾಯವಾಗಿ ಅಳವಡಿಸಿ ಕೊಳ್ಳಬೇಕು ಎಂದು ಜಲಮಂಡಳಿ ಆದೇಶ ಹೊರಡಿಸಿತ್ತು. ಅದಕ್ಕೆ ವಿರೋಧಿಸಿ ಹಲವು ಅಪಾರ್ಟ್‌ಮೆಂಟ್‌ಗಳು ಪ್ರತಿಭಟನೆ ನಡೆಸಿದ್ದವು. ಆ ಹಿನ್ನೆಲೆ ನಿಯಮಾನುಸಾರ ನಿರ್ಮಾಣವಾಗಿರುವ ಹಾಲಿ ಕಟ್ಟಡಗಳಲ್ಲಿ ಎಸ್‌ಟಿಪಿ ಅಳವಡಿಕೆ ಸಾಧ್ಯವೆಂಬುದನ್ನು ಸಾಬೀತುಪಡಿಸಲು ಜಲಮಂಡಳಿ ಮುಂದಾಗಿದೆ.

Advertisement

ಈ ಹಿಂದೆ 20 ಮನೆಗಳಿರುವ ಹಳೆಯ ಅಪಾರ್ಟ್‌ಮೆಂಟ್‌ಗೆ ಎಸ್‌ಟಿಪಿ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆ ವೇಳೆ ಅಪಾರ್ಟ್‌ಮೆಂಟ್‌ಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೂರು ಬಾರಿ ಸಭೆ ನಡೆಸಿದ ಜಲಮಂಡಳಿ ಹಳೆಯ 20 ಮತ್ತು 50 ಮನೆಗಳಿರುವ ಅಪಾರ್ಟ್‌ಮೆಂಟ್‌ಗಳಿಗೆ ನಿಯಮದಿಂದ ವಿನಾಯ್ತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ, ಸರ್ಕಾರ 20 ಮನೆಗಳಿರುವ ಹಳೆಯ ವಸತಿ ಸಂರ್ಕಿಣಗಳಿಗೆ ವಿನಾಯ್ತಿ
ನೀಡಿ, 50 ಮನೆಗಳಿರುವ ಅಪಾರ್ಟ್‌ ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಆ ಹಿನ್ನೆಲೆ ನಗರದ ಹಲವು ಕಡೆಗಳಲ್ಲಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಪ್ರತಿಭಟನೆ ನಡೆಸಿ, 2016ರ ಹಿಂದೆ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಅಳವಡಿಕೆ ಕಡ್ಡಾಯ ಗೊಳಿಸಿ ರುವುದು ಸರಿಯಲ್ಲಮರು ಪರಿಶೀಲಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಹಾಲಿ ಕಟ್ಟಡಗಳಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಎಸ್‌ಟಿಪಿ ಅಳವಡಿಸಿ ಕೊಳ್ಳುವುದು ಸಾಧ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿರುವ ಜಲಮಂಡಳಿ, ಕಾವೇರಿ ಭವನ ಕಟ್ಟಡದಲ್ಲಿ ಎಸ್‌ಟಿಪಿ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಿದೆ. ಹೀಗಾಗಿ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 15 ದಿನಗಳಲ್ಲಿ ಎಸ್‌ ಟಿಪಿ ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸಲಿದೆ.

ಅಪಸ್ವರಕ್ಕೆ ಕಾರಣವೇನು?: ನಗರದ 1,146ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಜಲಮಂಡಳಿ ಹೊರಡಿಸಿರುವ ಆದೇಶಕ್ಕೆ ಒಳಪಡಲಿದ್ದು, ಆ ಪೈಕಿ ಬಹುತೇಕ ಅಪಾರ್ಟ್‌ಮೆಂಟ್‌ಗಳು ನಿಯಮದಂತೆ ಸೆಟ್‌ಬ್ಯಾಕ್‌ (ನಡುಜಾಗ) ಬಿಡದೆ ನಿರ್ಮಾಣವಾಗಿವೆ ಎನ್ನಲಾಗಿದೆ. ಒಂದೊಮ್ಮೆ ನಿಯಮಾ ನುಸಾರ ಸೆಟ್‌ ಬ್ಯಾಕ್‌ ಬಿಟ್ಟು ಕಟ್ಟಡ ನಿರ್ಮಿಸಿದ್ದರೆ ಅಪಾರ್ಟ್‌ ಮೆಂಟ್‌ಗಳಲ್ಲಿ ಎಸ್‌ಟಿಪಿಗೆ ಜಾಗ ಲಭ್ಯವಿರುತ್ತಿತ್ತು ಎಂಬುದು ಹಿರಿಯ ಅಧಿಕಾರಿಯ ವಾದ.

ಮಂಡಳಿಯಿಂದ ಸಲಹೆ ಲಭ್ಯ: ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿಗಳ ಅಳವಡಿಕೆಗೆ ಜಾಗ ಮತ್ತು ಇತರೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳಿಗೆ ಪರಿಹಾರ ನೀಡುವ “ರಕ್ಷಣಾ ಸಂಶೋ ಧನೆ ಮತ್ತು ನಿರ್ವಹಣಾ ಇಲಾಖೆ (ಡಿಆರ್‌ಡಿಒ) ಯಿಂದ ಮಾನ್ಯತೆ ಪಡೆದ ಸಂಸ್ಥೆಗಳ ಮಾಹಿತಿ ಜಲಮಂಡಳಿ ಕಲೆ ಹಾಕಿದೆ. ಹೀಗಾಗಿ ಅಪಾರ್ಟ್‌ ಮೆಂಟ್‌ಗಳಲ್ಲಿ ಜಾಗವಿಲ್ಲವೆಂದು ಅಪಸ್ವರ ಎತ್ತಿರುವವರು ಮಂಡಳಿಯ ಅಧಿಕಾರಿ ಗಳನ್ನು ಸಂಪರ್ಕಿಸಿ ಎಸ್‌ಟಿಪಿ ಅಳವಡಿಕೆಗೆ ಇರುವ
ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದು ಮಂಡಳಿಯ ಹಿರಿಯ ಅಧಿಕಾರಿಯ ಸಲಹೆಯಾಗಿದೆ.

Advertisement

ಎಸ್‌ಟಿಪಿ ಸಾಮರ್ಥಯದ ನಿಗದಿ ಹೇಗೆ?
ಜಲಮಂಡಳಿಯಿಂದ ಹಾಗೂ ಇತರೆ ಮೂಲಗಳಿಂದ ಅಪಾರ್ಟ್‌ಮೆಂಟ್‌ಗೆ ನಿತ್ಯ ಪೂರೈಕೆಯಾಗುವ ನೀರಿನ ಪ್ರಮಾಣದ ಶೇ.80ರಷ್ಟು ಒಳಚರಂಡಿಯಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಶೇ.80ರಷ್ಟು ನೀರನ್ನು ಸಂಸ್ಕರಿಸುವಷ್ಟು ಸಾಮರ್ಥಯದ ಎಸ್‌ಟಿಪಿಯನ್ನು ಅಪಾರ್ಟ್‌ಮೆಂಟ್‌ ಅಳವಡಿಸಿಕೊಳ್ಳಬೇಕುಎಂದು ಮಂಡಳಿಯ ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಹಳೆಯ 50 ಮನೆಗಳಿರುವ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ. ಆ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ಗಳು ಎಸ್‌ಟಿಪಿ ಅಳವಡಿಸಿಕೊಳ್ಳುವ ಮೂಲಕ ಮಂಡಳಿಯೊಂದಿಗೆ ಕೈಜೋಡಿಸಬೇಕು.
ಒಂದೊಮ್ಮೆ ಎಸ್‌ಟಿಪಿ ಅಳವಡಿಕೆಗೆ ಜಾಗದ ಕೊರತೆ ಸೇರಿ ಇನ್ನಿತರ ಸಮಸ್ಯೆಗಳಿದ್ದರೆ, ಅದಕ್ಕೆ ಕೈಗೊಳ್ಳಬೇಕಾದ ಪರಿಹಾರ ಸೂಚಿಸುವ ಸಂಸ್ಥೆಯ ವಿವರಗಳನ್ನು ಮಂಡಳಿ ನೀಡಲಿದೆ. 
 ●ಕೆಂಪರಾಮಯ್ಯ, ಜಲಮಂಡಳಿಯ ಪ್ರಧಾನ ಅಭಿಯಂತರ

●ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next