ರಾವಲ್ಪಿಂಡಿ: ಕ್ರಿಕೆಟ್ ನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಈ ಮಾತಿಗೆ ಉದಾಹರಣೆಯಾಗಿದೆ ಬುಧವಾರ ರಾತ್ರಿ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ನಡೆದ ನಡೆದ ಟಿ-20 ಪಂದ್ಯ.
ಪಾಕಿಸ್ತಾನ ಸೂಪರ್ ಲೀಗ್ ನ 25ನೇ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಹರಿದಿತ್ತು. ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಬಾಬರ್ ಅಜಂ ನಾಯಕತ್ವದ ಪೇಶಾವರ್ ಝಲ್ಮಿ 20 ಓವರ್ ನಲ್ಲಿ 2 ವಿಕೆಟ್ ಗಳನ್ನಷ್ಟೇ ಕಳೆದುಕೊಂಡು 241 ರನ್ ಗಳನ್ನು ಪೇರಿಸಿದೆ.
ಲೀಗ್ ನಲಿ ಅಷ್ಟಾಗಿ ಬ್ಯಾಟಿಂಗ್ ನಲ್ಲಿ ಮ್ಯಾಜಿಕ್ ಮಾಡದ ಬಾಬರ್ ಅಜಂ ಬುಧವಾರದ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. 65 ಎಸೆತಗಳಲ್ಲಿ 15, ಬೌಡರಿ 3 ಸಿಕ್ಸರ್ ಗಳನ್ನು ಸಿಡಿಸಿ 115 ರನ್ ಗಳನ್ನು ಬಾಬರ್ ದಾಖಲಿಸಿದ್ದಾರೆ. ಇದರೊಂದಿಗೆ ಆರಂಭಿಕ ಆಟಗಾರ ಸೈಮ್ ಅಯೂಬ್ 34 ಎಸೆತಗಳಲ್ಲಿ 75 ರನ್ ಗಳನ್ನು ಗಳಿಸಿದ್ದಾರೆ.
ಅಂತಿಮವಾಗಿ 20 ಓವರ್ ನಲ್ಲಿ ಕೇವಲ 2 ವಿಕೆಟ್ ಗಳನ್ನು ಕಳೆದುಕೊಂಡು ಪೇಶಾವರ್ ಝಲ್ಮಿ 240 ರನ್ ಗಳನ್ನು ಗಳಿಸಿದೆ.
Related Articles
ಈ ಬಾರಿ ಲೀಗ್ ನಲ್ಲಿ ಕಳಪೆ ಪ್ರದರ್ಶನ ನೀಡಿ, ಬಹುತೇಕ ಟೂರ್ನಿಯಿಂದ ಹೊರ ಬಿದ್ದಿರುವ ಸರ್ಫರಾಜ್ ಅವರ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ, ಬಾಬರ್ ತಂಡ ಕೊಟ್ಟ 241 ರನ್ ಬೆನ್ನಟ್ಟಲು ಆರಂಭದಲ್ಲೇ ಬಿರುಸಿನಿಂದ ಬ್ಯಾಟ್ ಬೀಸಿತು.
ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ 63 ಎಸೆತಗಳಲ್ಲಿ 20 ಬೌಂಡರಿ, 5 ಸಿಕ್ಸರ್ ಗಳೊಂದಿಗೆ 145 ರನ್ ದಾಖಲಿಸಿದ್ದಾರೆ. ಬೌಲರ್ ಗಳ ಬೆವರಿಳಿಸಿದ ಜೇಸನ್ ರಾಯ್ ಕೊನೆಯ ವಿನ್ನಿಂಗ್ ಶಾಟ್ ವರೆಗೂ ಬ್ಯಾಟ್ ಬೀಸಿದರು. ಜೇಸನ್ ರಾಯ್ ಅವರ ಬ್ಯಾಟಿಂಗ್ ಶೈಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾರ್ಟಿನ್ ಗಪ್ಟಿಲ್ 21 ರನ್ ಗಳಿಸಿ ಔಟಾದರೆ, ವಿಲ್ ಸ್ಮೀಡ್ 26 ರನ್ ಗಳಿಸಿ ಔಟಾದರು. ಆ ಬಳಿಕ ಯಾವುದೇ ವಿಕೆಟ್ ಕಳೆದುಕೊಳ್ಳದೇ ಕ್ವೆಟ್ಟಾ ಗ್ಲಾಡಿಯೇಟರ್ಸ್ 241 ರ ಸವಾಲನ್ನು 18.2 ಓವರ್ ಗಳಲ್ಲಿ 243 ರನ್ ಗಳಿಸಿದೆ. ಇದು ಪಾಕಿಸ್ತಾನ ಸೂಪರ್ ಲೀಗ್ ನಲ್ಲಾದ 3ನೇ ಯಶಸ್ವಿ ಚೇಸಿಂಗ್ ಆಗಿದೆ.