Advertisement

ಬೌಂಡರಿ ಲೈನ್‌ನಲ್ಲಿ ಜೆಮಿಮಾ ರೋಡ್ರಿಗಸ್‌ ಡ್ಯಾನ್ಸ್‌ !

11:49 AM Mar 07, 2023 | Team Udayavani |

ಮುಂಬಯಿ: ಸದಾ ಜಾಲಿ ಮೂಡ್‌ನ‌ಲ್ಲಿರುವ ಭಾರತದ ವನಿತಾ ಕ್ರಿಕೆಟಿಗರಲ್ಲಿ ಜೆಮಿಮಾ ರೋಡ್ರಿಗಸ್‌ ಅವರಿಗೆ ಅಗ್ರಸ್ಥಾನ. ಹಾಡು, ನೃತ್ಯ, ಪಟಪಟ ಮಾತು, ಫ‌ನ್ನಿ ರೀಲ್ಸ್‌ ಮೂಲಕ ಜೆಮಿಮಾ ಸಾಮಾಜಿಕ ಜಾಲತಾಣಗಳಲ್ಲಿ ಯಾವತ್ತೂ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಕ್ರಿಕೆಟ್‌ ಪಂದ್ಯದ ವೇಳೆ ಬೌಂಡರಿ ಲೈನ್‌ನಲ್ಲಿ ಡ್ಯಾನ್ಸ್‌ ಮಾಡಿ ಎಲ್ಲರನ್ನೂ ಮೋಡಿಗೊಳಿ ಸಿದ್ದಾರೆ. ಇದರ ವೀಡಿಯೋ ವೈರಲ್‌ ಆಗಿದೆ.

Advertisement

ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಡೆಲ್ಲಿಯನ್ನು ಪ್ರತಿ ನಿಧಿಸುವ ಜೆಮಿಮಾ, ರವಿವಾರದ ಆರ್‌ಸಿಬಿ ಎದುರಿನ ಪಂದ್ಯದ ವೇಳೆ ಅಂಗಳದಲ್ಲೇ ಡ್ಯಾನ್ಸ್‌ ಮಾಡಿ ವೀಕ್ಷಕರನ್ನು ರಂಜಿಸಿದರು. ಇದರಲ್ಲಿ ಭಾಂಗ್ರಾ ನೃತ್ಯವೂ ಸೇರಿತ್ತು!

ಇದೇ ಪಂದ್ಯದ ಕ್ಷೇತ್ರರಕ್ಷಣೆ ವೇಳೆ ಅವರು ವೀಕ್ಷಕರೊಬ್ಬರಿಗೆ ನೀರು ನೀಡುವ ಮೂಲಕವೂ ಸುದ್ದಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next