Advertisement

ಗಾಬ್ಬಾದಲ್ಲಿ ದಾಖಲೆ ಬರೆದ ಶಾರ್ದೂಲ್ ಠಾಕೂರ್- ವಾಷಿಂಗ್ಟನ್ ಸುಂದರ್

11:23 AM Jan 17, 2021 | Team Udayavani |

ಬ್ರಿಸ್ಬೇನ್: ಇಲ್ಲಿನ ಗಾಬ್ಬಾ ಅಂಗಳದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಶಾರ್ದೂಲ್ ಠಾಕೂರ್- ವಾಷಿಂಗ್ಟನ್ ಸುಂದರ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

Advertisement

ಮೊದಲ ಪಂದ್ಯವಾಡುತ್ತಿರುವ ವಾಷಿಂಗ್ಟನ್ ಮತ್ತು ಎರಡನೇ ಪಂದ್ಯವಾದರೂ ಟೆಸ್ಟ್ ನಲ್ಲಿ ಮೊದಲ ಸಲ ಬ್ಯಾಟಿಂಗ್ ಅವಕಾಶ ಪಡೆದ ಶಾರ್ದೂಲ್ ತಮ್ಮ ಅವಕಾಶವನ್ನು ಸದುಪಯೋಗ ಮಾಡಿಕೊಂಡರು. 186 ರನ್ ಗೆ ಆರನೇ ವಿಕೆಟ್ ಪತನವಾದಾಗ ಕ್ರೀಸ್ ನಲ್ಲಿ ಒಂದಾದ ಈ ಜೋಡಿ ಶತಕದ ಜೊತೆಯಾಟವಾಡಿದರು.

ವಾಷಿಂಗ್ಟನ್ ಮತ್ತು ಶಾರ್ದೂಲ್ ಠಾಕೂರ್ ಇಬ್ಬರೂ ತಮ್ಮ ಚೊಚ್ಚಲ ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಇದಲ್ಲದೆ ಸುಮಾರು 30 ವರ್ಷಗಳ ಹಿಂದಿನ ದಾಖಲೆಯೊಂದನ್ನು ಈ ಜೋಡಿ ಅಳಿಸಿ ಹಾಕಿತು.

ಇದನ್ನೂ ಓದಿ:ಗಾಯಾಳುಗಳ ಸಂಖ್ಯೆ ಏರಲು ಕಾರ್ಯೋತ್ತಡವೇ ಕಾರಣ!

ಗಾಬ್ಬಾ ಅಂಗಳದಲ್ಲಿ ಏಳನೇ ವಿಕೆಟ್ ಗೆ ಅತಿ ಹೆಚ್ಚು ರನ್ ಜೊತೆಯಾಟವಾಡಿದ ಭಾರತದ ಜೋಡಿ ಎಂಬ ನೆಗಳ್ತೆಗೆ ಇವರು ಪಾತ್ರರಾದರು. 1991ರಲ್ಲಿ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ 58 ರನ್ ಜೊತೆಯಾಟವಾಡಿದ್ದರು. 2014ರಲ್ಲಿ ಧೋನಿ ಮತ್ತು ಅಶ್ವಿನ್ 57 ರನ್ ಜೊತೆಯಾಟವಾಡಿದ್ದರು.

Advertisement

98 ಓವರ್ ಗಳ ಅಂತ್ಯಕ್ಕೆ ಭಾರತ ತಂಡ ಆರು ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿದೆ. ಶಾರ್ದೂಲ್ ಠಾಕೂರ್ 58 ರನ್ ಮತ್ತು ವಾಷಿಂಗ್ಟನ್ ಸುಂದರ್ 53 ರನ್ ಗಳಿಸಿ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next