Advertisement

6 ಕೋ. ಜನರು ಕಡು ಬಡತನದ ಕೂಪಕ್ಕೆ

12:52 PM May 21, 2020 | sudhir |

ವಾಷಿಂಗ್ಟನ್‌: ಕೋವಿಡ್‌-19ರ ಪರಿಣಾಮವಾಗಿ ಜಾಗತಿಕ ಆರ್ಥಿಕತೆ ಪ್ರಸಕ್ತ ಸಾಲಿನಲ್ಲಿ ಶೇ. 5ರಷ್ಟು ಕುಸಿಯಲಿದೆ ಮತ್ತು ವಿಶ್ವಾದ್ಯಂತ 6 ಕೋಟಿ ಜನರು ಕಡು ಬಡತನಕ್ಕೆ ತಳ್ಳಲ್ಪಡಲಿದ್ದಾರೆ ಎಂದು ವಿಶ್ವ ಬ್ಕಾಂಕ್‌ ಎಚ್ಚರಿಸಿದೆ.

Advertisement

ಕೋವಿಡ್‌ನಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಕೆಲಸ ಹಾಗೂ ವ್ಯಾಪಾರವನ್ನು ಕಳಕೊಂಡಿದ್ದಾರೆ. ಬಡ ರಾಷ್ಟ್ರಗಳು ಇದರಿಂದ ಗರಿಷ್ಠ ಪೀಡಿತವಾಗಿವೆ. ವಿಶ್ವಾದ್ಯಂತ ಆರೋಗ್ಯ ವ್ಯವಸ್ಥೆ ಮೇಲೆ ಭಾರೀ ಒತ್ತಡ ಬಿದ್ದಿದೆ ಎಂದು ವಿಶ್ವಬ್ಯಾಂಕ್‌ ಅಧ್ಯಕ್ಷ ಡೇವಿಡ್‌ ಮಲ್‌ಪಾಸ್‌ ಹೇಳಿದ್ದಾರೆ.ನಮ್ಮ ಅಂದಾಜಿನ ಪ್ರಕಾರ 6 ಕೋಟಿಯಷ್ಟು ಮಂದಿ ಕಡು ಬಡವರಾಗಲಿದ್ದಾರೆ.

ಇದರಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನ ನಿಟ್ಟಿನಲ್ಲಿ ಸಾಧಿಸಲಾದ ಎಲ್ಲ ಪ್ರಗತಿ ಅಳಿದುಹೋಗಲಿದೆ. ಜಾಗತಿಕ ಅರ್ಥವ್ಯವಸ್ಥೆ ಹಲವು ವರ್ಷಗಳ ಕಾಲ ನರಳಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೋರ್ವ ದಿನಕ್ಕೆ 1.90 ಡಾಲರ್‌ಗಿಂತ ಕಡಿಮೆ ದುಡ್ಡಲ್ಲಿ ಜೀವಿಸುವುದನ್ನು ಕಡು ಬಡತನವೆಂದು ವಿಶ್ವ ಬ್ಯಾಂಕ್‌ ವ್ಯಾಖ್ಯಾನಿಸುತ್ತದೆ.

ವಿಶ್ವಬ್ಯಾಂಕ್‌ ಬಡರಾಷ್ಟ್ರಗಳಿಗೆ 160 ಶತಕೋಟಿ ಡಾಲರ್‌ ಅನುದಾನ ಹಾಗೂ ರಿಯಾಯಿತಿ ಬಡ್ಡಿದರದ ಸಾಲಗಳನ್ನು ಕೊಡಲು ಮುಂದಾಗಿದೆ. ವಿಶ್ವದ ಶೇ. 70ರಷ್ಟು ಜನಸಂಖ್ಯೆ ಹೊಂದಿರುವ 100 ರಾಷ್ಟ್ರಗಳಿಗೆ ಈಗಾಗಲೇ ತುರ್ತು ಹಣಕಾಸು ನೆರವು ನೀಡಲಾಗಿದೆ ಎಂದು ಮಲ್‌ಪಾಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next