Advertisement

Viral: ಮದ್ಯ ಕುಡಿಯಲು ಹಣ ನೀಡದ ತಂದೆ; ಸಿಟ್ಟಾಗಿ ಹೈಟೆನ್ಷನ್‌ ವಿದ್ಯುತ್‌ ಕಂಬವೇರಿದ ಮಗ.!

02:10 PM Apr 24, 2023 | Team Udayavani |

ಲಕ್ನೋ: ಅಪ್ಪನ ಬಳಿ ಹಣ ಕೇಳಿದಾಗ ಅಪ್ಪ ಹಣ ನೀಡದೆ ಇದ್ದರೆ ನೀವೇನು ಮಾಡುತ್ತೀರಿ? ಹೆಚ್ಚೆಂದರೆ ಒಂದಷ್ಟು ಸಮಯ ಸಿಟ್ಟಿನಲ್ಲಿ ಮಾತು ಬಿಡಬಹುದು ಅಥವಾ ಕೆಲ ಸಮಯದ ಬಳಿಕ ಅಪ್ಪನ ಬಳಿ ಹಣ ನೀಡಲು ಹೇಳು ಎಂದು ಅಮ್ಮನ ಬಳಿ ಹೇಳಿ ಅದೇಗೋ ಮತ್ತೆ ಹಣವನ್ನು ಪಡೆಯಲು ಯತ್ನಿಸುತ್ತೀರಿ.

Advertisement

ಆದರೆ ಇಲ್ಲೊಬ್ಬ ಮಗ ಅಪ್ಪ ಹಣ ನೀಡಿಲ್ಲ ಎಂದು ಸಿಟ್ಟಿನಲ್ಲಿ ಹೈಟೆನ್ಷನ್‌ ವೈಯರ್‌ ವುಳ್ಳ ವಿದ್ಯುತ್‌ ಕಂಬಕ್ಕೇರಿದ್ದಾನೆ.!

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕತಿ ಖೇಡಾ ಗ್ರಾಮದಲ್ಲಿ ಮಗನೊಬ್ಬ ತನಗೆ ಮದ್ಯ ಕುಡಿಯಲು ಹಣಬೇಕೆಂದು ತನ್ನ ತಂದೆಯ ಬಳಿ ಕೇಳಿದ್ದಾನೆ. 1500 ರೂ. ನೀಡಿಯೆಂದು ಮದ್ಯ ವ್ಯಸನಿ ಮಗ ತಂದೆಯ ಬಳಿ ಕೇಳಿದ್ದಾನೆ. ಇದಕ್ಕೆ ತಂದೆ ಯಾವುದೇ ಕಾರಣಕ್ಕೂ ಹಣ ನೀಡಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮತಯಾಚನೆ ಮಾಡದೆ ಮತದಾನ ಮಾಡುವ ಚರಿತ್ರೆ ನಿರ್ಮಾಣ ಮಾಡುತ್ತೇನೆ -ಮುನಿಯಾಲು 

ಇದೇ ಮಾತಿನಿಂದ ಸಿಟ್ಟಾದ ಮಗ ಮನೆಯ ಪಕ್ಕದಲ್ಲಿರುವ  ಹೈಟೆನ್ಷನ್‌ ವಿದ್ಯುತ್‌ ಕಂಬಕ್ಕೇರಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ. ಈತನ ಈ ವರ್ತನೆ ಕುರಿತು ಗ್ರಾಮಸ್ಥರೆಲ್ಲ ಭೀತಿಗೆ ಒಳಗಾಗಿದ್ದಾರೆ.

Advertisement

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಯುವಕನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ಅಪಾಯ ಸಂಭವಿಸದಿರಲು ವಿದ್ಯುತ್‌ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next