Advertisement

Washington: ತ್ರಿವಳಿ ಕೊಲೆ- ಭಾರತೀಯ ವಿದ್ಯಾರ್ಥಿ ಬಂಧನ

08:22 PM Nov 29, 2023 | Pranav MS |

ವಾಷಿಂಗ್ಟನ್‌: ಅಮೆರಿಕದ ನ್ಯೂಜೆರ್ಸಿಯಲ್ಲಿ ತನ್ನದೇ ಕುಟುಂಬದ ಮೂವರನ್ನು ಕೊಲೆಗೈದಿರುವ ಆರೋಪದ ಮೇರೆಗೆ ಭಾರತೀಯ ಮೂಲದ 23 ವರ್ಷದ ವಿದ್ಯಾರ್ಥಿಯನ್ನು ಬಂಧಿಸಿ, ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ದಕ್ಷಿಣ ಪ್ಲೇನ್‌ಫೀಲ್ಡ್‌ನ ನಿವಾಸಿ ಓಂ ಬ್ರಹ್ಮ ಭಟ್‌ ತನ್ನ ಅಜ್ಜ ದಿಲೀಪ್‌ ಕುಮಾರ್‌ ಬ್ರಹ್ಮ ಭಟ್‌ (72), ಅಜ್ಜಿ ಬಿಂದು ಬ್ರಹ್ಮ ಭಟ್‌ (72) ಹಾಗೂ ಚಿಕ್ಕಪ್ಪ ಯಶ್‌ ಕುಮಾರ್‌ ಬ್ರಹ್ಮ ಭಟ್‌ (38) ಅವರನ್ನು ಬೆಳಗ್ಗೆ 9 ಗಂಟೆ ಸುಮಾರಿಗೆ ಗುಂಡುಹಾರಿಸಿ ಹತ್ಯೆಗೈದಿದ್ದಾರೆ.

Advertisement

ಅಕ್ಕಪಕ್ಕದ ನಿವಾಸಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಆರೋಪಿಯನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಭಾರತದ ಗುಜರಾತ್‌ ಮೂಲದವನಾದ ಓಂ ಬ್ರಹ್ಮ ಭಟ್‌ ಕೆಲ ತಿಂಗಳ ಹಿಂದಷ್ಟೇ ನ್ಯೂಜೆರ್ಸಿಗೆ ಅಜ್ಜ-ಅಜ್ಜಿಯರೊಂದಿಗಿರಲು ತೆರಳಿದ್ದನು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next