Advertisement

ನಾನು ಓದಿಲ್ಲ ಎಂದು ಹೇಳಿ ನಂತರ ಟಾಪರ್ ಆಗುವ ಮಕ್ಕಳಂತೆ ಕಿವೀಸ್ ತಂಡ..! ವಾಸಿಂ ಜಾಫರ್

01:17 PM Nov 11, 2021 | Team Udayavani |

ಮುಂಬೈ: ಐಸಿಸಿ ಟಿ20 ವಿಶ್ವಕಪ್ ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆ ರೋಚಕ ಜಯ ಸಾಧಿಸಿ ಫೈನಲ್ ಪ್ರವೇಶ ಮಾಡಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ಬುಧವಾರ ನಡೆದ ರೋಚಕ ಪಂದ್ಯವನ್ನು ವೀಕ್ಷಿಸಿದ ಭಾರತೀಯ ಕ್ರಿಕೆಟಿಗರು ಅದೊಂದು ಅದ್ಭುತ ಆಟ ಎಂದು ಉದ್ಗರಿಸಿದ್ದಾರೆ.

Advertisement

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎಲ್ಲ ಬ್ಯಾಟಿಂಗ್ ಒತ್ತಡವನ್ನು ಯಶಸ್ವಿಯಾಗಿ ಎದುರಿಸಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ, ಟಿ20 ವಿಶ್ವಕಪ್‌ನ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತು.

ಇದನ್ನೂ ಓದಿ:ಫಸ್ಟ್ ನೈಟ್-ರೊಮ್ಯಾನ್ಸ್ ಬಗ್ಗೆ ಹೇಳಿ, ನೆಟ್ಟಿಗರಿಂದ ಟ್ರೋಲ್ ಆದ ರಚಿತಾ ರಾಮ್

ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, ‘ನ್ಯೂಜಿಲ್ಯಾಂಡ್ ತಂಡವು ತರಗತಿಯಲ್ಲಿ ‘ಬ್ರೋ ನಾನು ಈ ಪರೀಕ್ಷೆಗೆ ಓದಿಲ್ಲ’ ಎಂದು ಹೇಳಿ ನಂತರ ಟಾಪರ್‌ ಗಳಲ್ಲಿ ಒಬ್ಬನಾಗುವ ಮಗುವಿನಂತೆ’ ಎಂದು ಚಟಾಕಿ ಹಾರಿಸಿದ್ದಾರೆ.

Koo App

ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಚೇತೇಶ್ವರ್ ಪೂಜಾರ, ‘ಎಂತಹ ಆಟ! ಪಂದ್ಯವು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಿರುಗಿತು, ಆದರೆ ಸೂಪರ್ ಪ್ರಭಾವಶಾಲಿ ಕಿವೀಸ್ ಶಾಂತವಾಗಿತ್ತು ಮತ್ತು ಪ್ರಭಾವಶಾಲಿ ಒತ್ತಡದಲ್ಲಿ ಆಡಿದರು. 2ನೇ ಸೆಮಿಫೈನಲ್‌ಗಾಗಿ ಕಾತುರನಾಗಿದ್ದೇನೆ’ ಎಂದು ಹೇಳಿದ್ದಾರೆ.

Koo App

What a game of cricket!

The match swung from one side to the other, but the super impressive Kiwis kept calm and played impressive cricket under pressure.

Cant wait for the 2nd semi finals!

#EngVsNz #t20worldcup #sabsebadastadium

Cheteshwar Pujara (@cheteshwarpujara) 10 Nov 2021

ಕ್ರಿಕೆಟಿಗ ರಾಬಿನ್ ಉತ್ತಪ್ಪ , ‘ಅದ್ಭುತ 1ನೇ ಸೆಮಿಫೈನಲ್! ನ್ಯೂಜಿಲ್ಯಾಂಡ್ ಅಸಮಾಧಾನದಿಂದ ಆಡಬಹುದು ಎಂದು ನಾನು ಭಾವಿಸಿದ್ದೆ. ಆದರೆ, ಅವರು ತಮ್ಮ ಶೈಲಿಯಲ್ಲಿ ಆಡಿದರು! ಮಿಚೆಲ್‌ನಿಂದ ಪಂದ್ಯದ ಗೆಲುವಿನ ಬಾಗಿಲು ತಟ್ಟಿತು, ಆದರೆ ನೀಶಮ್ ಅವರ ಆಟದ ಮೌಲ್ಯವನ್ನು ಕಡಿಮೆ ಅಂದಾಜು ಮಾಡಲಾಗದು. ನಿಜವಾಗಿಯೂ ಅರ್ಹರು!’ ಎಂದಿದ್ದಾರೆ.

Koo App

A brilliant 1st semi final!
I thought NZ might pull off an upset, and they did so in style!
Match winning knock by Mitchell, but don’t underestimate the value of the knock by Neesham.

Truly well deserved!

#t20worldcup #NzVsEng #semifinals
#sabsebadastadium

Robin Uthappa (@robinuthappa) 10 Nov 2021

ಸಂಜಯ್ ಮಂಜೇಕರ್

ಕ್ರಿಕೆಟಿಗ ಹನುಮಾನ್ ವಿಹಾರಿ

ಕ್ರಿಕೆಟಿಗ ಪಿಯೂಷ್ ಚಾವ್ಲಾ

Advertisement

Udayavani is now on Telegram. Click here to join our channel and stay updated with the latest news.

Next