ಕಲಬುರಗಿ: ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾರ್ವಜನಿಕರಿಗೆ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹಾಗೂ ಪಕ್ಷಿಗಳಿಗೆ ನೀರು, ಆಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಅರವಟ್ಟಿಗೆಗಳನ್ನು ಕಟ್ಟಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಮಾನವೀಯತೆ ಮೆರೆಯುವ ಕಾರ್ಯ ಮಾಡಿದಂತಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಸುಭಾಷ ಗುತ್ತೇದಾರ ಶ್ಲಾಘಿಸಿದರು.
ಅವರಟ್ಟಿಗೆ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಲ ಮೂಲಗಳ ರಕ್ಷಣೆ, ನೀರಿನ ಮಿತ ಬಳಕೆ, ನೀರು ಸಂಗ್ರಹ ಹಾಗೂ ಹಸರೀಕರಣದ ಬಗ್ಗೆ ನಾವೆಲ್ಲ ಜಾಗೃತರಾಗಬೇಕಾಗಿದೆ. ಜತೆಗೆ ಯುದೊœàಪಾದಿ ನೀರಿನ ಸಂರಕ್ಷಣೆ ಆಗಬೇಕಾಗಿದೆ. ಅವಶ್ಯಕತೆಗನುಗುಣವಾಗಿ ನೀರನ್ನು ಬಳಸುವ ಸಂಸ್ಕೃತಿ ರೂಢಿಸಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನೀರು ಬಹಳ ಅತ್ಯಮೂಲ್ಯವಾಗಿದ್ದು, ಯಾವುದೇ ಕಾರಣಕ್ಕೂ ಅನಗತ್ಯವಾಗಿ ವ್ಯರ್ಥಗೊಳಿಸದೇ ಜೀವ ಜಲ ಉಳಿಸಿಕೊಂಡಾಗ ಸಕಲ ಜೀವಿಗಳು ಉಳಿಯಲು ಸಾಧ್ಯ ಎಂದರು.
ಉದ್ಯಮಿ ನೀಲಕಂಠರಾವ ಮೂಲಗೆ ಸಹ ಮಾತನಾಡಿದರು. ಚಿಂಚೋಳಿ ತಹಶೀಲ್ದಾರ್ ಅಂಜುಮ್ ತಬಸ್ಸುಮ್, ಸುದರ್ಶನ್ ಜತ್ತನ್ ಮಾತನಾಡಿದರು.
ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಶಿವರಾಜ ಎಸ್. ಅಂಡಗಿ, ಯಶವಂತರಾಯ ಅಷ್ಠಗಿ, ಶರಣರಾಜ್ ಛಪ್ಪರಬಂದಿ, ಶಕುಂತಲಾ ಪಾಟೀಲ ಜಾವಳಿ, ಕಲ್ಯಾಣಕುಮಾರ ಶೀಲವಂತ, ಧರ್ಮಣ್ಣ ಎಚ್.ಧನ್ನಿ, ರಾಜೇಂದ್ರ ಮಾಡಬೂಳ, ವಿನೋದ ಜೇನವೇರಿ, ರವೀಂದ್ರಕುಮಾರ ಭಂಟನಳ್ಳಿ, ಪ್ರಮುಖರಾದ ಶಿವಲೀಲಾ ತೆಗನೂರ, ಪ್ರಭುಲಿಂಗ ಮೂಲಗೆ, ಶಿವಶರಣಪ್ಪ ಪರಪ್ಪಗೋಳ, ವೆಂಕಟೇಶ, ವಿಶ್ವನಾಥ ಪಾಟೀಲ ಗೌನಳ್ಳಿ, ರಾಜಶೇಖರ ಪಾಟೀಲ ತೇಗಲತಿಪ್ಪಿ, ಶಿವರುದ್ರ ಗುಡ್ಡಾ, ಮಲ್ಲಿಕಾರ್ಜುನ ಇಬ್ರಾಹಿಂಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.