Advertisement

County Championship; ಇಂಗ್ಲಿಷ್‌ ಕೌಂಟಿಯಲ್ಲಿ ಅರ್ಷದೀಪ್‌ ಆಟ ಆರಂಭ

10:38 PM Jun 13, 2023 | Team Udayavani |

ಲಂಡನ್‌: ಭಾರತದ ಭರವಸೆಯ ಎಡಗೈ ವೇಗಿ ಅರ್ಷದೀಪ್‌ ಸಿಂಗ್‌ ಇಂಗ್ಲಿಷ್‌ ಕೌಂಟಿಯಲ್ಲಿ ಆಟ ಆರಂಭಿಸಿದ್ದಾರೆ. ಕೆಂಟ್‌ ಕೌಂಟಿಯನ್ನು ಪ್ರತಿನಿಧಿಸುತ್ತಿರುವ ಅವರು ವಿಕೆಟ್‌ ಖಾತೆಯನ್ನೂ ತೆರೆದಿದ್ದಾರೆ.

Advertisement

ಸರ್ರೆ ಕೌಂಟಿಯ ವಿಕೆಟ್‌ ಕೀಪರ್‌ ಬೆನ್‌ ಫೋಕ್ಸ್‌ ಅವರನ್ನು ಎಲ್‌ಬಿಡಬ್ಲ್ಯು ಆಗಿ ಔಟ್‌ ಮಾಡುವ ಮೂಲಕ ಅರ್ಷದೀಪ್‌ ವಿಕೆಟ್‌ ಬೇಟೆ ಆರಂಭಿಸಿದರು.

“ಕೌಂಟಿಯಲ್ಲಿ ಆಡುವುದು ನಿಜಕ್ಕೂ ವಿಶೇಷ ಅನುಭವ. ಇದು ಶ್ರೀಮಂತ ಕ್ರಿಕೆಟ್‌ ಇತಿಹಾಸವುಳ್ಳ ದೇಶ. ಕೆಂಟ್‌ ಶ್ರೇಷ್ಠ ಕೌಂಟಿ. ಇಲ್ಲಿ ಮನೆಯ ವಾತಾವರಣದ ಅನುಭವ ಆಗುತ್ತಿದೆ. ರಾಹುಲ್‌ ದ್ರಾವಿಡ್‌ ಕೆಂಟ್‌ ಕೌಂಟಿ, ಇಲ್ಲಿನ ಕ್ರಿಕೆಟ್‌ ಕ್ಲಬ್‌ ಕುರಿತು ಬಹಳಷ್ಟು ಮಾಹಿತಿ ನೀಡಿದ್ದರು. ಇದು ಕೆಂಟ್‌ ಪರ ಆಡಲು ಸ್ಫೂರ್ತಿ ನೀಡಿತು’ ಎಂಬುದಾಗಿ ಅರ್ಷದೀಪ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next