Advertisement

MLA: ಹುಟ್ಟುಹಬ್ಬದ ಪ್ರಯುಕ್ತ ಜೀವಂತ ಹಾವನ್ನೇ ಕುತ್ತಿಗೆಗೆ ಸುತ್ತಿಕೊಂಡು ಬಂದ ಶಾಸಕ.!

02:48 PM Sep 09, 2023 | Team Udayavani |

ಭೋಪಾಲ್:‌ ಸಾಮಾನ್ಯವಾಗಿ ಹುಟ್ಟುಹಬ್ಬಕ್ಕೆ ಬಂದ ಉಡುಗೊರೆಯಗಿ ನಾವು ತೆಗೆದುಕೊಳ್ಳುತ್ತೇವೆ. ಆದರೆ ಇಲ್ಲೊಬ್ಬರು ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಸುದ್ದಿಯಾಗಿದ್ದಾರೆ.

Advertisement

ಮಧ್ಯಪ್ರದೇಶದ ಶಿಯೋಪುರದ ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ಅವರು ಶುಕ್ರವಾರ(ಸೆ.8 ರಂದು) ಕುತ್ತಿಗೆಗೆ ಜೀವಂತ ಹಾವನ್ನು ಸುತ್ತಿಕೊಂಡು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬೆಂಬಲಿಗರು ತಂದ ಹೂಮಾಲೆಗಳನ್ನು ಸ್ವೀಕರಿಸಲು ನಿರಾಕರಿಸಿರುವ ಅವರು ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡುವ ಶಾಸಕ ಬಾಬು ಜಂಡೆಲ್ “ನನ್ನ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದೇನೆ. ಪ್ರಾಣಿಗಳು ನನ್ನ ಸ್ನೇಹಿತರು. ನನ್ನ ಹಿತ್ತಲಿನಲ್ಲಿ ರಾತ್ರಿ ಮಲ್ಲಿಗೆ ಗಿಡವಿದ್ದು ಹಾವುಗಳು ಆಗಾಗ ಬರುತ್ತವೆ. ಹಾವು ಶಿವನನ್ನು ಪ್ರತಿನಿಧಿಸುತ್ತದೆ. ಹಾಗಾಗಿ ನನ್ನ ಜನ್ಮದಿನದ ಸಂದರ್ಭದಲ್ಲಿ ನಾನು ದೇವರ ಮೇಲಿನ ಭಕ್ತಿಯ ರೂಪವಾಗಿ ಅದನ್ನು ನನ್ನ ಕುತ್ತಿಗೆಗೆ ಸುತ್ತಿಕೊಂಡೆ” ಎನ್ನುತ್ತಾರೆ ಶಾಸಕರು.

ಇದನ್ನೂ ಓದಿ: Films: ಭಾರತೀಯ ಸಿನಿಮಾರಂಗದ ಆಗರ್ಭ ಶ್ರೀಮಂತ ದಂಪತಿ… ಇವರು ಮುಟ್ಟಿದ್ದೆಲ್ಲ ಬಂಗಾರ..

ಜನ್ಮದಿನದಂದು ಅವರ ಮನೆಯಲ್ಲಿ ನೆರೆದಿದ್ದ ಬೆಂಬಲಿಗರ ಗುಂಪಿನಲ್ಲಿ ಹಾವಾಡಿಗ ಕೂಡ ಇದ್ದನು. ಜಾಂಡೆಲ್ ಹಾವನ್ನು ಪೆಟ್ಟಿಗೆಯಿಂದ ಹೊರತೆಗೆದು ನಂತರ ಅವರ ಕುತ್ತಿಗೆಗೆ ಹಾಕಿಕೊಂಡಿದ್ದಾರೆ.

Advertisement

ಶಾಸಕ ಬಾಬು ಜಂಡೆಲ್ ಈ ಹಿಂದೆ ಕೂಡ ಇಂತಹ ವಿಚಿತ್ರ ವರ್ತನೆಯಿಂದ ಸುದ್ದಿಯಾಗಿದ್ದಾರೆ.

ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ ಪ್ರವಾಹ ವಿಚಾರವಾಗಿ ಕುರ್ತಾ ಹರಿದು ಪ್ರತಿಭಟನೆ ನಡೆಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ವಿದ್ಯುತ್ ಸರಬರಾಜು ಮಾಡಲು ವಿದ್ಯುತ್ ಕಂಬ ಏರಿದ್ದರು.

ಅವರು ಗಾಯಕರಾಗಿ ಮತ್ತು ಕೆಲವೊಮ್ಮೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯಗಾರರಾಗಿಯೂ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next