ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡಗಳು ಅಭೂತಪೂರ್ವ ಸಾಧನೆ ಮಾಡುತ್ತಿದೆ. ರವಿವಾರ ಪುರುಷರ ತಂಡ ಸೆಮಿ ಫೈನಲ್ ಗೆ ಪ್ರವೇಶ ಮಾಡಿದ್ದರೆ, ಸೋಮವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಭಾರತದ ವನಿತೆಯರ ಹಾಕಿ ತಂಡ ಸೆಮಿ ಫೈನಲ್ ಪ್ರವೇಶ ಮಾಡಿದೆ.
ಭಾರತ ಪುರುಷರ ತಂಡ 41 ವರ್ಷಗಳ ಬಳಿಕ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ವನಿತೆಯರ ತಂಡ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿ ಫೈನಲ್ ಆಡಲಿದೆ.
ರಾಣಿ ರಾಂಪಾಲ್ ಬಳಗ ಇಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ವಿಶ್ವದ ನಂ.2 ತಂಡವಾದ ಆಸೀಸ್ ಆಕ್ರಮಣವನ್ನು ದಿಟ್ಟವಾಗಿ ತಡೆದ ಭಾರತ ಕಾಂಗರೂಗಳಿಗೆ ಒಂದೂ ನೀಡಲಿಲ್ಲ. ಭಾರತದ ಪರ 22ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ಬಾರಿಸಿ ಭಾರತಕ್ಕೆ ಬಹುದೊಡ್ಡ ಮುನ್ನಡೆ ಒದಗಿಸಿದರು.
ಇದನ್ನೂ ಓದಿ:ಮತ್ತೊಂದು ಹಾಕಿ ವಿಕ್ರಮ:ಆಸೀಸ್ ತಂಡವನ್ನು ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದ ಭಾರತ ವನಿತಾ ತಂಡ
2016ರ ರಿಯೋ ಒಲಿಂಪಿಕ್ಸ್ ನಲ್ಲಿ 12 ದೇಶಗಳ ಪಟ್ಟಿಯಲ್ಲಿ ಭಾರತದ ವನಿತೆಯರ ತಂಡ 12ನೇ ಸ್ಥಾನ ಪಡೆದಿತ್ತು. ಅಂದು ಆಸೀಸ್ ವಿರುದ್ಧ 1-6 ಗೋಲು ಅಂತರದಿಂದ ಸೋಲನುಭವಿಸಿತ್ತು. ಆದರೆ ಈ ಬಾರಿ ಆ ಸೋಲಿನ ಸೇಡು ತೀರಿಸಿಕೊಂಡಿದೆ.
ಭಾರತ ವನಿತೆಯರ ತಂಡ ಸೆಮಿ ಫೈನಲ್ ನಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಅರ್ಜೆಂಟೀನಾ ತಂಡ ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿ ತಂಡವನ್ನು 3-0 ಅಂತರದಿಂದ ಸೋಲಿಸಿತ್ತು.
ಗುರ್ಜಿತ್ ಕೌರ್ ಗೋಲು: