Advertisement

ಶಾಸಕ-ಸಂಸದರ ತಿಕ್ಕಾಟಕ್ಕೆ ಸೊರಗಿದ ತ್ಯಾಜ್ಯ ಸಂಸ್ಕರಣ ಘಟಕ

03:16 PM Feb 13, 2021 | Team Udayavani |

ಮೈಸೂರು: ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಸ್ವಪ್ರತಿಷ್ಠೆಯಿಂದಾಗಿ ನಗರದ ಸುಯೇಜ್‌ ಫಾರಂ ಸಮಸ್ಯೆ ಜೀವಂತವಾಗಿಯೇ ಉಳಿದಿದ್ದು, ಸ್ಥಳೀಯರು ನಿತ್ಯ ದುರ್ವಾಸನೆಯಲ್ಲೇ ಜೀವನ ನಡೆಸುವಂತಾಗಿದೆ.

Advertisement

ಸಮಸ್ಯೆ ಜಟಿಲ: ನಗರದ ವಿದ್ಯಾರಣ್ಯಪುರಂನ ಸುಯೇಜ್‌ ಫಾರಂನಲ್ಲಿ ಸಂಗ್ರಹ ವಾಗಿರುವ ತ್ಯಾಜ್ಯದಿಂದ ವಿದ್ಯಾರಣ್ಯಪುರಂ, ಜೆ.ಪಿ.ನಗರ ಸೇರಿ ಅದಕ್ಕೆ ಹೊಂದಿಕೊಂಡಂತಿರುವ 5-6 ಬಡಾವಣೆಗಳ ಜನ ಕಳೆದ 35 ವರ್ಷಗಳಿಂದರೋಸಿಹೋಗಿದ್ದು, ಪ್ರತಿನಿತ್ಯ ದುರ್ವಾಸನೆ, ಸೊಳ್ಳೆ ಹಾಗೂ ನೊಣಗಳ ಕಾಟದಿಂದ ನಲುಗಿದ್ದಾರೆ. ಸ್ಥಳೀಯ ಶಾಸಕರ ನಿರಾಸಕ್ತಿಯಿಂದಾಗಿ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.

ಸಮಸ್ಯೆ ಜೀವಂತ: ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸ್ಥಳೀಯರು, ಸಂಘ ಸಂಸ್ಥೆಗಳು ಹಾಗೂ ಮುಖಂಡರು ನೂರಾರು ಪ್ರತಿಭಟನೆ, ಧರಣಿ, ಮನವಿ ನೀಡಿದ್ದರು. ಈ ನಡುವೆ ಕಳೆದ ವರ್ಷ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಸೋಮಣ್ಣ ನೇತೃತ್ವದಲ್ಲಿ ಸಂಸದ ಪ್ರತಾಪ್‌ ಸಿಂಹ ರಾಶಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿ “ಬಯೋ ರೆಮಿಡಿಯೇಶನ್‌’ ಯೋಜನೆ ಆರಂಭಕ್ಕೆ ಟೆಂಡರ್‌ ಹಂತಕ್ಕೆ ಕೊಂಡೊಯ್ದಿದ್ದರು. ಆದರೆ, ಈ ಹೊತ್ತಿಗೆ ಸ್ಥಳೀಯ ಶಾಸಕರು ತಮ್ಮ ಸ್ವ ಹಿತಾಸಕ್ತಿಯಿಂದಾಗಿ ಅಡ್ಡಿಯಾದ ಹಿನ್ನೆಲೆ 35 ವರ್ಷಗಳ ಸಮಸ್ಯೆ ಮತ್ತೆ ಜೀವಂತವಾಗಿ ಉಳಿಯುವಂತಾಗಿದೆ.

ಅಂದಿನ ಉಸ್ತುವಾರಿ ಸಚಿವ ಸೋಮಣ್ಣ ಅವರು ಸುಯೇಜ್‌ ಫಾರಂ  ಸಮಸ್ಯೆ ನೀಗಿಸಲು ತೆಗೆದುಕೊಳ್ಳಬೇಕಿರುವ ಕ್ರಮದ ಕುರಿತು ಚರ್ಚಿಸಲು 2019 ನವೆಂಬರ್‌ನಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದರು. 3 ಲಕ್ಷಕ್ಕೂ ಅಧಿಕ ಟನ್‌ ತ್ಯಾಜ್ಯ ವಿಲೇವಾರಿಯಾಗದೇ ಉಳಿದಿರುವುದನ್ನು ಕಂಡು, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸ್ಥಳದಲ್ಲಿಯೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ, 20 ದಿನದ ಒಳಗೆ ವರದಿ ನೀಡಲು ಸೂಚಿಸಿದ್ದರು.

ಸಚಿವರು ಸೂಚಿಸಿದ್ದರು: ನಂತರ ಪಾಲಿಕೆ ಮೇಯರ್‌, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರ ತಂಡ ಡಿ. 31ರಂದು ನಾಗ್ಪುರದ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಪರಿಶೀಲಿಸಿ, 2020ರ ಜನವರಿಯಲ್ಲಿ ನಡೆದ ಕೆಡಿಪಿ ಸಭೆಗೆ ಸಕಾರಾತ್ಮಕವಾದ ವರದಿ ನೀಡಿತ್ತು. ಬಳಿಕ ಸಭೆಯಲ್ಲಿ ನಾಗ್ಪುರ ಮೂಲದ ಝಿಗ್ಮಾಕಂಪನಿ ತ್ಯಾಜ್ಯ ವಿಲೇವಾರಿಗೆ ಮುಂದೆ ಬಂದಿತ್ತು. ಬಳಿಕ ಟೆಂಡರ್‌ ಮೂಲಕ ಯೋಜನೆಗೆ ಚಾಲನೆ ನೀಡಲು ಸಚಿವರು ಸೂಚಿಸಿದ್ದರು.

Advertisement

ಈ ಎಲ್ಲಾ ಬೆಳವಣಿಗೆ ನಡೆದ ನಂತರ ಸ್ಥಳೀಯ ಶಾಸಕರು ತಮ್ಮ ಗಮನಕ್ಕೆ ತಾರದೆ ಯೋಜನೆ ಕೈಗೆತ್ತಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ,ತ್ಯಾಜ್ಯ ಸಂಸ್ಕರಣೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಪಟ್ಟು.

ನಗರದ ಸುಯೇಜ್‌ ಫಾರಂನಲ್ಲಿ ಸಂಗ್ರಹವಾಗಿರುವ ಕಸವನ್ನು ಬಯೋ ರೆಮಿಡಿಯೇಶನ್‌ ಮೂಲಕ ಸಂಸ್ಕರಿಸುವಸಂಬಂಧ ಟೆಂಡರ್‌ ಪ್ರಕ್ರಿಯೆ ಹಾಗೂಅನುದಾನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆಪತ್ರ ಬರೆಯಲಾಗಿದೆ. ಸರ್ಕಾರದಿಂದ ಆದೇಶಬಂದಾಕ್ಷಣ ಕಾರ್ಯೋನ್ಮುಖರಾಗುತ್ತೇವೆ. ಡಾ. ಡಿ.ಜಿ.ನಾಗರಾಜ್‌, ಆರೋಗ್ಯಾಧಿಕಾರಿ ನಗರಪಾಲಿಕೆ ಮೈಸೂರ

ಸಚಿವ ಸೋಮಣ್ಣ, ಸಂಸದರು ಕಸ ವಿಲೇವಾರಿಗೆ ಯೋಜನೆ ರೂಪಿಸಿದ್ದರು. ಆದರೆ, ಅದಕ್ಕೆ ಸ್ಥಳೀಯಶಾಸಕರು ಅಡ್ಡಗಾಲು ಹಾಕಿರುವ ಪರಿಣಾಮ ಸಮಸ್ಯೆ ಹಾಗೆ ಉಳಿದುಕೊಂಡಿದೆ. ಈಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಟೆಂಡರ್‌ ಪ್ರಕ್ರಿಯೆ ಆರಂಭಿಸಿ ಸಮಸ್ಯೆ ಬಗೆಹರಿಸಲಿ. ಎಂ.ಕೆ.ಸೋಮಶೇಖರ್‌, ಮಾಜಿ ಶಾಸಕ

ಏನಿದು ಯೋಜನೆ? :

ಸಂಗ್ರಹವಾಗಿರುವ ತ್ಯಾಜ್ಯವನ್ನು ಬಯೋರೆಮಿಡಿಯೇಶನ್‌ ಪದ್ಧತಿಯಿಂದ ಸಂಸ್ಕರಿಸಲಾಗುತ್ತದೆ. ಇದರಲ್ಲಿ ಬರುವ ಕಟ್ಟಡತ್ಯಾಜ್ಯವನ್ನು ಸಿಮೆಂಟ್‌ ಫ್ಯಾಕ್ಟರಿಗೆ ಕಳುಹಿಸಿ ಉಳಿದದ್ದನ್ನು ಇಳಿಜಾರು,ಗುಂಡಿ ಇರುವ ಪ್ರದೇಶಗಳಿಗೆ ಹಾಕಲಾಗುತ್ತದೆ. ಉಳಿದ ಪ್ಲಾಸ್ಟಿಕ್‌ ಅನ್ನುಮರು ಬಳಕೆಗೆ ಹಾಗೂ ತ್ಯಾಜ್ಯವನ್ನು ಗೊಬ್ಬರವಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಯೋಜನೆ ಈಗಾಗಲೇ ನಾಗ್ಪುರದಲ್ಲಿನಡೆಯುತ್ತಿದ್ದು, ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಮಾಡುವಲ್ಲಿ ಯಶಸ್ವಿಯಾಗಿದೆ.ಸುಯೇಜ್‌ ಫಾರಂನಲ್ಲಿ ಸದ್ಯಕ್ಕೆ 2 ಲಕ್ಷಕ್ಕೂ ಅಧಿಕ ಟನ್‌ನಷ್ಟು ಕಸ ಸಂಗ್ರಹವಾಗಿದ್ದು, ನಾಗ್ಪುರ ಮಾದರಿಯಲ್ಲಿ ಕಸ ಸಂಸ್ಕರಣೆಗೆ 1 ವರ್ಷ ಅವಧಿ ಬೇಕಾಗಿದೆ. ಇದಕ್ಕೆ 16 ರಿಂದ 18 ಕೋಟಿ ರೂ. ಹಣ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next