Advertisement

ಸಚಿನ್ ಮತ್ತು ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಅತ್ಯುತ್ತಮ? ವಾಸಿಂ ಅಕ್ರಮ್ ಹೇಳಿದ್ದಿಷ್ಟು

03:34 PM May 14, 2020 | keerthan |

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ಅದ್ಭುತ ಆಟಗಾರರು. ಸಚಿನ್ ತೆಂಡೂಲ್ಕರ್ ದಾಖಲೆಗಳನ್ನು ನಿರ್ಮಿಸಿದರೆ, ವಿರಾಟ್ ಅವುಗಳನ್ನು ಒಡೆದು ಹಾಕಿ ತನ್ನ ಹೆಸರಿಗೆ ಬರದುಕೊಳ್ಳುತ್ತಿದ್ದಾರೆ. ಈ ಉಭಯ ಆಟಗಾರರಲ್ಲಿ ಯಾರು ಅತ್ಯುತ್ತಮ ಎನ್ನುವ ಚರ್ಚೆ ಸದಾ ನಡೆಯುತ್ತಿರುತ್ತದೆ.

Advertisement

ಸದ್ಯ ಕಮೆಂಟೇಟರ್ ಆಕಾಶ್ ಚೋಪ್ರಾ ಅವರ ಜೊತೆಗೆ ಸಂದರ್ಶನದಲ್ಲಿ ಮಾತನಾಡುತ್ತಾ ಪಾಕಿಸ್ಥಾನದ ಮಾಜಿ ನಾಯಕ ವಾಸಿಂ ಅಕ್ರಮ್ ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಇಬ್ಬರೂ ವಿಭಿನ್ನ ರೀತಿಯ ಆಟಗಾರರು. ವಿರಾಟ್ ಕೊಹ್ಲಿ ಒಬ್ಬ ವ್ಯಕ್ತಿಯಾಗಿ ಮತ್ತು ಬ್ಯಾಟ್ಸಮನ್ ಆಗಿ ಹೆಚ್ಚು ಆಕ್ರಮಣಕಾರಿಯಾಗಿದ್ದಾರೆ. ಆದರೆ ಸಚಿನ್ ತೆಂಡೂಲ್ಕರ್ ತುಂಬಾ ಶಾಂತವಾಗಿ ಇರುತ್ತಾರೆ. ಇವರಿಬ್ಬರ ದೈಹಿಕ ಭಾಷೆಯೂ ವಿಭಿನ್ನವಾಗಿರುತ್ತದೆ ಎಂದು ಅಕ್ರಮ್ ಹೇಳಿದ್ದಾರೆ.

ಒಂದು ವೇಳೆ ನಾನು ಸಚಿನ್ ಗೆ ಸ್ಲೆಡ್ಜ್ ಮಾಡಿದರೆ ಆತ ಇನ್ನೂ ಗಟ್ಟಿ ಮನಸ್ಸಿನಿಂದ ಏಕಗೃತೆಯಿಂದ ಆಡುತ್ತಾರೆ. ಆದರೆ ವಿರಾಟ್ ಕೋಪಗೊಳ್ಳುತ್ತಾರೆ, ಆಕ್ರಮಣಕಾರಿಯಾಗುತ್ತಾರೆ. ಆಗ ಔಟ್ ಮಾಡುವ ಅವಕಾಶ ಹೆಚ್ಚು ಎಂದು ಅಕ್ರಮ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next