ಬ್ರಾಸಿಲಿಯಾ: ಹಣ ಅಂತಸ್ತಿಗಾಗಿ ಕೆಲವು ಜನರು ಯಾವ ಮಟ್ಟಕ್ಕೂ ಇಳಿಯುತ್ತಾರೆ ಎಂಬುದಕ್ಕೆ ಇಲ್ಲಿರುವ ಘಟನೆಯೇ ಸ್ಪಷ್ಟ ನಿದರ್ಶನ.. ಹಣದ ಪ್ರಭಾವ ಅಂತದ್ದು, ಹಣದ ಎದುರು ರಕ್ತ ಸಂಬಂಧಿಕರು ಕೂಡ ಕಾಣುವುದಿಲ್ಲ ಎನ್ನುವಂತಾಗಿದೆ ಈಗಿನ ಕಾಲಘಟ್ಟ, ಅಸ್ತಿ ವಿಚಾರವಾಗಿ ಕುಟುಂಬದವರ ನಡುವೆ ನಡೆಯುವ ಗಲಾಟೆ, ಹಲ್ಲೆ, ಕೊಲೆ ಹೀಗೆ ನಾನಾ ರೀತಿಯ ಸುದ್ದಿಗಳನ್ನು ನೋಡುತ್ತಿರುತ್ತೇವೆ ಅದೇ ರೀತಿ ಇಲ್ಲೊಬ್ಬಳು ಮಹಿಳೆ ಸತ್ತ ವ್ಯಕ್ತಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆಯಲು ಹೋಗಿ ಪೊಲೀಸರ ಅತಿಥಿಯಾಗಿದ್ದಾಳೆ.
ಏನಿದು ಘಟನೆ:
ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ತನ್ನ ಮೃತ ಚಿಕ್ಕಪ್ಪನ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಮುಂದಾಗಿದ್ದಾಳೆ ಆದರೆ ಸಾಲ ಕೊಡಬೇಕಾದರೆ ಸಾಲಗಾರನ ಸಹಿ ಬೇಕಾಗುತ್ತದೆ ಅದರಂತೆ ಮಹಿಳೆ ಮೃತಪಟ್ಟಿರುವ ಚಿಕ್ಕಪ್ಪನನ್ನು ವೀಲ್ ಚೇರ್ ನಲ್ಲಿ ಕೂರಿಸಿ ಬ್ಯಾಂಕಿಗೆ ಕರೆದುಕೊಂಡು ಹೋಗಿದ್ದಾಳೆ ಅಲ್ಲದೆ ಅಲ್ಲಿನ ಅಧಿಕಾರಿಗಳ ಬಳಿ ತನ್ನ ಚಿಕ್ಕಪ್ಪನಿಗೆ ತೀವ್ರ ಜ್ವರ ಎಂದು ಹೇಳಿಕೊಂಡಿದ್ದಾಳೆ ಆದರೆ ಬ್ಯಾಂಕಿಗೆ ಕರೆತಂದ ಮಹಿಳೆಯ ಅನುಮಾನಾಸ್ಪದ ನಡೆ ಬ್ಯಾಂಕ್ ಸಿಬಂದಿಗಳಲ್ಲಿ ಅನುಮಾನ ಹುಟ್ಟಿಸಿದೆ.
ಬ್ಯಾಂಕ್ ಅಧಿಕಾರಿಗಳು ಸಲ ಪತ್ರಕ್ಕೆ ಸಹಿ ಮಾಡುವಂತೆ ಹೇಳಿದ್ದಾರೆ ಈ ವೇಳೆ ಮಹಿಳೆ ಮೃತ ವ್ಯಕ್ತಿಯನ್ನು ಹಿಡಿದು ದೇಹ ಚಾಲನೆಯಲ್ಲಿದೆ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ತಲೆಯ ಹಿಂಭಾಗದಲ್ಲಿ ಆಧಾರವಾಗಿ ಹಿಡಿದುಕೊಂಡಿದ್ದಾಳೆ ಅಲ್ಲದೆ ಪತ್ರಕ್ಕೆ ಸಹಿ ಹಾಕುವಂತೆ ಮಹಿಳೆ ಹೇಳಿಕೊಂಡಿದ್ದಾಳೆ ಆದರೆ ಸಾಲ ಪತ್ರಕ್ಕೆ ಸಹಿ ಹಾಕಬೇಕಾದ ವ್ಯಕ್ತಿಯ ದೇಹದಲ್ಲಿ ಯಾವುದೇ ಸ್ಪಂದನೆ ವ್ಯಕ್ತವಾಗುತ್ತಿಲ್ಲ ಕೂಡಲೇ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನು ಪರಿಶೀಲನೆ ನಡೆಸಿದಾಗ ವ್ಯಕ್ತಿ ಜೀವಂತವಾಗಿರುವುದು ಅನುಮಾನಗೊಂಡಿದೆ ಆ ಕೂಡಲೇ ಪೊಲೀಸರು ವೈದ್ಯರನ್ನು ಬ್ಯಾಂಕಿಗೆ ಕರೆಸಿದ್ದಾರೆ ಬಳಿಕ ವೈದ್ಯರು ಬಂದು ಪರಿಶೀಲನೆ ನಡೆಸಿದ ವೇಳೆ ವ್ಯಕ್ತಿ ಮೃತಪಟ್ಟು ಕೆಲ ಹೊತ್ತು ಆಗಿರುವುದಾಗಿ ಹೇಳಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಮಹಿಳೆ ತನ್ನ ಮಾತನ್ನು ಬದಲಾಯಿಸಿ ಈ ವ್ಯಕ್ತಿ ನನ್ನ ಚಿಕ್ಕಪ್ಪ ಅವರ ಆರೈಕೆ ನಾನೆ ಮಾಡುತ್ತಿರುವುದು ಅನಾರೋಗ್ಯಕ್ಕೆ ತುತ್ತಾದ ಅವರಿಗೆ ಚಿಕಿತ್ಸೆಯ ಅಗತ್ಯವಿತ್ತು ಹಾಗಾಗಿ ಬ್ಯಾಂಕಿಗೆ ಸಾಲ ಪಡೆಯಲು ಬಂದಿರುವುದಾಗಿ ಹೇಳಿಕೊಂಡಿದ್ದಾಳೆ.
ಸದ್ಯ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಮೃತ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ