ಮುಂಬಯಿ: ಮಹಾರಾಷ್ಟ್ರದ ರತ್ನಗಿರಿಯ ಚಿಪ್ಲೂನ್‌ನಲ್ಲಿರುವ ಮುಖ್ಯ ರಸ್ತೆಯಲ್ಲಿ ದೈತ್ಯ ಮೊಸಳೆಯೊಂದು ನಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚಿಪ್ಲುನ್‌ನ ಚಿಂಚನಕ ಪ್ರದೇಶದ ರಸ್ತೆಯಲ್ಲಿ ಮೊಸಳೆ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತಿದ್ದಂತೆ ಇಲ್ಲಿನ ಜನರಲ್ಲಿ ಆತಂಕ ಮನೆಮಾಡಿದೆ.
ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಇಲ್ಲಿರುವ ಶಿವನದಿಯಿಂದ ಮೊಸಳೆ ರಸ್ತೆಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವಾಸ್ತವವಾಗಿ ಇಲ್ಲಿನ ಶಿವನದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆಗಳು ವಾಸಿಸುತ್ತವೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿರುವ ನಡುವೆಯೇ ದೈತ್ಯ ಮೊಸಳೆ ನಡು ರಸ್ತೆಯಲ್ಲಿ ಬರುತ್ತಿರುವುದನ್ನು ಅಲ್ಲಿರುವ ಜನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ರಸ್ತೆಯಲ್ಲಿ ಮೊಸಳೆ ಪ್ರತ್ಯಕ್ಷವಾದ ಸುದ್ದಿ ಹರಡುತ್ತಿದ್ದಂತೆ ಇಲ್ಲಿನ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ, ಆದರೆ ಇಲ್ಲಿನ ನಿವಾಸಿಗಳು ಹೇಳುವಂತೆ ಮೊಸಳೆಗಳು ಕಾಣಸಿಗುವುದು ಇದು ಮೊದಲಲ್ಲ ಮಳೆಗಾಲ ಬಂದರೆ ಸಾಕು ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ ಕೂಡಲೇ ನದಿಯಿಂದ ಮೊಸಳೆಗಳು ರಸ್ತೆಗೆ ಬರುತ್ತವೆ ಹಾಗೆಯೆ ಈ ಬಾರಿಯೂ ಬಂದಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: Road mishap: ವಿಶ್ವಕಪ್ ಜೋಶ್‌ನಲ್ಲಿ ಬೈಕ್ ಓಡಿಸಿ ಡಿವೈಡರ್‌ಗೆ ಢಿಕ್ಕಿ; ಸವಾರನ ಸಾವು