ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್ ಕೂಟ ಇನ್ನು ಕೆಲವೇ ವಾರಗಳಲ್ಲಿ ಪುನರಾರಂಭವಾಗಲಿದೆ. ತಂಡಗಳು ಈಗಾಗಲೇ ಯುಎಇಗೆ ಹೊರಟಿದೆ. ಅಭ್ಯಾಸದಲ್ಲಿ ತೊಡಗಿದೆ.
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲವು ಪ್ರಮುಖ ವಿದೇಶಿ ಆಟಗಾರರ ಅನುಪಸ್ಥಿತಿಯ ಕಾರಣ ಹೊಸ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಇದೀಗ ಪ್ರಮುಖ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೂಡಾ ಹೊರಬಿದ್ದಿದ್ದು, ಆರ್ ಸಿಬಿ ಗೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ:ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕನ್ನಡಿಗ ಸ್ಟುವರ್ಟ್ ಬಿನ್ನಿ
ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಪ್ರಥಮ ದರ್ಜೆ ಅಭ್ಯಾಸ ಪಂದ್ಯದ ವೇಳೆ ವಾಷಿಂಗ್ಟನ್ ಸುಂದರ್ ಅವರು ಕೈ ಬೆರಳಿನ ಮುರಿತಕ್ಕೆ ಒಳಗಾಗಿದ್ದರು. ಅಭ್ಯಾಸ ಪಂದ್ಯದಲ್ಲಿ ಅವರು ಭಾರತದ ವಿರುದ್ಧ ಕೌಂಟಿ ಸೆಲೆಕ್ಟ್ ಇಲೆವೆನ್ ಪರ ಆಡುತ್ತಿದ್ದಾಗ ಮೊಹಮ್ಮದ್ ಸಿರಾಜ್ ಅವರ ಬೌನ್ಸರ್ ಬೆರಳಿಗೆ ತಾಗಿ ಗಾಯಗೊಂಡಿದ್ದರು.
ವಾಷಿಂಗ್ಟನ್ ಸುಂದರ್ ಸದ್ಯ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅವರು ಈ ಬಾರಿಯ ಕೂಟದಿಂದ ಹೊರಬಿದ್ದಿದ್ದಾರೆ. ಸುಂದರ್ ಬದಲಿಗೆ ಪ.ಬಂಗಾಳದ ಬೌಲರ್ ಆಕಾಶ್ ದೀಪ್ ಅವರನ್ನು ಆರ್ ಸಿಬಿ ಸೇರಿಸಿಕೊಂಡಿದೆ.