Advertisement
ಆಯ್ಕೆಗಾರರ ಹಸ್ತಕ್ಷೇಪ ಹಾಗೂ ಪಕ್ಷಪಾತ ಧೋರಣೆ, ಅರ್ಹರಲ್ಲದ ಆಟಗಾರರನ್ನು ನೇಮಿಸುವ ಕಾರಣದಿಂದ ಬೇಸತ್ತು ತಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಜಾಫರ್ ಉತ್ತರಾಖಂಡ ಕ್ರಿಕೆಟ್ ಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಆದರೆ ವಾಸಿಮ್ ಜಾಫರ್ ಆರೋಪವನ್ನು ಉತ್ತಾರಾಖಂಡ ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ. “ಕೋಚ್ ಆಗಿ ನೇಮಕಗೊಂಡ ದಿನದಿಂದಲೇ ಜಾಫರ್‌ಗೆ ಎಲ್ಲ ರೀತಿಯ ಬೆಂಬಲ ನೀಡಲಾಗಿತ್ತು. ಆದರೆ ಅವರು ಆಯ್ಕೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ಜತೆಗೆ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ತಂಡಕ್ಕೆ ಸಮರ್ಥ ಮಾರ್ಗದರ್ಶನ ನೀಡುವಲ್ಲಿಯೂ ವಿಫಲ ರಾಗಿದ್ದರು. ಆಡಿದ 5 ಪಂದ್ಯಗಳಲ್ಲಿ ಕೇವಲ ಒಂದನ್ನಷ್ಟೇ ಜಯಿಸಿದೆ. ತನ್ನ ತಪ್ಪನ್ನು ಮರೆಮಾಚುವ ಕಾರಣ ಜಾಫರ್ ಆಡಳಿತ ಮಂಡಳಿ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಸಿಯುಎ ಕಾರ್ಯದರ್ಶಿ ಮಹಿಮ್ ವರ್ಮ ಹೇಳಿದ್ದಾರೆ. ಇದನ್ನೂ ಓದಿ:ಹೆಬ್ಬೆರಳಿನ ಮೂಳೆ ಮುರಿತ : ಟೆಸ್ಟ್ ಸರಣಿಯಿಂದ ಜಡೇಜ ಔಟ್